ಸಂಘರ್ಷಕ್ಕಿಳಿಯದಂತೆ ಮರಾಠಿಗರು-ಕನ್ನಡಿಗರಲ್ಲಿ ಅಲೋಕ್‍ ಕುಮಾರ್ ಮನವಿ

Social Share

ಬೆಳಗಾವಿ,ಡಿ.24- ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಪರಸ್ಪರ ಕೆಸರೆರಚಾಡದಂತೆ ಮರಾಠಿ ಮತ್ತು ಕನ್ನಡ ನಾಯಕರಿಗೆ ಎಡಿಜಿಪಿ ಅಲೋಕ್‍ಕುಮಾರ್ ಅವರು ಮನವಿ ಮಾಡಿದರು.

ಇಲ್ಲಿನ ಟಿಳಕವಾಡಿ ಠಾಣೆಯಲ್ಲಿ ಸಂಧಾನ ಮತ್ತು ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರದ ನಿರ್ದೇಶನದಂತೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಪರಸ್ಪರ ಸಂಘರ್ಷ ನಡೆಸಬಾರದು. ಕೆಸರೆರಚಾಟ ಮಾಡದಂತೆ ಮನವಿ ಮಾಡಿದರು.

ಸುಪ್ರೀಂಕೋರ್ಟ್ ತೀರ್ಪನ್ನು ನಾವು ಆಲಿಸಿ ಅದರಂತೆ ನಡೆದುಕೊಳ್ಳಬೇಕಾಗಿರುವುದು ಸಾಂವಿಧಾನಿಕ ಧರ್ಮ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹೆಣಗಾಡುತ್ತಲೇ ಇರುತ್ತದೆ. ಬೆಳಗಾವಿ ನಗರ ಮತ್ತು ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಮಂಡ್ಯದಲ್ಲಿ ಬಿಜೆಪಿ ಸಮಾವೇಶ : ಡಿ.30ಕ್ಕೆ ಅಮಿತ್ ಶಾ ಆಗಮನ

ಕೇಂದ್ರ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ನಮ್ಮ ಹೋರಾಟವೇ ಹೊರತು. ಕನ್ನಡಿಗರ ವಿರುದ್ದ ಅಲ್ಲ ಎಂದು ಎಂಇಎಸ್ ನಾಯಕರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ನಮ್ಮದು ನೆಲಜಲ ಮತ್ತು ಭಾಷಾ ಸ್ವಾಭಿಮಾನದ ಹೋರಾಟವೇ ಹೊರತು ಮರಾಠಿಗರ ವಿರುದ್ಧವಲ್ಲ ಎಂದು ಕನ್ನಡ ನಾಯಕರು ಪ್ರತಿಪಾದಿಸಿದರು.

ಕೋವಿಡ್ ಗಾಬರಿಬೇಡ, ಎಚ್ಚರಿಕೆ ಇರಲಿ : ಸಿಎಂ ಬೊಮ್ಮಾಯಿ

ಶಾಂತಿ ಸಭೆ ನಡೆಸಿದ ಎಡಿಜಿಪಿ ಯವರು ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ನಿರ್ದೇಶನ ನೀಡಿದರು. ಪೊಲೀಸ್ ಆಯುಕ್ತರಾದ ಬೋರಲಿಂಗಯ್ಯ, ಕರವೇ ಮುಖಂಡರಾದ ದೀಪಕ್ ಗುಡಗನಗಟ್ಟಿ, ಗಣೇಶ್ ರೋಕಡೆ, ಮಾದೇವ್ ತಳವಾರ, ಎಂಇಎಸ್ ಮುಖಂಡರಾದ ದೀಪಕ್ ದಳವಿ, ಮನೋಹರ್ ಕಿಣೆಕರ, ವಿಕಾಸ್ ಕಲಘಟಗಿ ಮತ್ತಿತರರು ಉಪಸ್ಥಿತರಿದ್ದರು.

borderissue, #KRV, #MES, #boderdispute, #Karnataka, #Maharashtra, #ADGP, #AlokKumar,

Articles You Might Like

Share This Article