ಜಮ್ಮು, ಜು.12- ಭಾರೀ ಮಳೆ ಅನಾವುತಗಳಿಂದ ಚೇತರಿಸಿಕೊಂಡ ಬಳಿಕ ಅಮರನಾಥ ಯಾತ್ರೆ ನಿನ್ನೆಯಿಂದ ಶುರುವಾಗಿದ್ದು, ಇಂದು ಬೆಳಗ್ಗೆ 13ನೇ ತಂಡದಲ್ಲಿ 7 ಸಾವಿರ ಭಕ್ತರು ಪವಿತರ ಗುಹೆಯ ದರ್ಶನದತ್ತ ಪ್ರಯಾಣಿಸಿದ್ದಾರೆ.
ಭಾರೀ ಬಿಗಿ ಭದ್ರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಯಾತ್ರೆ ಶುರುವಾಗಿದ್ದು, ಪಹ್ಲಗಾಮ್ ಮತ್ತು ಬ್ಲಾತಲ್ನ ಟ್ವೀನ್ ಬೇಸ್ ಕ್ಯಾಂಪ್ನಿಂದ ಒಟ್ಟು 265 ವಾಹನಗಳಲ್ಲಿ 7,107 ಮಂದಿ ಯಾತ್ರೆ ನಡೆಸಿದ್ದಾರೆ. ಎರಡು ಪ್ರತ್ಯೇಕ ಮುಂಗಾವಲು ಪಡೆಗಳು ಯಾತ್ರಿಕರಿಗೆ ಬೆಂಬಲವಾಗಿವೆ.
ಬ್ಲಾತ್ಲಾ ಬೇಸ್ ಕ್ಯಾಂಪ್ನಿಂದ 1949 ಯಾತ್ರಿಕರು 98 ವಾಹನಗಳಲ್ಲಿ ಮುಂಜಾನೆ 3.40ರ ವೇಳೆಗೆ ಪ್ರಯಾಣ ಆರಂಭಿಸಿದರೆ, 4.30ರ ಸುಮಾರಿಗೆ 5158 ಯಾತ್ರಿಕರು 175 ವಾಹನಗಳಲ್ಲಿ ನ್ಯೂವಾನ್ ಪಹ್ಲಗಾಮ್ ಕ್ಯಾಂಪ್ನಿಂದ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ 76,662 ಭಕ್ತರು ಭಘವತಿ ನಗರ್ ಬೆಸ್ ಕ್ಯಾಂಪ್ನ್ಲ್ಲಿ ಉಳಿದಿದ್ದಾರೆ. ಜೂನ್ 29ರಿಂದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗೌರ್ನರ್ ಮನೋಜ್ ಶಿನ್ಹಾ ಮೊದಲ ಬಾರಿಗೆ ಯಾತ್ರೆಗೆ ಹಸಿರು ನಿಶಾನೆ ತೋರಿಸಿದರು. 43 ದಿನಗಳ 3880 ಮೀಟರ್ ಎತ್ತರದ ಅಮರನಾಥ್ ಯಾತ್ರೆಗೆ ಸಾವಿರಾರು ಯಾತ್ರಿಕರು ಆಗಮಿಸಿದ್ದಾರೆ.
ದಕ್ಷಿಣ ಕಾಶ್ಮೀರದ ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ್ ಯಾತ್ರೆಗೆ ಎರಡು ಮಾರ್ಗಗಳಿದ್ದು, ಅನಂತನಾಗ್ ಜಿಲ್ಲೆಯ ನೂವಾನ್-ಪಹ್ಲಗಾಮ್ ಕಡೆಯಿಂದ 48 ಕಿಲೋ ಮೀಟರ್ ದೂರದ ಒಂದು ಮಾರ್ಗವಾಗಿದ್ದು, ಗಂರ್ಡೆಬಾಲ್ ಜಿಲ್ಲೆಯ ಬ್ಲಾತ್ಲ್ ಭಾಗದಿಂದ 14 ಕಿಲೋ ಮೀಟರ್ ಮತ್ತೊಂದು ಮಾರ್ಗವಿದೆ.
ಈವರೆಗೂ 1.20 ಲಕ್ಷ ಯಾತ್ರಿಕರು ಅಮರನಾಥ್ ಗುಹೆಯ ದರ್ಶನ ಪಡೆದಿದ್ದಾರೆ. ಶ್ರಾವಣ ಪೂರ್ಣಿಮೆಯ ಆಗಸ್ಟ್ 11ರಂದು ಯಾತ್ರೆ ಅಂತ್ಯಗೊಳ್ಳಲಿದೆ. ಕಳೆದ ವಾರ ಭಾರೀ ಮಳೆಯಿಂದ ದಿಡೀರ್ ಪ್ರವಾಹ ಸೃಷ್ಟಿಯಾಗಿ 16 ಮಂದಿ ಮೃತಪಟ್ಟಿದ್ದರು. 105 ಮಂದಿ ಗಾಯಗೊಂಡು, 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದರು.