ಜುಲೈ 23 ಮತ್ತು 24 ರಂದು ಪ್ರೈಮ್ ಡೇ 2022 ರಲ್ಲಿ ‘ಖುಷಿ ಸಂಶೋಧನೆ’ಗೆ ಪ್ರೈಮ್‌ ಸದಸ್ಯರು ಸಿದ್ಧ

Social Share

ಅಮೆಜಾನ್‌ ಇಂಡಿಯಾದ ಪ್ರೈಮ್‌ ಮತ್ತು ಫುಲ್‌ಫಿಲ್ಮೆಂಟ್‌ ಅನುಭವದ ನಿರ್ದೇಶಕ ಅಕ್ಷಯ್‌ ಸಾಹಿ ಅವರಿಂ:
ಪ್ರಶ್ನೆ: ಈ ವರ್ಷದ ಪ್ರೈಮ್‌ ಡೇ ಇಂದ ಸದಸ್ಯರು ಏನನ್ನು ನಿರೀಕ್ಷಿಸಬಹುದು?
ಎಲ್ಲ ಪ್ರೈಮ್‌ ಸದಸ್ಯರೂ ಸಂಭ್ರಮಾಚರಣೆ ಮಾಡುವುದಕ್ಕಾಗಿ ಅಮೆಜಾನ್‌ನ ವಾರ್ಷಿಕ ಪ್ರೈಮ್ ಡೇ ಕಾರ್ಯಕ್ರಮವನ್ನು 2022 ಜುಲೈ 23 ಮತ್ತು 24 ರಂದು ಆಯೋಜಿಸಲಾಗಿದೆ. ಎರಡು ದಿನಗಳಲ್ಲಿ ಅದ್ಭುತ ಡೀಲ್‌ಗಳು, ಉಳಿತಾಯಗಳು, ಬ್ಲಾಕ್‌ಬಸ್ಟರ್ ಮನರಂಜನೆ, ಹೊಸ ಬಿಡುಗಡೆಗಳು ಮತ್ತು ಇನ್ನೂ ಹಲವು ಅನುಕೂಲಗಳನ್ನು ಪ್ರೈಮ್‌ ಸದಸ್ಯರು ಪಡೆಯುತ್ತಾರೆ. ಅವರು ಆರಾಮವಾಗಿ ಕುಳಿತು ಅದ್ಭುತ ಮನರಂಜನೆಯನ್ನು ಪಡೆಯಲು ಮತ್ತು ತಮ್ಮ ಮೆಚ್ಚಿನ ಕಂಟೆಂಟ್ ಅನ್ನು ಶಾಪಿಂಗ್‌ ಮಾಡಲು ಅನುವು ಮಾಡಲಿದೆ. ಈ ವರ್ಷ ವಿವಿಧ ವಿಭಾಗಗಳಲ್ಲಿ ಪ್ರೈಮ್‌ ಡೇ ಉತ್ತಮ ಡೀಲ್‌ಗಳನ್ನು ಒದಗಿಸಲಿದೆ.
• ಹೊಸ ಬಿಡುಗಡೆಗಳು: ಸ್ಯಾಮ್‌ಸಂಗ್‌, ಶೋಮಿ, ಇಂಟೆಲ್, ಬೋಟ್‌ ಇತ್ಯಾದಿ 400 ಕ್ಕೂ ಹೆಚ್ಚು ಪ್ರಮುಖ ಭಾರತೀಯ ಮತ್ತು ಜಾಗತಿಕ ಬ್ರ್ಯಾಂಡ್‌ಗಳಿಂದ 30,000 ಕ್ಕೂ ಹೆಚ್ಚು ಉತ್ಪನ್ನಗಳು ಮತ್ತು ಎಲೆಕ್ಟ್ರಾನಿಕ್ಸ್‌, ಫ್ಯಾಷನ್‌ ಮತ್ತು ಗ್ರೂಮಿಂಗ್, ಆಭರಣ, ಕೈಯಿಂದ ತಯಾರಿಸಿದ ಉತ್ಪನ್ನಗಳು ಮತ್ತು ಇತರೆ ಮೇಲೆ ವಿಭಾಗಗಳಲ್ಲಿ ಎಕ್ಸ್‌ಎಚ್, ಕಾಸ್-ಐಕ್ಯೂ, ಹಿಮಾಲಯನ್‌ ಒರಿಜಿನ್ಸ್, ಸ್ಪೇಸ್‌ಇನ್ ಕಾರ್ಟ್, ಮಿರಾಕಿ, ಕರಾಗಿರಿ, ನಿರ್ವಿ ಹ್ಯಾಂಡಿಕ್ರಾಫ್ಟ್‌ ಸೇರಿದಂತೆ 120 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ (ಎಸ್‌ಎಂಬಿಗಳು) 2,000 ಹೊಸ ಉತ್ಪನ್ನಗಳ ಬಿಡುಗಡೆ
• ವಿಶಿಷ್ಟ ಕೊಡುಗೆಗಳು: ಭಾರತೀಯ ಸ್ಟಾರ್ಟಪ್‌ಗಳಾದ ಅಮೆಜಾನ್‌ ಲಾಂಚ್‌ಪ್ಯಾಡ್‌, ಅಮೆಜಾನ್‌ ಕಾರಿಗಾರ್, ಅಮೆಜಾನ್‌ ಸಹೇಲಿ ಮತ್ತು ಲೋಕಲ್‌ ಶಾಫ್ಸ್‌ ಆನ್‌ ಅಮೆಜಾನ್‌ನಂತಹ ನೂರಾರು ಹೊಸ ಬ್ರ್ಯಾಂಡ್‌ಗಳಿಂದ ವಿಶಿಷ್ಟ ಕೊಡುಗೆಗಳು ಮತ್ತು ಡೀಲ್‌ಗಳ ಮೂಲಕ ಶಾಪಿಂಗ್‌ನ ಖುಷಿಯನ್ನು ಆನಂದಿಸಿ.
• ಹೋಲಿಕೆಯಿಲ್ಲದ ಡೀಲ್‌ಗಳು: ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಫೋನ್‌ಗಳು, ಫ್ಯಾಷನ್ ಮತ್ತು ಬ್ಯೂಟಿ, ಪ್ರತಿದಿನದ ಅಗತ್ಯಗಳು ಮತ್ತು ಇತರೆಯಲ್ಲಿ ಸಾವಿರಾರು ಡೀಲ್‌ಗಳು
• ಸ್ಮಾರ್ಟ್‌ ಟೆಕ್‌ನ ಶಕ್ತಿ: ಅಮೆಜಾನ್‌ ಎಕೋ, ಫೈರ್‌ ಟಿವಿ ಮತ್ತು ಕಿಂಡಲ್‌ ಸಾಧನಗಳ ಮೇಲೆ ಈ ಪ್ರೈಮ್‌ ದಿನದಂದು ವರ್ಷದಲ್ಲೇ ಅತ್ಯುತ್ತಮ ಡೀಲ್‌ಗಳನ್ನು ಪಡೆಯಿರಿ ಇತ್ತೀಚಿನ ಸ್ಮಾರ್ಟ್‌ ಸ್ಪೀಕರ್‌ಗಳು, ಸ್ಮಾರ್ಟ್‌ ಡಿಸ್‌ಪ್ಲೇಗಳು ಮತ್ತು ಫೈರ್‌ ಟಿವಿ ಉತ್ಪನ್ನಗಳ ಮೇಲೆ 50% ವರೆಗೆ ರಿಯಾಯಿತಿ ಪಡೆದುಕೊಂಡು ನಿಮ್ಮ ಮನೆಯನ್ನು ಸ್ಮಾರ್ಟ್‌ ಮಾಡಿಕೊಳ್ಳಿ
• ಅತ್ಯುತ್ತಮ ಮನರಂಜನೆ:
o ಈ ಪ್ರೈಮ್‌ ದಿನದಂದು ಹಲವು ಭಾಷೆಗಳಲ್ಲಿ ಅತ್ಯಂತ ನಿರೀಕ್ಷಿತ ಅಮೆಜಾನ್‌ ಒರಿಜಿನಲ್ ಸಿರೀಸ್‌ ಮತ್ತು ಜನಪ್ರಿಯ ಸಿನಿಮಾಗಳ ಮೂಲಕ ಪ್ರೈಮ್‌ ಸದಸ್ಯರಿಗೆ ಮನರಂಜನೆಯ ಗುಚ್ಛವನ್ನು ಪ್ರೈಮ್ ಡೇ ಘೋಷಿಸುತ್ತದೆ. ರನ್‌ವೇ 34 (ಹಿಂದಿ), ಸರ್ಕಾರಿ ವಾರಿ ಪಾಟ (ತೆಲುಗು, ತಮಿಳು, ಮಲಯಾಳಂ) ಮತ್ತು ಸಾಮ್ರಾಟ್‌ ಪೃಥ್ವಿರಾಜ್‌ (ಹಿಂದಿ, ತಮಿಳು, ತೆಲುಗು) ನಂತಹ ಇತ್ತೀಚೆಗೆ ಬಿಡುಗಡೆಯಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ಜೊತೆಗೆ ಇತ್ತೀಚಿನ ಅಮೆಜಾನ್‌ ಒರಿಜಿನಲ್‌ ಆಕ್ಷನ್ ಥ್ರಿಲ್ಲರ್‌ ಸಿರೀಸ್‌ ಆಗಿರುವ ಕ್ರಿಸ್ ಪ್ಯಾಟ್‌ ನಟನೆಯ ದಿ ಟರ್ಮಿನಲ್‌ ಲಿಸ್ಟ್ (ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ) ಮತ್ತು ಜಾಗತಿಕ ಸರಣಿಯ ಎರಡನೇ ಭಾರತೀಯ ಅವತರಣಿಕೆ ಮಾಡರ್ನ್‌ ಲವ್‌ ಹೈದರಾಬಾದ್ (ತೆಲುಗು) ಅನ್ನು ಕೂಡಾ ಪ್ರೈಮ್ ಸದಸ್ಯರು ವೀಕ್ಷಿಸಬಹುದು.

ಪ್ರೈಮ್ ಡೇ 2022 ರ ಸಮೀಪದಲ್ಲಿ ಇನ್ನೂ ಎರಡು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಘೋಷಿಸಲಾಗುವುದರ ಜೊತೆಗೆ ಪ್ರೈಮ್‌ ಸದಸ್ಯರಿಗೆ ಇನ್ನಷ್ಟು ಅಚ್ಚರಿಯೂ ಕಾದಿದೆ. ಹಾಗೆಯೇ, ವಿಶೇಷ ಪ್ರೈಮ್‌ ಡೇ ಕೊಡುಗೆಯಾಗಿ, ಈ ಪ್ರೈಮ್ ಡೇಯಲ್ಲಿ ಪ್ರೈಮ್ ವೀಡಿಯೋ ಚಾನೆಲ್‌ಗಳ ಮೂಲಕ ನಮ್ಮ ಹಲವು ಪಾಲುದಾರರು ಆಡ್ ಆನ್‌ ಸಬ್‌ಸ್ಕ್ರಿಪ್ಷನ್‌ಗಳ ಮೇಲೆ 50% ವರೆಗೆ ರಿಯಾಯಿತಿಯನ್ನು ಘೋಷಿಸುತ್ತಿವೆ

o ಈ ವರ್ಷದ ಅಮೆಜಾನ್‌ ಮ್ಯೂಸಿಕ್‌ ಲೈನ್‌ಅಪ್‌ ಆಗಿ ಹಿಂದಿ (ದೇಸಿ ವೈಬ್ಸ್‌) ಮತ್ತು ತೆಲುಗಿನ (ಫುಲ್ಲೀ ಟೋಲ್ಲಿ) ಅನ್ನು ನಿರೀಕ್ಷಿಸಬಹುದಾಗಿದೆ. ಭಾರತದ ಮೊದಲ ದೇಶೀಯ ಭಾಷೆಯ ಮಾರ್ಖೀ ಪ್ಲೇಲಿಸ್ಟ್‌ನಲ್ಲಿ ಎಆರ್‌ ರೆಹಮಾನ್‌, ಜುಬೀನ್‌ ನೌಟಿಯಾಲ್‌, ರಿತ್ವಿಜ್‌ ಹಾಗೂ ಇತರರು ಇದ್ದು, ಬಾಲಿವುಡ್‌, ಇಂಡಿಯನ್‌ ಪಾಪ್‌ ಮತ್ತು ಸ್ವತಂತ್ರ ಪಾಪ್‌ ಸೀನ್‌ ಅನ್ನು ಇವರು ಪ್ರತಿನಿಧಿಸಲಿದ್ದಾರೆ
• ಭಾರಿ ಉಳಿತಾಯ: ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್/ಡೆಬಿಟ್‌ ಕಾರ್ಡ್‌ಗಳು ಮತ್ತು ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ಗಳ ಇಎಂಐ ವಹಿವಾಟುಗಳ ಮೇಲೆ 10% ಉಳಿತಾಯದೊಂದಿಗೆ ಭಾರಿ ಉಳಿತಾಯ ಮಾಡಿ

ಪ್ರಶ್ನೆ: ಭಾರತದಲ್ಲಿ ಅಮೆಜಾನ್‌ ಪ್ರೈಮ್ ಸದ್ಯ ಹೇಗಿದೆ?
ಭಾರತದಲ್ಲಿ ಪ್ರೈಮ್‌ ಆರಂಭಿಸಿದಾಗಿನಿಂದ ಉತ್ತಮ ಪ್ರತಿಕ್ರಿಯೆ ನಮಗೆ ವ್ಯಕ್ತವಾಗುತ್ತಿದೆ ಮತ್ತು ಹೆಚ್ಚು ಹೆಚ್ಚು ಪ್ರಯೋಜನಗಳನ್ನು ಸೇರಿಸುತ್ತಿರುವ ಹಾಗೆಯೇ ಹೊಸ ಸದಸ್ಯರು ಸೈನ್ ಅಪ್ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಎಲ್ಲ ಪ್ರಮುಖ ಸೇಲ್‌ನಲ್ಲಿ ಪ್ರೈಮ್‌ ಸದಸ್ಯತ್ವ ಉತ್ತಮ ಮಾರಾಟವಾದ ಡೀಲ್‌ ಆಗಿದೆ. ಸಣ್ಣ ಪಟ್ಟಣಗಳಿಂದ ಹೆಚ್ಚಿನ ಸಂಖ್ಯೆಯ ಸದಸ್ಯರು ಆಗಮಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಉದಾಹರಣೆಗೆ, 2021 ರಲ್ಲಿ 70% ಕ್ಕೂ ಹೆಚ್ಚು ಹೊಸ ಪ್ರೈಮ್‌ ಸದಸ್ಯರು ಪ್ರಮುಖ 10 ನಗರಗಳ ಹೊರಗಿನಿಂದ ಬಂದವರಾಗಿದ್ದಾರೆ. ಉದಾಹರಣೆಗೆ, ಅನಂತನಾಗ್ (ಜಮ್ಮು ಕಾಶ್ಮೀರ), ಬೊಕಾರೋ (ಜಾರ್ಖಂಡ), ತವಾಂಗ್ (ಅರುಣಾಚಲ ಪ್ರದೇಶ), ಮೊಕೊಕ್‌ಚುಂಗ್‌ (ನಾಗಾಲ್ಯಾಂಡ್), ಹೋಶಿಯಾರ್‌ಪುರ (ಪಂಜಾಬ್‌), ನೀಲಗಿರೀಸ್ (ತಮಿಳುನಾಡು), ಗದಗ (ಕರ್ನಾಟಕ ಮತ್ತು ಕಾಸರಗೋಡು (ಕೇರಳ). ಭಾರತದಲ್ಲೇ ಮೊದಲು ವಿಶಿಷ್ಟ ಪ್ರಯೋಜನಗಳನ್ನು ಗ್ರಾಹಕರಿಗೆ ಒದಗಿಸುವುದಕ್ಕಾಗಿ ನಾವು ಅನ್ವೇಷಣೆ ನಡೆಸುತ್ತಲೇ ಇದ್ದೇವೆ. ಇದೆಲ್ಲದರಿಂದ ಗ್ರಾಹಕರಿಗೆ ಪ್ರೈಮ್‌ ಸದಸ್ಯತ್ವದಿಂದ ಹೆಚ್ಚಿನ ಮೌಲ್ಯ ದೊರೆಯುತ್ತದೆ.

ಪ್ರಶ್ನೆ: ಅಮೆಜಾನ್‌ ಪ್ರೈಮ್‌ ಸದಸ್ಯತ್ವದಿಂದ ಯಾವ ಪ್ರಮುಖ ಪ್ರಯೋಜನಗಳು ಸಿಗುತ್ತವೆ?
2016 ಜುಲೈನಲ್ಲಿ ನಾವು ಪ್ರೈಮ್ ಅನ್ನು ಭಾರತಕ್ಕೆ ಪರಿಚಯಿಸಿದೆವು. ಆಗಿನಿಂದಲೂ, ಭಾರತದಲ್ಲಿನ ಗ್ರಾಹಕರಿಗೆ ಶಾಪಿಂಗ್‌ ಮತ್ತು ಜನರಂಜನೆಯ ಎಕ್ಸ್‌ಕ್ಲೂಸಿವ್ ಜಗತ್ತಿಗೆ ಅಡಿಪಾಯ ಹಾಕಿದ್ದೇವೆ. ಭಾರತದಲ್ಲಿ ಪ್ರತಿ ದಿನವೂ ಇಕಾಮರ್ಸ್‌ ಹೇಗೆ ಜನರ ಭಾಗವಾಗುತ್ತದದೆ ಎಂಬುದರಲ್ಲಿ ಪ್ರೈಮ್‌ ಪ್ರಮುಖ ಪಾತ್ರ ವಹಿಸುತ್ತದೆ. ನಿಮಗೆ ಬೇಕಿರುವುದನ್ನು ಪ್ರೈಮ್ ಕೊಡುತ್ತದೆ ಮತ್ತು ಭಾವನಾತ್ಮಕವಾಗಿ ನೀವು ಪ್ರೀತಿಸುವುದನ್ನು ನೀಡುತ್ತದೆ. ತ್ವರಿತ, ಉಚಿತ ಶಿಪ್ಪಿಂಗ್‌ ಪ್ರೈಮ್‌ನ ಅಡಿಪಾಯವಾಗಿದೆ ಮತ್ತು ಮೊದಲ ಬಾರಿಗೆ ಪ್ರೈಮ್‌ಗೆ ಸೇರುವ ಹೊಸ ಗ್ರಾಹಕರಿಗೆ ಇದು ಇಂದಿಗೂ ಪ್ರಾಥಮಿಕ ಕಾರಣವೂ ಆಗಿದೆ. ಆದರೆ, ಮನರಂಜನೆಯು ಅವರ ವರ್ತನೆಯನ್ನು ಬದಲಿಸುತ್ತದೆ. ಪ್ರೈಮ್‌ ವೀಡಿಯೋ ಅನ್ನು ವೀಕ್ಷಿಸಿದ ಅಥವಾ ಅಮೆಜಾನ್ ಮ್ಯೂಸಿಕ್‌ ಕೇಳಿಸಿಕೊಂಡ ಪ್ರೈಮ್‌ ಸದಸ್ಯರು ಹೆಚ್ಚಿನ ದರಗಳಲ್ಲಿ ತಮ್ಮ ಸದಸ್ಯತ್ವವನ್ನು ನವೀಕರಿಸಿಕೊಳ್ಳುತ್ತಾರೆ ಮತ್ತು ಹೆಚ್ಚು ಶಾಪಿಂಗ್‌ ಮಾಡುತ್ತಾರೆ. ಹೀಗಾಗಿ, ಅವರು ಶಾಪಿಂಗ್‌ಗೆ ಬರುತ್ತಾರೆ. ಆದರೆ, ಮನರಂಜನೆಗಾಗಿ ಇಲ್ಲಿ ಇರುತ್ತಾರೆ ಎಂದು ನಾವು ಹೇಳುತ್ತೇವೆ.
ಪ್ರೈಮ್ ಸದಸ್ಯರಾಗುವುದಕ್ಕೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ಸುರಕ್ಷತೆಯ ಅಗತ್ಯ ಮುಖ್ಯವಾಗಿದ್ದು, ಪ್ರೈಮ್‌ನ ಮೌಲ್ಯವೂ ಮಹತ್ವದ್ದಾಗುತ್ತದೆ. ಇದು ಸದಸ್ಯರಿಗೆ ಅಮೆಜಾನ್‌ನ ಉತ್ತಮ ಸೌಲಭ್ಯಗಳನ್ನು ಆನಂದಿಸಲು ಅವಕಾಶ ನೀಡುತ್ತದೆ. ಪ್ರೈಮ್ ಅನ್ನು ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೆ ಸದಸ್ಯರು ಬಳಸುತ್ತಿದ್ದಾರೆ ಮತ್ತು ನಮ್ಮ ಗ್ರಾಹಕರ ಪ್ರತಿ ದಿನದ ಜೀವನದ ಭಾಗ ಇದಾಗಿದೆ. ಅನುಕೂಲಕ್ಕಾಗಿ ಭಾರತೀಯ ಗ್ರಾಹಕರು ಹಣ ನೀಡುವುದಿಲ್ಲ ಎಂಬ ಮಿಥ್ಯೆಯನ್ನೂ ಪ್ರೈಮ್‌ ನಿವಾರಿಸಿದೆ. ಇಂದು, ಭಾರತದಲ್ಲಿ ಕೋಟ್ಯಂತರ ಪಾವತಿಸಹಿತ ಪ್ರೈಮ್‌ ಸದಸ್ಯರಿದ್ದಾರೆ. ಸದಸ್ಯರು ಶಾಪಿಂಗ್‌ ಮಾಡಬಹುದು, ಉಳಿತಾಯ ಮಾಡಬಹುದು ಮತ್ತು ಮನರಂಜನೆಯನ್ನು ಅನುಭವಿಸಬಹುದು ಹಾಗೂ ಇನ್ನೂ ಹಲವು ಸಂಗತಿಗಳನ್ನು ಪ್ರೈಮ್‌ ಬಳಸಿ ಮಾಡಬಹುದು. ಹೆಚ್ಚು ಶಾಪಿಂಗ್‌ ಮಾಡಿದಷ್ಟೂ ಸದಸ್ಯರು ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಮತ್ತು ಇದರಲ್ಲಿರುವ ಹಲವು ಪ್ರಯೋಜನಗಳೊಂದಿಗೆ ಖುಷಿಯನ್ನು ಆನಂದಿಸುತ್ತಾರೆ ಎಂದು ನಾವು ತಿಳಿದುಕೊಂಡಿದ್ದೇವೆ.

ಸದಸ್ಯರಿಗೆ ಪ್ರೈಮ್‌ ಇನ್ನೂ ಹೆಚ್ಚು ಮೌಲ್ಯಯುತವಾಗಿಸುವಲ್ಲಿ ನಾವು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದ್ದೇವೆ. ಈ ಸದಸ್ಯತ್ಯವವು ಗ್ರಾಹಕರಿಗೆ ಉತ್ತಮ ಮೌಲ್ಯವನ್ನು ನಿಡುತ್ತವೆ. ಶಾಪಿಂಗ್‌ ಮಾಡುತ್ತಾ ಅವರು ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಮನೆಯಿಂದಲೇ ಆನಂದಿಸುತ್ತಾರೆ. ಅಮೆಜಾನ್‌ ಪ್ರೈಮ್‌ ಸದಸ್ಯತ್ವದಲ್ಲಿನ ಕೆಲವು ಪ್ರಮುಖ ಪ್ರಯೋಜನಗಳೆಂದರೆ:

ಅನ್‌ಲಿಮಿಟೆಡ್‌ ಉಚಿತ ಫಾಸ್ಟ್‌ ಡೆಲಿವರಿ : ಅಮೆಜಾನ್‌ ಪ್ರೈಮ್‌ನ ಉಚಿತ ಒಂದು ದಿನದ ಮತ್ತು ಎರಡು ದಿನದ ಡೆಲಿವರಿಗಳೊಂದಿಗೆ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ ನಿಮ್ಮ ಮೆಚ್ಚಿನ ಉತ್ಪನ್ನಗಳ ಡೆಲಿವರಿ ಪಡೆಯಿರಿ ಮತ್ತು ವಿವಿಧ ವಿಭಾಗಗಳಲ್ಲಿ ಎಕ್ಸ್‌ಕ್ಲೂಸಿವ್ ಡೀಲ್‌ಗಳಿಗೆ ಆಕ್ಸೆಸ್‌ ಪಡೆಯಿರಿ. ಹಾಗೆಯೇ, ಪ್ರತಿ ದಿನ ಪ್ರಮುಖ ಲೈಟನಿಂಗ್‌ ಡೀಲ್‌ಗಳಿಗೆ 30 ನಿಮಿಷ ಮೊದಲೇ ಆಕ್ಸೆಸ್‌ ಪಡೆದುಕೊಂಡು ಯಾವುದು ಆಸಕ್ತಿಕರವಾಗಿದೆ ಎಂಬುದನ್ನು ನೋಡಿ.
ಪ್ರೈಮ್‌ ವೀಡಿಯೋ: ಇತ್ತೀಚಿನ ಬಾಲಿವುಡ್‌ ಬ್ಲಾಕ್‌ಬಸ್ಟರ್‌ಗಳು ಮತ್ತು ಹಾಲಿವುಡ್‌ ರಿಲೀಸ್‌ಗಳು, ಸೂಪರ್‌ಹಿಟ್‌ ಟಿವಿ ಸಿರೀಸ್‌ಗಳು ಸೇರಿದಂತೆ ಎಲ್ಲವನ್ನೂ ಎಲ್ಲಿಂದಲಾದರೂ ಯಾವುದೇ ಸಮಯದಲ್ಲಾದರೂ ಆಕ್ಸೆಸ್‌ ಮಾಡಿ.
ಪ್ರೈಮ್‌ ಮ್ಯೂಸಿಕ್:ಇಂಗ್ಲಿಷ್‌, ಹಿಂದಿ, ತಮಿಳು, ಪಂಜಾಬಿ, ತೆಲುಗು, ಬೆಂಗಾಲಿ ಮತ್ತು ಇತರ ಭಾಷೆಗಳಲ್ಲಿ ಜಾಹೀರಾತು ರಹಿತ ಸಂಗೀತವನ್ನು ಹಲವು ಭಾಷೆಗಳಲ್ಲಿ ಆನಂದಿಸಿ. 90 ಮಿಲಿಯನ್‌ಗೂ ಹೆಚ್ಚು ಹಾಡುಗಳು ಹಾಗೂ 10 ಮಿಲಿಯನ್‌ಗೂ ಹೆಚ್ಚು ಪಾಡ್‌ಕಾಸ್ಟ್‌ ಎಪಿಸೋಡ್‌ಗಳು ಪ್ರೈಮ್‌ ಮ್ಯೂಸಿಕ್‌ನಲ್ಲಿವೆ.
ಪ್ರೈಮ್‌ ರೀಡಿಂಗ್‌: 3,000 ಕ್ಕೂ ಹೆಚ್ಚು ಪುಸ್ತಕಗಳಿಂದ ಆಯ್ಕೆ ಮಾಡಿಕೊಂಡು ಪುಸ್ತಕ ಓದಿ. ನಿಯತಕಾಲಿಕೆಗಳು, ಕಾಮಿಕ್ಸ್‌ ಮತ್ತು ಇತರ ಹಲವು ವಿಭಾಗಗಳ ಪುಸ್ತಕಗಳು ಇದರಲ್ಲಿವೆ. ಸಾಹಿತ್ಯ, ಕಥೆ ಕಾದಂಬರಿ, ತ್ವರಿತವಾಗಿ ಓದುವ ಪುಸ್ತಕಗಳು, ಪ್ರಣಯ, ಕಥೆಯೇತರ ಪುಸ್ತಕಗಳು ಮತ್ತು ಇ ಬುಕ್‌ಗಳನ್ನು ಪ್ರೈಮ್‌ ರೀಡಿಂಗ್‌ನಲ್ಲಿ ಲಭ್ಯವಿವೆ. ಎಲ್ಲಾದರೂ, ಯಾವುದೇ ಸಮಯದಲ್ಲಾದರೂ ಉಚಿತವಾಗಿ ಓದಿ.
ಪ್ರೈಮ್‌ನಿಂದ ಗೇಮಿಂಗ್‌: ಪವರ್ ಅಪ್‌ಗಳು, ಎಕ್ಸ್‌ಕ್ಲೂಸಿವ್ ಕಲೆಕ್ಟಿಬಲ್ಸ್‌, ಕ್ಯಾರೆಕ್ಟರ್‌ಗಳು, ಔಟ್‌ಫಿಟ್‌ಗಳು, ಸ್ಕಿನ್‌ಗಳು, ಥೀಮ್‌ಗಳು, ಇನ್‌ ಗೇಮ್‌ ಕರೆನ್ಸಿ ಮತ್ತು ಇನ್ನಷ್ಟು ಜನಪ್ರಿಯ ಮೊಬೈಲ್ ಗೇಮ್‌ಗಳಿಗೆ ಉಚಿತ ಆಕ್ಸೆಸ್‌ ಪಡೆಯಿರಿ. ಪ್ರೈಮ್ ಗೇಮಿಂಗ್‌ನಲ್ಲಿ ಇದನ್ನು ಆಗಾಗ್ಗೆ ರಿಫ್ರೆಶ್ ಮಾಡಲಾಗುತ್ತಿರುತ್ತದೆ.
ಅನ್‌ಲಿಮಿಟೆಡ್‌ ರಿವಾರ್ಡ್‌ ಪಾಯಿಂಟ್‌ಗಳನ್ನು ಗಳಿಸಿ: ಅರ್ಹ ಪ್ರೈಮ್‌ ಸದಸ್ಯರು 5% ರಿವಾರ್ಡ್‌ ಪಾಯಿಂಟ್‌ಗಳನ್ನು (1 ರಿವಾರ್ಡ್‌ ಪಾಯಿಂಟ್‌ = ₹1), ಎಲ್ಲ ಸಮಯದಲ್ಲೂ Amazon.in ನಲ್ಲಿ ನೋ ಕಾಸ್ಟ್‌ ಇಎಂಐ ಅನ್ನು ಅಮೆಜಾನ್‌ ಪೇ ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್ ಕಾರ್ಡ್‌ ಬಳಸಿ, ಯಾವುದೇ ಸೇರ್ಪಡೆ ಅಥವಾ ವಾರ್ಷಿಕ ಫೀ ಇಲ್ಲದೇ ಪಡೆಯಬಹುದು.
ಅಷ್ಟೇ ಅಲ್ಲ! ಇತ್ತೀಚೆಗೆ ಅಮೆಜಾನ್‌ ಪ್ರೈಮ್‌ ರೆಫರಲ್ಸ್‌ ಪ್ರೋಗ್ರಾಮ್‌ ಪರಿಚಯಿಸಲಾಗಿದೆ. ಇದು 18-24 ವರ್ಷದ ಯುವಕರು ಪ್ರೈಮ್‌ನ ಖುಷಿಯನ್ನು ಹಂಚಿಕೊಳ್ಳಲು ಅನುವು ಮಾಡುತ್ತದೆ ಮತ್ತು ಈಗಾಗಲೇ ಪ್ರೈಮ್ ಯೂಥ್‌ ಆಫರ್‌ನಲ್ಲಿ ಲಭ್ಯವಿರುವ 50% ರಿಯಾಯಿತಿಯ ಜೊತೆಗೆ ಇನ್ನೂ 10% ರಿಯಾಯಿತಿಯನ್ನು ಪಡೆಯಬಹುದು.

ಪ್ರಶ್ನೆ: ಸಾಂಕ್ರಾಮಿಕ ರೋಗ ಕಂಡುಬಂದಂದಿನಿಂದ ಬಳಕೆ ಬದಲಾಗಿದೆ. ಯಾವ ಟ್ರೆಂಡ್‌ ನಿಮಗೆ ಕಂಡುಬಂದಿದೆ?
ಕಳೆದ ಎರಡು ವರ್ಷಗಳಲ್ಲಿ, ಜನರು ಮತ್ತು ಆರ್ಥಿಕತೆಗೆ ಜಾಗತಿಕ ಮಟ್ಟದಲ್ಲಿ ಸಾಂಕ್ರಾಮಿಕ ರೋಗ ಅನಿಶ್ಚಿತತೆಯನ್ನು ಹುಟ್ಟು ಹಾಕಿದೆ. ಭಾರತವೂ ಅದಕ್ಕೆ ಹೊರತಲ್ಲ. ಮನೆಯಲ್ಲೇ ಇರುವುದು ಮತ್ತು ಮನೆಯಿಂದಲೇ ಕೆಲಸ ಮಾಡುವುದು ಎಂಬುದು ಸಾಮಾನ್ಯ ಸಂಗತಿಯಾದ್ದರಿಂದ, ಜನರಿಗೆ ಮನೆಯಲ್ಲೇ ಸೇವೆ ಒದಗಿಸಲು ಇಕಾಮರ್ಸ್‌ ಮಹತ್ವದ ಪಾತ್ರ ವಹಿಸಿರುವುದನ್ನು ನಾವು ಗಮನಿಸಿದ್ದೇವೆ. ಈ ವ್ಯತ್ಯಯದ ಸಮಯದಲ್ಲಿ, ಲಕ್ಷಗಟ್ಟಲೆ ವ್ಯಾಪಾರಿಗಳು, ಡೆಲಿವರಿ ಮತ್ತು ಲಾಜಿಸ್ಟಿಕ್ಸ್‌ ಪಾಲುದಾರರು ಮತ್ತು ಇತರರು ಗ್ರಾಹಕರಿಗೆ ಸೇವೆ ನೀಡಲು ಮತ್ತು ಬೆಂಬಲ ನೀಡಲು ಹೇಗೆ ಮುಂದೆ ಬಂದರು ಎಂಬುದೇ ಒಂದು ಹೃದಯಂಗಮ ಸನ್ನಿವೇಶವಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಜನರು ಬೇಗ ತಂತ್ರಜ್ಞಾನವನ್ನು ಅಳವಡಿಸಿಕೊಂಡರು. ಇದು ಆನ್‌ಲೈನ್‌ ಶಾಪಿಂಗ್‌ ವರ್ತನೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿತು. ತಮ್ಮ ಶಾಪಿಂಗ್‌ ಅಗತ್ಯಗಳಿಗೆ ಹೆಚ್ಚು ಹೆಚ್ಚು ಗ್ರಾಹಕರು ಆನ್‌ಲೈನ್‌ಗೆ ಬರುವುದನ್ನು ನಾವು ಗಮನಿಸುತ್ತಿದ್ದೇವೆ. ಈ ಅವಧಿಯಲ್ಲಿ, Amazon.in ನಲ್ಲಿನ ಸೆಲ್ಲರ್‌ಗಳು ದಿನಸಿ, ಮನೆಯಲ್ಲೇ ಕೆಲಸ ಮಾಡುವುದು ಮತ್ತು ಆನ್‌ಲೈನ್‌ ಶಾಲೆ ಸೌಲಭ್ಯಗಳಾದ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ ಸಾಧನಗಳು, ಹೆಡ್‌ಫೋನ್‌ಗಳು, ಪೀಠೋಪಕರಣ, ಗ್ರಾಹಕ ಎಲೆಕ್ಟ್ರಾನಿಕ್ಸ್‌ ಮತ್ತು ಅಪಾರೆಲ್‌ ಸೇರಿದಂತೆ ಇತರ ವಿಭಾಗಗಳಲ್ಲಿ ಹೆಚ್ಚು ಬೇಡಿಕೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅಷ್ಟಕ್ಕೂ, ಒಂದು ಉಪ ವಿಭಾಗವಾಗಿ ದಿನಸಿಯು ಕಳೆದ ಮಾರ್ಚ್‌ ನಂತರದಲ್ಲಿ 2ಪಟ್ಟಿಗಿಂತ ಹೆಚ್ಚು ಏರಿಕೆ ಕಂಡಿದೆ ಮತ್ತು Amazon.in ನಲ್ಲಿ ಹೊಸ ಗ್ರಾಹಕರಿಗೆ ಗೇಟ್‌ವೇ ಆಗಿದೆ.

ಯಾವುದೇ ಹೊಸ ಪ್ರಯೋಜನಗಳನ್ನು ಪರಿಚಯಿಸಲು ನೀವು ಯೋಜನೆ ರೂಪಿಸುತ್ತಿದ್ದೀರಾ?
ಪ್ರೈಮ್‌ನ ಪ್ರಯೋಜನಗಳ ಬಾಸ್ಕೆಟ್ ಅನ್ನು ಸೇರಿಸಲು ನಾವು ನಿರಂತರವಾಗಿ ಎದುರು ನೋಡುತ್ತಿದ್ದೇವೆ. ಅಮೆಜಾನ್‌ ಪ್ರೈಮ್ ಪ್ರೈಮ್‌ ಯೂತ್‌ ಆಫರ್ ಅನ್ನು ಆರಂಭಿಸಿದ್ದು, ಇದರ ಅಡಿಯಲ್ಲಿ ತಮ್ಮ ಪ್ರೈಮ್‌ ಸದಸ್ಯತ್ವದಲ್ಲಿ 50% ರಿಯಾಯಿತಿಯನ್ನು 18-24 ವರ್ಷದ ಗ್ರಾಹಕರು ಪಡೆಯಬಹುದಾಗಿದೆ. ನಾವು ಇತ್ತೀಚೆಗೆ ಪ್ರೈಮ್‌ ರೆಫರಲ್ಸ್‌ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ.ಇದರಲ್ಲಿ ಯೂತ್‌ ಆಫರ್ ಮೂಲಕ ಪ್ರೈಮ್‌ಗೆ ಸೇರುವ ಗ್ರಾಹಕರು ಅಮೆಜಾನ್‌ ಆಪ್‌ನಲ್ಲಿ ಪ್ರೈಮ್ ರೆಫರಲ್ಸ್‌ ಪುಟದಿಂದ ಯಾರನ್ನಾದರೂ ರೆಫರ್ ಮಾಡಬಹುದು. ತಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಿಂದ ಅಥವಾ ಇಮೇಲ್ ಐಡಿಯನ್ನು ಬಳಸಿ ತಮ್ಮ ಫೋನ್‌ನಿಂದಲೇ ರೆಫರ್ ಮಾಡಬಹುದಾಗಿದೆ. ರೆಫರ್ ಮಾಡಲ್ಪಟ್ಟಿರುವ ಸ್ನೇಹಿತರು ಪ್ರೈಮ್‌ಗೆ ಸೇರಿದರೆ ಮತ್ತು ತನ್ನ ವಯಸ್ಸನ್ನು ವೆರಿಫೈ ಮಾಡಿಕೊಂಡರೆ, ರೆಫರ್ ಮಾಡಿದವರು 15 ದಿನದ ಉಚಿತ ಪ್ರೈಮ್‌ ಸದಸ್ಯತ್ವ ವಿಸ್ತರಣೆಯನ್ನು ಪ್ರತಿ ರೆಫರಲ್‌ ಮೇಲೆ ಪಡೆಯುತ್ತಾರೆ ಮತ್ತು ರೆಫರ್ ಮಾಡಲ್ಪಟ್ಟ ಸ್ನೇಹಿತರು ತಾವು ಖರೀದಿ ಮಾಡಿದ ಪ್ಲಾನ್‌ನ ಬೆಲೆಯ ಮೇಲೆ ಹೆಚ್ಚುವರಿ 10% ಅನ್ನು ಪಡೆಯುತ್ತಾರೆ. ನಾವು ಹೂಡಿಕೆ ಮತ್ತು ಅನ್ವೇಷಣೆಯನ್ನು ಮುಂದುವರಿಸುತ್ತಲೇ ಇರುತ್ತೇವೆ. ಇದರಿಂದ ಸದಸ್ಯರಿಗೆ ಪ್ರೈಮ್ ಉತ್ತಮ ಮೌಲ್ಯವಾಗಿರುತ್ತದೆ. ವಿಶಿಷ್ಟ ರೆಫರರ್‌ ಕೋಡ್‌ ಬಳಸಿ ರೆಫರಲ್‌ ಪ್ರೋಗ್ರಾಮ್‌ ಮೂಲಕ ಪ್ರೈಮ್‌ಗೆ ಸೇರುವ ಸ್ನೇಹಿತರು ಈ ಮುಂದಿನ ಗಳಿಕೆ ಮಾಡಬಹುದು:
o ಮಾಸಿಕ ಯೋಜನೆಗೆ ರೂ. 115
o 1 ವರ್ಷದ ಯೋಜನೆಗೆ ರೂ. 900

ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್‌ಎಂಬಿಗಳು) ಮತ್ತು ಉದ್ಯಮಿಗಳನ್ನು ಈ ವರ್ಷ ಪ್ರೈಮ್‌ ಡೇ ಹೇಗೆ ಸಬಲಗೊಳಿಸುತ್ತಿದೆ?
ಗ್ರಾಹಕರ ನಿತ್ಯ ಜೀವನವನ್ನು ಇನ್ನಷ್ಟು ಸಂತೋಷಕರ ಮತ್ತು ಅನುಕೂಲಕರವಾಗಿಸುವ ನಿಟ್ಟಿನಲ್ಲಿ, 2016 ರಲ್ಲಿ ಅಮೆಜಾನ್‌ ಪ್ರೈಮ್‌ ಆರಂಭವಾದಾಗಿನಿಂದಲೂ ಪ್ರಮುಖ ಪಾತ್ರ ವಹಿಸಿದೆ. ಆರಂಭವಾದಾಗಿನಿಂದಲೂ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಮೆಜಾನ್‌ ಬೆಂಬಲವನ್ನು ಮುಂದುವರಿಸುತ್ತದೆ ಮತ್ತು ಲಕ್ಷಾಂತರ ವ್ಯಾಪಾರಿಗಳು, ಉತ್ಪಾದಕರು, ಸ್ಟಾರ್ಟಪ್‌ಗಳು ಮತ್ತು ಬ್ರ್ಯಾಂಡ್‌ಗಳು, ಮಹಿಳಾ ಉದ್ಯಮಿಗಳು, ಕಲಾಕಾರರು, ನೇಕಾರರು ಮತ್ತು ಸ್ಥಳೀಯ ಅಂಗಡಿಗಳು ಒದಗಿಸುವ ಪ್ರಾಡಕ್ಟ್‌ಗಳಿಗೆ ಗ್ರಾಹಕರ ಬೇಡಿಕೆಯನ್ನು ಉತ್ಪಾದಿಸಲು ಸಹಾಯ ಮಾಡುತ್ತೇವೆ. ಇಂದು, ಮಾರ್ಕೆಟ್‌ಪ್ಲೇಸ್‌ನಲ್ಲಿ ಮಿಲಿಯನ್‌ಗೂ ಹೆಚ್ಚು ಸೆಲ್ಲರ್‌ಗಳಿದ್ದಾರೆ ಮತ್ತು ಕಳೆದ 24 ತಿಂಗಳುಗಳಲ್ಲಿ 4,50,000 ಸೆಲ್ಲರ್‌ಗಳು ಸೇರಿದ್ದಾರೆ.
ಪ್ರಯೋಜನ ಪಡೆದುಕೊಳ್ಳಲು, ವಿಶಾಲ ಪ್ರಮಾಣದ ಗ್ರಾಹಕರನ್ನು ಪಡೆಯಲು ಮತ್ತು ತಮ್ಮ ಪ್ರಗತಿಯನ್ನು ಉತ್ತೇಜಿಸಲು ಪ್ರೈಮ್ ಡೇ ಅಪಾರವಾದ ಅವಕಾಶವಾಗಿದೆ ಎಂದು ನಾವು ನಂಬಿದ್ದೇವೆ. ಈ ವರ್ಷ, ಲೋಕಲ್ ಶಾಪ್ಸ್‌ ಆನ್‌ ಅಮೆಜಾನ್‌, ಲಾಂಚ್‌ಪ್ಯಾಡ್, ಸಹೇಲಿ ಮತ್ತು ಕಾರಿಗಾರ್‌ನಂತಹ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಫ್ಯಾಷನ್‌ ಮತ್ತು ಸೌಂದರ್ಯ, ಎಲೆಕ್ಟ್ರಾನಿಕ್ಸ್‌ ಮತ್ತು ಮನೆ ಅಲಂಕಾರ ಸೇರಿದಂತೆ ವಿವಿಧ ವಿಶಿಷ್ಟ ವಿಭಾಗಗಳಲ್ಲಿ ಡೀಲ್‌ಗಳನ್ನು ಪಡೆಯಲು ಪ್ರೈಮ್‌ ಸದಸ್ಯರು ಅವಕಾಶ ಹೊಂದಿರುತ್ತಾರೆ. ಪ್ರೈಮ್‌ ಡೇಗೂ ಮುನ್ನ ಜುಲೈ 7 12:00 ಪೂರ್ವಾಹ್ನದಿಂದ ಜುಲೈ 22 23:59 ಅಪರಾಹ್ನದ ವರೆಗೆ ಎಸ್‌ಎಂಬಿಗಳು ಒದಗಿಸುವ ಕೋಟ್ಯಂತರ ಉತ್ಪನ್ನಗಳನ್ನು ಸದಸ್ಯರು ಶಾಪಿಂಗ್‌ ಮಾಡಬಹುದು ಮತ್ತು ಪ್ರೈಮ್ ಡೇ ಖರೀದಿಗಳ ಮೇಲೆ ರಿಡೀಮ್ ಮಾಡಬಹುದಾದ 100 ರೂ.ವರೆಗಿನ 105 ಕ್ಯಾಶ್‌ಬ್ಯಾಕ್‌ನಂತಹ ಅದ್ಭುತ ಕೊಡುಗೆಗಳನ್ನು ಪಡೆಯಬಹುದು.

Articles You Might Like

Share This Article