ಇ-ಕಾಮರ್ಸ್ ದೈತ್ಯ ಅಮೆಜಾನ್‍ಗೆ ಸಂಕಷ್ಟ

Social Share

ನವದೆಹಲಿ,ನ.25- ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಆನ್‍ಲೈನ್ ಮಾರಾಟ ಸಂಸ್ಥೆಯಾದ ಅಮೆಜಾನ್ ಇಕ್ಕಟ್ಟಿಗೆ ಸಿಲುಕಿಕೊಂಡಿದೆ. ಸುಮಾರು 40 ದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಮೆಜಾನ್ ಸಿಬ್ಬಂದಿ ವರ್ಗದವರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ಹಾದಿ ಹಿಡಿದಿರುವ ಹಿನ್ನಲೆಯಲ್ಲಿ ಅಮೆಜಾನ್ ವ್ಯಾಪಾರ ವಹಿವಾಟುಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ.

ಭಾರತ, ಅಮೆರಿಕಾ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಸುಮಾರು 40 ದೇಶಗಳ ಅಮೆಜಾನ್ ವೇರ್‍ಹೌಸ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಸಿಬ್ಬಂದಿಗಳು ಮೇಕ್ ಅಮೆಜಾನ್ ಪೇ ಎಂಬ ಅಭಿಯಾನದ ಮೂಲಕ ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಬ್ಬಂದಿಗಳ ಈ ಪ್ರತಿಭಟನೆಯಿಂದ ವರ್ಷದ ಕೊನೆಯಲ್ಲಿ ಅಮೆಜಾನ್ ನಡೆಸುವ ಬ್ಲಾಕ್ ಫ್ರೈಡೆ ವ್ಯಾಪಾರದ ಮೇಲೆ ದುಷ್ಟರಿಣಾಮ ಬೀರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಮೆಜಾನ್ ಸಿಬ್ಬಂದಿಗಳ ಮುಷ್ಕರಕ್ಕೆ ಪರಿಸರ ಮತ್ತು ನಾಗರಿಕ ಸಮಾಜದ ಗುಂಪುಗಳ ಬೆಂಬಲದೊಂದಿಗೆ ಕಾರ್ಮಿಕ ಸಂಘಗಳ ಅಂತರರಾಷ್ಟ್ರೀಯ ಒಕ್ಕೂಟ ಬೆಂಬಲ ನೀಡಿರುವುದರಿಮದ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಮತದಾರರಿಗೆ ತೀರ್ಥಯಾತ್ರೆ, ಪ್ರವಾಸ, ಭರ್ಜರಿ ಉಡುಗೊರೆಗಳ ಭಾಗ್ಯ

ಅಮೆಜಾನ್ ಸಂಸ್ಥೆಯವರು ಕಾನೂನನ್ನು ಗೌರವಿಸಲು ಮತ್ತು ತಮ್ಮ ಉದ್ಯೋಗಗಳನ್ನು ಉತ್ತಮಗೊಳಿಸಲು ಬಯಸುವ ಕಾರ್ಮಿಕರೊಂದಿಗೆ ಮಾತುಕತೆ ನಡೆಸಲು ಇದು ಸಮಯವಾಗಿದೆ ಎಂದು ಅಭಿಯಾನದ ಸಂಘಟಕರಲ್ಲಿ ಒಬ್ಬರಾದ ಗ್ಲೋಬಲ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಕ್ರಿಸ್ಟಿ ಹಾಫ್‍ಮನ್ ಹೇಳಿದ್ದಾರೆ.

ಕಾವೇರಿ ನದಿ ನೀರು ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ : ಕಾಂಗ್ರೆಸ್ ಆರೋಪ

Amazon, Strikes, Black, Friday, Protests, Walkouts, Planned, 40 Countries,

Articles You Might Like

Share This Article