Saturday, September 23, 2023
Homeಇದೀಗ ಬಂದ ಸುದ್ದಿಕೋಟ್ಯಂತರ ರೂ. ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಯತ್ನ : ಇಬ್ಬರ ಬಂಧನ

ಕೋಟ್ಯಂತರ ರೂ. ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಯತ್ನ : ಇಬ್ಬರ ಬಂಧನ

- Advertisement -

ಬೆಂಗಳೂರು,ಜೂ.1 – ಕೋಟ್ಯಂತರ ರೂ ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ ತಮಿಳುನಾಡು ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದಿಂದ ಬೆಂಗಳೂರಿಗೆ ಬಂದು ಕಾನೂನುಬಾಹಿರವಾಗಿ ಸುಮಾರು 6.5 ಕೆ.ಜಿ ತೂಕದ ಕೋಟ್ಯಂತರ ರೂ ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಮಾಡಲು ಇಬ್ಬರು ವ್ಯಕ್ತಿಗಳು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

- Advertisement -

ಕಾಂಗ್ರೆಸ್ -ಸರ್ಕಾರದ ನಡುವೆ ಅಂತರ ಸೃಷ್ಟಿಯಾಗಿದೆಯೇ?

ಸಿಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಹೋಗಿ ಇಬ್ಬರನ್ನು ಬಂಧಿಸಿ ಕೋಟ್ಯಂತರ ರೂ ಮೌಲ್ಯದ ನಿಷೇತ ಅಂಬರ್ ಗ್ರೀಸ್ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ನಗರದ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

- Advertisement -
RELATED ARTICLES
- Advertisment -

Most Popular