ನ್ಯೂಯಾರ್ಕ,ಡಿ.26-ಪೂರ್ವ ಅಮೆರಿಕದ ಕೆಲವು ಭಾಗಗಳಲ್ಲಿ ತೀವ್ರವಾದ ಹಿಮ ಮತ್ತು ಚಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಚಳಿಗಾಲದ ಚಂಡಮಾರುತದ ಆರ್ಭಟಕ್ಕೆ ಅಮೆರಿಕ ತತ್ತರಿಸಿದ್ದು, ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಜನರು ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ಉಂಟಾಗಿದೆ.
ಪ್ರಮುಖವಾಗಿ ನ್ಯೂಯಾರ್ಕ್ ಬಫಲೋ ಚಂಡಮಾರುತದ ದಾಳಿಗೆ ತುತ್ತಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗೂ ಕೂಡ ತಡೆಯುಂಟುಮಾಡಿದೆ. ಹಿಮಪಾತದಿಂದ ನ್ಯೂಯಾರ್ಕನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಜನ ಸಂಪರ್ಕ ಕಡಿತ, ವಿದ್ಯುತ್ ಅಭಾವ ಮತ್ತು ತಾಪಮಾನ ಕುಸಿತದಿಂದ ಅಮೆರಿಕದ ಜನರು ಕಂಗಾಲಾಗಿದ್ದಾರೆ.
ಈ ಬಗ್ಗೆ ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಮಾತನಾಡಿ, ನಯಾಗರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೋಮವಾರದವರೆಗೆ ಮುಚ್ಚಲಾಗುವುದು ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಟಾಲಿವುಡ್ನ ಖ್ಯಾತ ನಟ ಚಲಪತಿರಾವ್ ವಿಧಿವಶ
ಸ್ಥಳೀಯ ಮಾಹಿತಿ ಪ್ರಕಾರ, ಕಳೆದ ದಶಕದಲ್ಲಿಯೇ ಅತ್ಯಂತ ಭೀಕರವಾದ ಚಂಡಮಾರುತ ಅತಿಯಾಗಿ ಬಾದಿಸಿದೆ 2,400ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಅಟ್ಲಾಂಟಾ, ಚಿಕಾಗೋ, ಡೆನ್ವರ್, ಡೆಟ್ರಾಯಿಟ್ ಮತ್ತು ನ್ಯೂಯಾರ್ಕ್ ಸೇರಿದಂತೆ ಹಲವು ಕಡೆ ಕ್ರಿಸ್ಮಸ್ ದಿ ವೇ ಅನೇಕ ದೇಶಗಳ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಇನ್ನು ಹಲವು ದಿನಗಳು ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#America, #34Killed, #ChristmasDay, #WinterStorm,