ಕಾಡಿನಲ್ಲಿ ಅಮೆರಿಕ ಮಹಿಳೆಯನ್ನು ಕಟ್ಟಿ ಹಾಕಿದ್ದ ಮಾಜಿ ಪತಿ ವಿರುದ್ಧ ಎಫ್‌ಐಆರ್‌

ಮುಂಬೈ, ಜು.30 (ಪಿಟಿಐ) – ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ 50 ವರ್ಷದ ಅಮೆರಿಕ ಮಹಿಳೆಯನ್ನು ಮರಕ್ಕೆ ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾಜಿ ಪತಿ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಬರೆದುಕೊಂಡಿರುವ ಟಿಪ್ಪಣಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಟಿಪ್ಪಣಿಯ ಪ್ರಕಾರ, ಇಲ್ಲಿಂದ ಸುಮಾರು 450 ಕಿಮೀ ದೂರದಲ್ಲಿರುವ ಕರಾವಳಿ ಸಿಂಧುದುರ್ಗ ಜಿಲ್ಲೆಯ ಸೋನುರ್ಲಿ ಗ್ರಾಮದ ಕಾಡಿನಲ್ಲಿ ತನ್ನ ಮಾಜಿ ಪತಿ ತನ್ನನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಿ ಸ್ಥಳವನ್ನು ತೊರೆದಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಸಂಜೆ ಮಹಿಳೆಯ ಕೂಗು ಕೇಳಿದ ಕುರುಬನಿಗೆ ಮಹಿಳೆ ಪತ್ತೆಯಾಗಿದ್ದಾಳೆ. ಸರಪಳಿಯಲ್ಲಿ ಸಿಲುಕಿ ಸಂಕಷ್ಟದಲ್ಲಿರುವ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಆಕೆಯ ಆಧಾರ್‌ ಕಾರ್ಡ್‌ನಲ್ಲಿ ತಮಿಳುನಾಡು ವಿಳಾಸ ಮತ್ತು ಆಕೆಯ ಯುನೈಟೆಡ್‌ ಸ್ಟೇಟ್ಸ್‌‍ ಆಫ್‌ ಅಮೇರಿಕಾ ಪಾಸ್‌‍ಪೋರ್ಟ್‌ನ ಫೋಟೋಕಾಪಿಯನ್ನು ಕಂಡುಕೊಂಡಿದ್ದಾರೆ. ಆಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದೆ. … Continue reading ಕಾಡಿನಲ್ಲಿ ಅಮೆರಿಕ ಮಹಿಳೆಯನ್ನು ಕಟ್ಟಿ ಹಾಕಿದ್ದ ಮಾಜಿ ಪತಿ ವಿರುದ್ಧ ಎಫ್‌ಐಆರ್‌