ಗಾಜಿಯಾಬಾದ್,ಮಾ.6- ಮುಂದಿನ 25 ವರ್ಷಗಳ ಭವಿಷ್ಯಕ್ಕೆ ಸಜ್ಜುಗೊಳ್ಳಲು ಅಮೃತ್ಕಾಲ್ ಅಡಿ ಅಗತ್ಯ ನೀಲನಕ್ಷೆಯನ್ನು ಸಿದ್ದಪಡಿಸುವಂತೆ ಕೇಂದ್ರ ಗೃಹ ಅಮಿತ್ ಷಾ ಸಲಹೆ ಮಾಡಿದ್ದಾರೆ.ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ (ಸಿಐಎಸ್ಎಫ್)ಯ 53ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲಿಡುತ್ತಿದೆ.
ಈ ಹಂತದಲ್ಲಿ ಮತ್ತಷ್ಟು ಕೈಗಾರಿಕೆಗಳು, ಉತ್ಪದನಾ ವಲಯಗಳು ಆರಂಭಗೊಳ್ಳಲಿವೆ. ಅದಕ್ಕಾಗಿ ಸೂಕ್ತ ಭದ್ರತೆ ಒದಗಿಸಲು ನೀಲನಕ್ಷೆಯನ್ನು ತಯಾರು ಮಾಡಿ ಎಂದು ಮಹಾನಿರ್ದೇಶಕ ಶೀಲವರ್ದನ್ ಸಿಂಗ್ಗೆ ಸೂಚಿಸಿದರು.ಕೊರೊನಾ ಕಾಲಘಟ್ಟದಲ್ಲಿ ಒಂದೇ ಭಾರತ್ ಮಿಷನಡಿ ಸ್ವದೇಶಕ್ಕೆ ಮರಳಿದವರನ್ನು ಸಿಐಎಸ್ಎಫ್ ಯೋಧರು ಕಾಳಜಿ ವಹಿಸಿ ಕಾಪಾಡಿದರು. ಈ ಕಾರ್ಯಾಚರಣೆಯಲ್ಲಿ ಕೆಲವು ಯೋಧರು ಪ್ರಾಣ ಕೂಡ ಕಳೆದುಕೊಂಡರು.
ಈಗ ಉಕ್ರೇನ್ ರಷ್ಯಾ ಯುದ್ಧದಿಂದಾಗಿ ಆಪರೇಷನ್ ಗಂಗಾ ಯೋಜನೆಯಡಿ ವಲಸೆ ಬರುತ್ತಿರುವ ಭಾರತೀಯರ ಕಾಳಜಿಗೂ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಸಿಐಎಸ್ಎಫ್ ಪಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಬೇಕಿದೆ. ಸರಾರಿ 94:06 ಪ್ರಮಾಣದಲ್ಲಿ ಮಹಿಳೆಯರ ಪಾತ್ರವಿದೆ. ಅದನ್ನು ಸರಾಸರಿ 80:20ಕ್ಕೆ ಹೆಚ್ಚಿಸಬೇಕಿದೆ ಎಂದರು.
ಕೈಗಾರಿಕಾ ಭದ್ರತೆಗೆ ಖಾಸಗಿಯವರನ್ನು ನಿಯೋಜಿಸಲು ಸಿಐಎಸ್ಎಫ್ ತರಬೇತಿ ನೀಡಬೇಕು. ಹೈಬ್ರೀಡ್ ಮಾದರಿಯಲ್ಲಿ ರಕ್ಷಣಾ ವ್ಯವಸ್ಥೆ ಒದಗಿಸಬೇಕಿದ್ದು, ಹಂತ ಹಂತವಾಗಿ ಖಾಸಗಿಯವರಿಂದಲೇ ಕೈಗಾರಿಕೆಗೆ ಭದ್ರತೆ ಕೊಡಿಸುವ ಮೂಲಕ ಸಿಐಎಸ್ಎಫ್ನ್ನು ಮುಂದಿನ ದಿನಗಳಲ್ಲಿ ಹಿಂಪಡೆಯುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡ್ರೋಣ್ ದಾಳಿ ಆತಂಕ ಹೆಚ್ಚಾಗಿದೆ. ಭಾರತೀಯ ಗಡಿಭದ್ರತಾ ಪಡೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಡ್ರೋಣ್ ಪ್ರತಿರೋಧಕ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಿಐಎಸ್ಎಫ್ ಇದರ ಬಗ್ಗೆ ತರಬೇತಿ ಪಡೆದು ಡ್ರೋಣ್ ದಾಳಿಯನ್ನು ಹತ್ತಿಕ್ಕಬೇಕು ಎಂದು ಹೇಳಿದರು. ದೇಶದ ಅಭಿವೃದ್ದಿಯಲ್ಲಿ ಸಿಐಎಸ್ಎಫ್ನ ಪ್ರಮುಖವಾಗಿದ್ದು, ಈ ಹಿಂದೆ ಈ ಪಡೆಯನ್ನು ನಿರ್ಲಕ್ಷಿಸಲಾಗಿತ್ತು ಎಂದು ತಿಳಿಸಿದರು.
