ಹೊಂದಾಣಿಕೆ ರಾಜಕಾರಣದ ವಿರುದ್ಧ ಅಮಿತ್ ಶಾ ಆಕ್ರೋಶ

Social Share

ಬೆಂಗಳೂರು,ಡಿ.31- ನಿಮ್ಮ ಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಟ್ಟು ಸ್ಥಳೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಎಚ್ಚರಿಸಿದ್ದಾರೆ.

ಕೆಲವರು ಪಕ್ಷದಲ್ಲಿದ್ದು ಕೊಂಡೇ ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಿಕೊಳ್ಳು ತ್ತಾರೆ. ಇದರಿಂದ ಪಕ್ಷಕ್ಕೂ ಹಾನಿ. ಕಾರ್ಯಕರ್ತರು ಕ್ಷೇತ್ರದಲ್ಲಿ ಎದುರಾಳಿಗಳ ವಿರುದ್ದ ಹೋರಾಟ ನಡೆಸಲು ಸಾಧ್ಯವಾಗುವುದಿಲ್ಲ.ಈ ಬಾರಿಯ ಚುನಾವಣೆಯಲ್ಲಿ ಪುನಾವರ್ತನೆ ಯಾಗಬಾರದೆಂದು ಸ್ಥಳೀಯ ನಾಯಕರಿಗೆ ಷಾ ಸೂಚಿಸಿದರು.

2018ರ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್-ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ನಡೆಸಿದ್ದರಿಂದಲೇ ಪೂರ್ಣ ಬಹುಮತ ಬರಲು ಸಾಧ್ಯವಾಗಲಿಲ್ಲ. ವೈಯಕ್ತಿಕ ಸಂಬಂಧಗಳು ಬೇರೆ, ರಾಜಕೀಯ ಸಂಬಂಧಗಳೇ ಬೇರೆ, ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಪಕ್ಷದಲ್ಲಿ ಮುಂದುವರೆಯಬೇಕು. ನಿಮ್ಮ ಒಂದು ಕ್ಷೇತ್ರದ ಹೊಂದಾಣಿಕೆಗಾಗಿ ಪಕ್ಷವನ್ನು ಬಲಿ ಕೊಡಲು ಸಾಧ್ಯವಿಲ್ಲ. ಹೊಂದಾಣಿಕೆ ರಾಜಕಾರಣ ಇಂದೇ ಕೊನೆಯಾಗಬೇಕೆಂದು ಕಟ್ಟಪ್ಪಣೆ ವಿಸಿದ್ದಾರೆ.

ಮೀಸಲಾತಿ ವಿಷಯದಲ್ಲಿ ಮುಖ್ಯಮಂತ್ರಿ ಟೋಪಿ ಹಾಕಿದ್ದಾರೆ : ಡಿಕೆಶಿ

ಹಳೆ ಮೈಸೂರು ಭಾಗದಲ್ಲಿ ನಮಗೆ ಜೆಡಿಎಸ್ ಪ್ರಬಲ ಎದುರಾಳಿ ಎಂಬುದನ್ನು ಯಾರೂ ಮರೆಯಬೇಡಿ. ಇಲ್ಲಿ ನಾವು ಸಂಘಟನೆಯನ್ನು ಬಲಪಡಿಸಿದರೆ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಅವಕಾಶವಿದೆ. ಎದುರಾಳಿಗಳನ್ನು ಟೀಕೆ ಮಾಡಲು ಹಿಂದೆಮುಂದೆ ನೋಡಬೇಡಿ ಎಂದು ಹೇಳಿದ್ದಾರೆ.

ತುಮಕೂರು, ರಾಮನಗರ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಜಿಲ್ಲೆಗಳಲ್ಲಿ ಸಂಘಟನೆಯನ್ನು ಬಲಪಡಿಸಿದರೆ ಬಿಜೆಪಿ 120-125 ಸ್ಥಾನಗಳನ್ನು ಗೆಲ್ಲಲು ಕಷ್ಟವೇನಲ್ಲ.

ಆದರೆ ಇನ್ನು ಕೆಲವರು ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಪಕ್ಷವನ್ನೇ ಬಲಿ ಕೊಡಲು ಮುಂದಾಗಿದ್ದಾರೆ. ಕೆಲವರನ್ನು ಟೀಕೆ ಮಾಡಿದರೆ ಆ ಸಮುದಾಯದ ಮತಗಳು ಎಲ್ಲಿ ಕೈ ತಪ್ಪಿ ಬಿಡಬಹುದೆಂಬ ಭೀತಿ ಕಾಡುತ್ತಿದೆ. ಇದು ಮುಂದುವರೆಯಬಾರದು ಎಂದು ಅಮಿತ್ ಷಾ ಸೂಚಿಸಿದ್ದಾರೆ.

ಚಾಲಕನಿಗೆ ಹೃದಯಘಾತವಾಗಿ ಕಾರಿಗೆ ಗುದ್ದಿದ ಬಸ್‍, ಒಂಬತ್ತು ಮಂದಿ ಸಾವು

ಹಾಸನದಲ್ಲಿ ಪ್ರೀತಂಗೌಡ ಒಂದು ಪ್ರಬಲ ಕುಟುಂಬವನ್ನು ಎದುರು ಹಾಕಿಕೊಂಡು ಚುನಾವಣೆಯಲ್ಲಿ ಗೆದ್ದು ತೋರಿಸಿದ್ದಾರೆ. ಆದರೆ ಕೆಲವರು ಅದೇ ಕುಟುಂಬದ ವಿರುದ್ಧ ಮಾತನಾಡಲು ಹಿಂದೆಮುಂದೆ ನೋಡುತ್ತಾರೆ. ಜಾತಿಯನ್ನು ಬದಿಗಿರಿಸಿ ಧೈರ್ಯದಿಂದ ಚುನಾವಣೆಗೆ ಮುನ್ನುಗ್ಗಿ ಎಂದು ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಅಮಿತ್ ಷಾ ಸೂಚಿಸಿದ್ದಾಗಿ ತಿಳಿದುಬಂದಿದೆ.

ಹಳೆ ಮೈಸೂರು ಭಾಗದಲ್ಲಿ ಯಾವ ಕಾರಣಕ್ಕೂ ಹೊಂದಾಣಿಕೆ ರಾಜಕಾರಣ ಮಾಡಬಾರದು ಎಂದು ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಂಘಟನೆ ಸರಿಹಾದಿಗೆ ತರಲು ಒಂದು ತಿಂಗಳ ಡೆಡ್‍ಲೈನ್ ಕೊಟ್ಟಿರುವ ಅಮಿತ್ ಷಾ, ನಮ್ಮ ಎಲ್ಲ ಯೋಜನೆಗಳು ಸರಿಯಾದ ಮಾರ್ಗದಲ್ಲಿ ಜಾರಿಯಾಗುತ್ತಿರಬೇಕು. ಈಗಿರುವ ವ್ಯವಸ್ಥೆ ಸುಧಾರಣೆ ಆಗಬೇಕು. ಮತ್ತೊಮ್ಮೆ ನಾನು ಬರುವಷ್ಟರಲ್ಲಿ ಎಲ್ಲವೂ ಸರಿಯಾಗಿರಬೇಕು ಎಂದು ತಾಕೀತು ಮಾಡಿದ್ದಾರೆ.

Amit Shah, Bengaluru, BJP, party workers, election,

Articles You Might Like

Share This Article