ತಮ್ಮ ನಿವಾಸದ ಮೇಲೆ ತ್ರಿವರ್ಣಧ್ವಜ ಹಾರಿಸಿದ ಅಮಿತ್ ಷಾ

Social Share

ನವದೆಹಲಿ,ಆ.13- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನರೇಂದ್ರಮೋದಿ ಅವರು ಕರೆ ಕೊಟ್ಟಿರುವ ಹರ್ ಘರ್ ತಿರಂಗ ಅಭಿಯಾನಕ್ಕೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಳಗ್ಗೆ ತಮ್ಮ ನಿವಾಸದ ಮೇಲೆ ತ್ರಿವರ್ಣಧ್ವಜ ಹಾರಿಸಿದರು.

ಇಂದಿನಿಂದ ಆ.15ರವರೆಗೆ ನಡೆಯುವ ಅಭಿಯಾನದ ಹಿನ್ನಲೆಯಲ್ಲಿ ಅಮಿತ್ ಷಾ ತಮ್ಮ ಪತ್ನಿಯೊಂದಿಗೆ ಧ್ವಜಾರೋಹಣ ಮಾಡಿದರು.
ಹರ್ ಘರ್ ತಿರಂಗ ಅಭಿಯಾನವು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಒಂದು ಭಾಗವಾಗಿದೆ. ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರನ್ನು ತಮ್ಮ ತಮ್ಮ ಮನೆಗಳಲ್ಲಿ ಧ್ವಜ ಹಾರಿಸುವಂತೆ ಕರೆ ನೀಡಿದ್ದರು.

ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಹೆಗ್ಗುರುತಾಗಿ ಎಲ್ಲರು ಇದನ್ನು ಉತ್ಸಾಹದಿಂದ ಸ್ವೀಕರಿಸಲು ಉತ್ತೇಜಿಸಲಾಗಿತ್ತು. ಸಾರ್ವಜನಿಕರಿಗೆ ತ್ರಿವರ್ಣ ಧ್ವಜವನ್ನು ಹಾರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಭಾರತದ ಧ್ವಜ ಸಂಹಿತೆ 2002ನ್ನು ಕೇಂದ್ರ ಸರ್ಕಾರವು ಮಾರ್ಪಡಿಸಿದೆ.

ಜುಲೈ 20ರ ಆದೇಶದ ವಿವರಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರದ ರವಾನಿಸಿದ್ದಾರೆ.

Articles You Might Like

Share This Article