ಉಗ್ರರ ಹುಟ್ಟಡಗಿಸಿದ ಅಮಿತ್ ಷಾ : ಜೋಶಿ ಬಣ್ಣನೆ

Social Share

ಹುಬ್ಬಳ್ಳಿ,ಜ.28- ಸರ್ದಾರ್ ವಲ್ಲಭಾಯಿ ಪಟೇಲ್ ಅವರ ನಂತರ ದೇಶದಲ್ಲಿ ಹಲವಾರು ವಿಚಾರಗಳಲ್ಲಿ ತಮ್ಮ ತಾಕತ್ತು ಪ್ರದರ್ಶಿದವರು ಯಾರಾದರು ಇದ್ದರೆ ಅದು ಅಮಿತ್ ಶಾ ಒಬ್ಬರೇ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದರು.

ನಗರರ ಕೆಎಲ್‍ಇ ಸಂಸ್ಥೆಯ ಬಿವಿಬಿ ವಿಶ್ವ ವಿದ್ಯಾಲಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅಮಿತ ಶಾ ಅವರು, ಸ್ವಾತಂತ್ರ್ಯ ನಂತರ ಯಾರೂ ಮಾಡಲು ಆಗದ ಕೆಲಸವನ್ನು ಮಾಡಿದ್ದಾರೆ ಎಂದರು.

ಆರ್ಟಿಕಲ್ 370 ರದ್ದಾಗುವುದು ಸಾಧ್ಯವೇ ಇಲ್ಲ ಹಲವಾರು ಜನ ಸವಾಲು ಹಾಕಿದ್ದರು. ಆದರೆ ಆರ್ಟಿಕಲ್ 370 ವಿಯನ್ನು ತೆಗೆದು ಹಾಕಿ ಉಗ್ರರಿಗೆ ಬಲವಾದ ಪೆಟ್ಟು ಕೊಟ್ಟಿದ್ದು ಅಮಿತ್ ಶಾ ಎಂದು ಪ್ರಶಂಸಿಸಿದರು.
ದೇಶದಲ್ಲಿ ಸುರಕ್ಷತೆ ತಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದನ್ನು ಜಾರಿಗೆ ತರಲು ಶ್ರಮಿಸಿದ ಅಮಿತ್ ಶಾ ಅವರಿಗೆ ತಮ್ಮ ಧನ್ಯವಾದ ತಿಳಿಸುವುದಾಗಿ ಜೋಶಿ ಹೇಳಿದರು.

ಅಮಿತ್ ಷಾ ಆಗಮನ, ಕಾರ್ಯಕರ್ತರಲ್ಲಿ ಹೊಸ ಸಂಚಲನ

ದೇಶದಲ್ಲಿ ನಾವು ಮೋದಿ ಅವರ ಮಾರ್ಗದರ್ಶನಲ್ಲಿ ಕೆಲಸ ಮಾಡುತ್ತಿದ್ದೇವೆ. 70-80ರ ದಶಕದಲ್ಲಿ ಅಕಸ್ಮಾತ್ ಕೆಎಲ್‍ಇ ಕಾಲೇಜು ಇರದೆ ಹೋಗಿದ್ದರೆ ನಾವು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ನಂತರ ಮುಂದೆ ಓದ್ತಿದ್ವೋ ಇಲ್ವೋ ಗೊತ್ತಿಲ್ಲ ಎಂದ ಅವರು, ಕೆಎಲ್‍ಇ ಸಂಸ್ಥೆ ಹಲವಾರು ರೀತಿ ಬದಲಾವಣೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇಂಗ್ಲೆಂಡ್ ಹಿಂದಿಕ್ಕಿ ನಾವು ಐದನೇ ಸ್ಥಾನದಲ್ಲಿದ್ದೇವೆ. ಜಗತ್ತು ಭಾರತದ ಮೇಲೆ ಅನೇಕ ನೀರಿಕ್ಷೆ ಇಟ್ಟಿದೆ. ಸುಮಾರು 300 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಹುಬ್ಬಳ್ಳಿಯಲ್ಲಿ ಆರಂಭವಾಗಿವೆ. ಜಗತ್ತಿನಲ್ಲಿ ಅತ್ಯಂತ ಯುವ ದೇಶ ಭಾರತ. ಜಗತ್ತಿನ ಅವಶ್ಯಕತೆ ನೀಗಿಸುವ ರಾಷ್ಟ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

Amit Shah, Minister, Pralhad Joshi,

Articles You Might Like

Share This Article