ಅದಾನಿ ಗ್ರೂಪ್ ವಿವಾದದಿಂದ ಬಿಜೆಪಿಗೆ ಭಯ ಇಲ್ಲ : ಅಮಿತ್ ಶಾ

Social Share

ನವದೆಹಲಿ,ಫೆ.14- ಅದಾನಿ ಗ್ರೂಪ್ ವಿವಾದದ ಬಗ್ಗೆ ಬಿಜೆಪಿಗೆ ಮರೆಮಾಚವ ಅಥವಾ ಭಯಪಡಲು ಏನೂ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಂಡಿದೆ. ಸಚಿವನಾಗಿ ನಾನು ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಅಮಿತ್ ಶಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಕರ್ನಾಟಕದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಕಳೆದ 2 ತಿಂಗಳಲ್ಲಿ ನಾನು ರಾಜ್ಯಕ್ಕೆ 5 ಬಾರಿ ಭೇಟಿ ನೀಡಿದ್ದೇನೆ.

ನಾನು ರಾಜ್ಯದ ಜನರ ನಾಡಿಮಿಡಿತವನ್ನು ಗ್ರಹಿಸಿದ್ದೇನೆ ಮತ್ತು ಪ್ರಧಾನಿ ಮೋದಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದ್ದೇನೆ ಕರ್ನಾಟಕದಲ್ಲಿ ಬಿಜೆಪಿಗೆ ಭಾರಿ ಜನಾದೇಶ ಸಿಗುತ್ತದೆ ಇದರ ಜೊತೆ ಇದೇ ವರ್ಷ ನಡೆಯುವ ರಾಜಸ್ತಾನ ,ಮಧ್ಯಪ್ರದೇಶ ,ಛತ್ತೀಸ್‍ಗಢದಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಬಿಸಿ ಬಿತ್ತರಿಸಿದ ಸಾಕ್ಷ್ಯಚಿತ್ರದ ಸುತ್ತ ಸಾವಿರ ಪಿತೂರಿಗಳ ಹೊರತಾಗಿಯೂ ಸತ್ಯ ಹೊರಹೊಮ್ಮುತ್ತದೆ. ಆದರೆ ಪ್ರತಿ ಬಾರಿಯೂ ಇಂತಹ ಕುತಂತ್ರದ ನಡೆದರು ಪ್ರಧಾನಿ ಮೋದಿ ಪ್ರಬಲ ಮತ್ತು ಹೆಚ್ಚು ಜನಪ್ರಿಯವಾಗುತ್ತಾರೆ ಎಂದರು.ಈಶಾನ್ಯ ತಾಜ್ಯ ತ್ರಿಪುರದಲ್ಲೂ ಹೊಸ ಶಕೆ ಆರಂಭವಾಗಿದೆ,ಶಾಂತಿ ಭಂಗ ಕೃತ್ಯಗಳು ಕನೆಗಾಣಲಿದೆ ಎಂದು ತಿಳಿಸಿದರು.

#AmitShah, #BJP, #AdaniGroupScam,

Articles You Might Like

Share This Article