ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರ ಗೆಲ್ಲಲು ಅಮಿತ್ ಶಾ ಸೂಚನೆ

Social Share

ಬೆಂಗಳೂರು,ಫೆ.24- ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಕನಿಷ್ಟ 20 ಕ್ಷೇತ್ರಗಳಲ್ಲಿ ಬಿಜೆಪಿಯ ಕಮಲ ಅರಳಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಷಾ ರಾಜ್ಯ ಘಟಕದ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಸ್ಥಳೀಯ ಮಟ್ಟದ ಚುನಾವಣಾ ತಂತ್ರಗಾರಿಕೆ ಭಾರೀ ಯಶಸ್ಸು ತಂದುಕೊಟ್ಟಿದ್ದು ಅದನ್ನು ಅಳವಡಿಸಿಕೊಳ್ಳಬೇಕು. ಪ್ರತಿ ವಾಡ್ರ್ನಲ್ಲಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಬೇಕು. 1+1 ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡು ಪಕ್ಷವನ್ನು ಗೆಲ್ಲಿಸಬೇಕು. ಬೂತ್‍ಗಳಿಗೆ ಸಚಿವರು, ಶಾಸಕರು ಭೇಟಿ ನೀಡಬೇಕು. ವಾರಕ್ಕೊಮ್ಮೆ ಸಮಾಲೋಚನೆ ಸಭೆ ನಡೆಸಬೇಕು ಎಂದು ಟಾಸ್ಕ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ನಮಗೆ ಅತೀ ಹೆಚ್ಚು ಸ್ಥಾನ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಹಿಂದೆ ನಾವು 18 ಸೀಟು ಗೆದ್ದಿದ್ದೇವೆ. ಈ ಬಾರಿ ಪ್ರಯತ್ನ ಹಾಕಿದರೆ ಆ ದಾಖಲೆ ಮುರಿಯುವ ಅವಕಾಶವಿದೆ. ಬೆಂಗಳೂರಿನಲ್ಲಿ ಫೋಕಸ್ ಮಾಡಿ ಕೆಲಸ ಮಾಡಿದರೆ ಹೆಚ್ಚು ಸ್ಥಾನವನ್ನು ನಾವು ಗೆಲ್ಲಬಹುದು. ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಸ್ಥಳೀಯ ನಾಯಕರಿಗೆ ಸಭೆಯಲ್ಲಿ ಹೇಳಿದ್ದಾರೆ.

ಮನೆಯನ್ನು ಒಂದು ಬಾರಿ ಮಾತ್ರ ನಾವು ಗುಡಿಸುವುದಿಲ್ಲ. ಪ್ರತೀ ದಿನ ಮನೆ ಗುಡಿಸುವಂತೆ ಪ್ರತೀ ದಿನವೂ ನಾವು ಕೆಲಸ ಮಾಡಬೇಕು. ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಸಿಗಲಿದೆ ಎಂದು ಮನ್ಸುಖ್ ಮಾಂಡವೀಯ ಕಿವಿಮಾತು ಹೇಳಿದ್ದಾರೆ. ಸಭೆಯಲ್ಲಿ ಮುಸ್ಲಿಮರ ವಿರುದ್ಧವೂ ವಾಗ್ದಾಳಿ ಮಾಡದಂತೆ ಸೂಚನೆ ನೀಡಲಾಗಿದೆ.

ಬಳಿಕ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ, ಮನ್ಸುಖ್ ಮಾಂಡವೀಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಬೆಂಗಳೂರು ನಗರದ ಶಾಸಕರು, ಸಂಸದರು, ಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಪಕ್ಷದ ಜಿಲ್ಲಾ ಉಸ್ತುವಾರಿಗಳು ಪ್ರತ್ಯೇಕವಾಗಿ ಸಭೆ ನಡೆಸಿದರು.

ಈ ವೇಳೆ, ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಅಣ್ಣಾಮಲೈ ಸೇರಿದಂತೆ ಹಲವರು ಉಪಸ್ಥಿತಿರಿದ್ದರು. ಸಭೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಸೀಟ್ ಗೆಲ್ಲುವ ನಿಟ್ಟಿನಲ್ಲಿ ಸಭೆಯಲ್ಲಿ ರಣತಂತ್ರ ರೂಪಿಸಲಾಯಿತು. ಪಕ್ಷ ಸಂಘಟನೆ, ಕ್ಷೇತ್ರವಾರು ತಂತ್ರಗಾರಿಕೆ ಬಗ್ಗೆ ಧರ್ಮೇಂದ್ರ ಪ್ರಧಾನ್ ಖಡಕ್ ಸೂಚನೆ ನೀಡಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-02-2023)

ಸಕರಾತ್ಮಕವಾದ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಬೇಕು, ತೀರಾ ವೈಯಕ್ತಿಕ ವಿಷಯಗಳನ್ನಾಧರಿಸಿ ಟಾರ್ಗೆಟ್ ಮಾಡುವುದು ಬೇಡ ಕೇವಲ ಆಡಳಿತಾತ್ಮಕವಾಗಿ ಟಾರ್ಗೆಟ್ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.

ಹಳೆ ಮೈಸೂರು ಭಾಗದ ಅಮಿತ್ ಶಾ ಟಾಸ್ಕ್ ನಲ್ಲಿ ಯಾವುದೇ ವ್ಯತ್ಯಾಸ ಆಗುವಂತಿಲ್ಲ, ಚುನಾವಣಾ ಹಿನ್ನೆಲೆ ಆರಂಭವಾಗುವ ಪಕ್ಷದ ಯಾತ್ರೆ, ಮೋರ್ಚಾ ಸಮಾವೇಶಗಳಲ್ಲಿ ಆದಷ್ಟೂ ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು ಆದಷ್ಟು ತೀರಾ ವೈಯಕ್ತಿಕ ಟಾರ್ಗೆಟ್ ಬೇಡ ಆಡಳಿತಾತ್ಮಕವಾಗಿ ಟಾರ್ಗೆಟ್ ಇರಲಿ, ಹಿಂದೂ- ಮುಸ್ಲಿಂ ಎಂಬ ರೀತಿಯಲ್ಲಿ ಬೇಡ, ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಟಾರ್ಗೆಟ್ ಬೇಡ, ಟಿಪ್ಪು ವಿಚಾರ ಇರಲಿ ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂಬುದನ್ನೂ ಹೇಳಿ ಎಂದು ಸಲಹೆ ನೀಡಿದರು.

ಬೆಂಗಳೂರಿನಲ್ಲಿ ನಮಗೆ ಅತಿ ಹೆಚ್ಚು ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳೂ ಇವೆ, ನಾವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು ಅಷ್ಟೇ, ಸರಿಯಾದ ಪ್ರಯತ್ನ ಮಾಡಿದರೆ ರಿಸಲ್ಟ್ ಖಂಡಿತಾ ಸಿಗಲಿದೆ. ಈ ಹಿಂದೆ ನಾವು 18 ಸೀಟು ಗೆದ್ದಿದ್ದೆವು. ಈ ಬಾರಿ ಪ್ರಯತ್ನ ಹಾಕಿದರೆ ಆ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಮಾಹಿತಿ ನಮಗೆ ಇದೆ. ಬೆಂಗಳೂರಿನ ನೀವೆಲ್ಲರೂ ಸಮರ್ಥರು ಸಾಮಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಿ ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಸೂಚಿಸಿದರು.

ಪ್ರತೀ ದಿನವೂ ಪಕ್ಷದ ಕೆಲಸ ಮಾಡಬೇಕು: ಸಭೆಯಲ್ಲಿ ಮಾತನಾಡಿದ ಮನ್ಸುಕ್ ಮಾಂಡವೀಯ, ಪಕ್ಷದ ಕಾರ್ಯಕ್ರಮಗಳು ಸೂಕ್ತವಾಗಿ ಕಾರ್ಯರೂಪದಲ್ಲಿರಲಿ ಪೇಜ್ ಪ್ರಮುಖ್, ಬೂತ್ ಸಮಿತಿ ಎಲ್ಲವೂ ಆಕ್ಟೀವ್ ಇರಬೇಕು. ಮನೆಯನ್ನು ಒಂದು ಬಾರಿ ಮಾತ್ರ ನಾವು ಗುಡಿಸುವುದಿಲ್ಲ ಪ್ರತೀ ದಿನ ಮನೆ ಗುಡಿಸುವಂತೆ ಪ್ರತೀ ದಿನವೂ ನಾವು ಪಕ್ಷದ ಕೆಲಸ ಮಾಡಬೇಕು ಆಗ ಮಾತ್ರ ನಿರೀಕ್ಷಿತ ಫಲಿತಾಂಶ ಲಭ್ಯ, ವಾಡ್ರ್ಗಳಲ್ಲಿ ಸಭೆಗಳು ಆಗಬೇಕು. ಸರ್ಕಾರದ ಯೋಜನೆಗಳು ನಿಯಮಿತವಾಗಿ ತಲುಪಬೇಕು. ನಿಮಗೆ ವಹಿಸಲ್ಪಟ್ಟ ಜವಾಬ್ದಾರಿಗಳು ಕಾಲಮಿತಿಯಲ್ಲಿ ನೆರವೇರಲಿ ಎಂದು ಅವರು ಸೂಚನೆ ಕೊಟ್ಟಿದ್ದಾರೆ.

#AssemblyElection2023, #AssemblyElection, #KarnatakaAssemblyElection, #KarnatakaElections2023, #ವಿಧಾನಸಭೆಚುನಾವಣೆ, #ವಿಧಾನಸಭೆಚುನಾವಣೆ2023,

Articles You Might Like

Share This Article