ಅಮಿತ್ ಷಾ ಸೂಚನೆ ನಡುವೆಯೂ ಮಹಾಮೇಳಾವಕ್ಕೆ ಸಜ್ಜಾದ ಎಂಇಎಸ್

Social Share

ಬೆಂಗಳೂರುಮ ಡಿ.16- ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪಿನವರೆಗೆ ಕಾಯುವಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸೂಚನೆ ನೀಡಿದ್ದರೂ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾಮೇಳಾವ ನಡೆಸಲು ನಿರ್ಧರಿಸಿದೆ.

ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲ ಅಧಿವೇಶನ ನಡೆಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಎಂಇಎಸ್ ಮಹಾಮೇಳಾವವನ್ನು ನಡೆಸುತ್ತಿದೆ. ಈ ಮಹಾಮೇಳಾವದಲ್ಲಿ ಕರ್ನಾಟಕದ ಹಲವಾರು ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಲಾಗುತ್ತದೆ.

ಬೆಳಗಾವಿ, ನಿಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸೇರಿದಂತೆ ಗಡಿಭಾಗದಲ್ಲಿರುವ ಕರ್ನಾಟಕದ ಹಲವು ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸುವುದು ಇದರ ಉದ್ದೇಶವಾಗಿದೆ.

ಕಾಂಗ್ರೆಸ್ ಉಗ್ರರ ಪರವೂ, ದೇಶದ ಪರವೂ ಸ್ಪಷ್ಟಪಡಿಸಲಿ : ಸಿಎಂ ಬೊಮ್ಮಾಯಿ

ಡಿ.19ರಂದು ಬೆಳಗಾವಿಯಲ್ಲಿ ಮಹಾಮೇಳಾವ ನಡೆಸಲು ನಾವು ದೃಢವಾಗಿದ್ದೇವೆ. ಕರ್ನಾಟಕ ಬೆಳಗಾವಿಯಲ್ಲಿ 10 ದಿನಗಳ ಚಳಿಗಾಲದ ಅಧಿವೇಶನ ನಡೆಸುತ್ತಿರುವಾಗ ನಾವೇಕೆ ಮಹಾಮೇಳಾವ ನಡೆಸಬಾರದು ಎಂದು ಎಂಇಎಸ್ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಷಾ ಹೇಳಿದ ಅಂಶಗಳು ಗಡಿ ವಿವಾದದ ಬಗ್ಗೆ ಸ್ಪಷ್ಟತೆಗೆ ಸಹಾಯ ಮಾಡಲಿಲ್ಲ. ಮಹಾಮೇಳಾವಕ್ಕೆ ನಾವು ಈಗಾಗಲೇ ಮಹಾರಾಷ್ಟ್ರದ ಎಲ್ಲ ಪ್ರಮುಖ ನಾಯಕರನ್ನು ಆಹ್ವಾನಿಸಿದ್ದೇವೆ. ಅಮಿತ್ ಷಾ ಹೇಳಿದಂತೆ ಎರಡೂ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳಬೇಕಾದರೆ ಗಡಿ ವಿವಾದಕ್ಕೆ ಸಂಬಂಧಿಸಿದಂತೆ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಎರಡೂ ರಾಜ್ಯಗಳು ಯಥಾಸ್ಥಿತಿ ಕಾಯ್ದುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಪ್ರಮುಖರ ಹಾಜರಾತಿಯನ್ನು ಲೆಕ್ಕಿಸದೆ ನಾವು ಈ ಮಹಾಮೇಳಾವವನ್ನು ನಡೆಸುತ್ತೇವೆ ಎಂದು ಎಂಇಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡೂ ಕಡೆಯವರು ಒಪ್ಪಿಕೊಂಡಿರುವ ಷರತ್ತುಗಳ ಪ್ರಕಾರ ಡಿ.19 ರಂದು ಎಂಇಎಸ್‍ನ ಸಮಾನಾಂತರ ಅಧಿವೇಶನ ಸೇರಿದಂತೆ ಗಡಿಯಲ್ಲಿ ಆಯೋಜಿಸುವ ಕರ್ನಾಟಕ ವಿರೋಧಿ ಕಾರ್ಯಕ್ರಮಗಳಿಗೆ ಮಹಾರಾಷ್ಟ್ರದ ಯಾವುದೇ ನಾಯಕರು ಭಾಗವಹಿಸಬಾರದು ಎಂಬುದು ಕನ್ನಡ ಪರ ಸಂಘಟನೆಯ ಹೋರಾಟಗಾರರ ಒತ್ತಾಯವಾಗಿದೆ.

ನೇಕಾರ ಸಮ್ಮಾನ್ ಯೋಜನೆ ಜಾರಿ: 5000ರೂ. ನೇರ ನಗದು ವರ್ಗಾವಣೆ..

ಒಂದು ವೇಳೆ ಎಂಇಎಸ್ ಕಾನೂನು ಉಲ್ಲಂಘಿಸಿ ಸಮಾವೇಶ ನಡೆಸಿದರೆ, ನಾವು ಕೂಡ ಕನ್ನಡಿಗರ ಪರವಾಗಿ ಸಮಾವೇಶ ನಡೆಸುವುದು ಅನಿವಾರ್ಯವಾಗುತ್ತದೆ. ಮುಂದೆ ನಡೆಯುವ ಎಲ್ಲಾ ಆನಾಹುತಗಳಿಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆಗಳ ಮುಖಂಡರು ಎಚ್ಚರಿಕೆ ಕೊಟ್ಟಿದ್ದಾರೆ.

ಅಧಿವೇಶನ ನಡೆಯುವ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರವು ಟಿಳಕವಾಡಿಯ ವ್ಯಾಕ್ಸಿನ್ ಡಿಪೋದಲ್ಲಿ ನಡೆಸಲು ಉದ್ದೇಶಿಸಿರುವ ಎಂಇಎಸ್‍ಗೆ ಸಮಾನಾಂತರ ಅಧಿವೇಶನ ನಡೆಸಲು ಇನ್ನೂ ಅನುಮತಿ ನೀಡಿಲ್ಲ.

Amit Shah, peace, MES, convene, Maha Melava, Belagavi,

Articles You Might Like

Share This Article