ಹೈದರಾಬಾದ್,ಫೆ.11- ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಹಿಂಸಾಕೃತ್ಯಗಳು ಕ್ಷೀಣಿಸಿದ್ದು, ಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕೇಂದ್ರ ಗೃಹ ಸಚಿವರ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ (ಎಸ್‍ವಿಪಿಎನ್‍ಪಿಎ)ನಲ್ಲಿ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಪ್ರೊಬೇಷನರ್ಸ್‍ನ 74 ನೇ ಬ್ಯಾಚ್‍ನ ಪರೇಡ್‍ನಲ್ಲಿ ಮಾತನಾಡಿದ ಅವರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಗಳನ್ನು ನಿಷೇಧ ಮಾಡಿದ ದಿನ ದೇಶಾದ್ಯಂತ ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳ ಅಡಿಯಲ್ಲಿ ಎಲ್ಲಾ ರಾಜ್ಯಗಳ ಭದ್ರತಾ ವ್ಯವಸ್ಥೆ ಏಕ ಕಾಲಕ್ಕೆ ಯಶಸ್ವಿ ಕಾರ್ಯಾಚರಣೆ ನಡೆಸಿದವು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ನಿಷೇಧಿಸುವ ಮೂಲಕ ಜಗತ್ತಿಗೆ ಯಶಸ್ವಿ ಉದಾಹರಣೆಯನ್ನು ನೀಡಲಾಗಿದೆ ಎಂದರು.
ಯುದ್ಧ ನಿಲ್ಲಿಸುವಂತೆ ಭಾರತ ರಷ್ಯಾದ ಮನವೊಲಿಸಲಿಸಬೇಕು : ಅಮೆರಿಕ
ಎಂಟು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು, ಈಶಾನ್ಯ ಭಾಗದಲ್ಲಿ ಎಡಪಂಥೀಯ ಉಗ್ರವಾದದ ದಂಗೆಯನ್ನು ನಿಯಂತ್ರಿಸುವಲ್ಲಿಯಶಸ್ವಿಯಾಗಿದ್ದೇವೆ. ಪ್ರಜಾಪ್ರಭುತ್ವದ ಕಡೆಗೆ ನಮ್ಮ ಬದ್ಧತೆ ಎಷ್ಟು ದೃಢವಾಗಿದೆ ಮತ್ತು ಬಲವಾಗಿದೆ ಎಂಬುದನ್ನು ಇದು ತೋರಿಸುತ್ತದೆ.
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ, ಭಯೋತ್ಪಾದನೆ ನಿಗ್ರಹ ಕಾನೂನುಗಳಿಗೆ ಬಲವಾದ ಚೌಕಟ್ಟು ಮತ್ತು ಏಜೆನ್ಸಿಗಳ ಬಲವರ್ಧನೆ ಮತ್ತು ದೃಢವಾದ ರಾಜಕೀಯ ಇಚ್ಛಾಶಕ್ತಿಯಿಂದಾಗಿ ಭಯೋತ್ಪಾದನೆ ಸಂಬಂಧಿತ ಘಟನೆಗಳು ನಿರ್ಮೂಲನೆಯಾಗುತ್ತಿವೆ ಎಂದರು.
ವೈಎಸ್‍ಆರ್ ಕಾಂಗ್ರೆಸ್ ಸಂಸದನ ಪುತ್ರ ಅರೆಸ್ಟ್
ಕಳೆದ ಏಳು ದಶಕಗಳಲ್ಲಿ ಭಾರತ ಹಲವಾರು ಏರಿಳಿತಗಳನ್ನು ಕಂಡಿದೆ ಮತ್ತು ಆಂತರಿಕ ಭದ್ರತೆಯಲ್ಲಿ ಹಲವಾರು ಸವಾಲಿನ ಸಮಯಗಳನ್ನು ಎದುರಿಸಿದೆ. 36 ಸಾವಿರಕ್ಕೂ ಹೆಚ್ಚು ಪೊಲೀಸ್‍ರು ಕರ್ತವ್ಯ ನಿರ್ವಹಣೆಯಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಪರೇಡ್‍ನಲ್ಲಿ 166 ಪ್ರಶಿಕ್ಷಣ ಐಪಿಎಸ್ ಅಧಿಕಾರಿಗಳು, 29 ವಿದೇಶದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಒಟ್ಟು 195 ಮಂದಿ ಭಾಗವಹಿಸಿದ್ದರು.
Amit Shah, review, passing, parade, National Police Academy,