ಇಂದು ರಾಜ್ಯಕ್ಕೆ ಅಮಿತ್ ಷಾ ಆಗಮನ

Social Share

ಬೆಂಗಳೂರು, ಡಿ.29- ದಕ್ಷಿಣ ದಂಡಯಾತ್ರೆಗೆ ಸಜ್ಜಾಗಿ ಕಮಲ ಅರಳಿಸಲು ಪಣ ತೊಟ್ಟಿರುವ ಚುನಾವಣಾ ಚಾಣಕ್ಯ ಅಮಿತ್ ಷಾ ಅವರು ಇಂದು ಸಂಜೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗೆ ಈಗಾಗಲೇ ಟಾಸ್ಕ್ ಕೊಟ್ಟಿದ್ದು, ಕಾರ್ಯಕರ್ತರನ್ನು ಹುರಿದುಂಬಿಸಿ ಮುಂದಿನ ಚುನಾವಣೆಗೆ ಗೆಲುವಿನ ಸಿದ್ಧತೆ ಮಾಡಿಕೊಳ್ಳಲು ರಣತಂತ್ರ ರೂಪಿಸಲಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕೆಂದು ಖಡಕ್ ಸಂದೇಶ ನೀಡುವ ಮೂಲಕ ಕಾರ್ಯಕರ್ತರನ್ನು ಅಲರ್ಟ್ ಮಾಡಲು ಅಮಿತ್ ಷಾ ಚಾಣಕ್ಯ ತಂತ್ರ ಹೆಣೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೇಸರಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಾಗಲೇ ಸಜ್ಜಾಗಿ ಜನಸಂಕಲ್ಪ ಯಾತ್ರೆ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದೆ. ಅಮಿತ್ ಷಾ ಅವರು ಮತ್ತಷ್ಟು ಟಾನಿಕ್ ನೀಡಿ ವಿಶೇಷವಾಗಿ ಮೈಸೂರು ಭಾಗದಲ್ಲಿ ಕಮಲ ಅರಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೆ.

ಮಂಡ್ಯದಲ್ಲಿ ನಾಳೆ ಬೃಹತ್ ಸಮಾವೇಶ ನಡೆಯಲಿದೆ. ಮಂಡ್ಯ ಜಿಲ್ಲೆಯಲ್ಲಿ ಹೈನುಗಾರಿಕೆ ರೈತರ ಉಪಕಸುಬಾಗಿದೆ. ಹೀಗಾಗಿ ಅಲ್ಲಿ ಸಮಾವೇಶಕ್ಕೂ ಮುನ್ನ ಮೆಗಾಡೈರಿ ಉದ್ಘಾಟನೆ ಮಾಡುವ ಮೂಲಕ ಹೈನು ಕೃಷಿಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

ಕನ್ಯೆ ಹುಡುಕಾಟದಲ್ಲಿ ರಾಹುಲ್‍ ಗಾಂಧಿ, ಮನದನ್ನೆ ಹೇಗಿರಬೇಕಂತೆ ಗೊತ್ತಾ..?

ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಭದ್ರ ನೆಲೆಯೂರಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಪ್ರಭಾವವಿಲ್ಲ. ಹೀಗಾಗಿ ಈಗಿನಿಂದಲೇ ಚುನಾವಣಾ ತಂತ್ರಗಳನ್ನು ಹೆಣೆಯಲು ಮುಂದಾಗಿದ್ದಾರೆ. ಕನಿಷ್ಟ 25 ರಿಂದ 30 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಅಮಿತ್ ಷಾ ಅವರದ್ದಾಗಿದೆ.

ಈಶಾನ್ಯ ಭಾರತದಲ್ಲಿ ಯಾವ ರೀತಿ ಬಿಜೆಪಿಯನ್ನು ಸಂಘಟಿಸಿ ಅಕಾರಕ್ಕೆ ತರಲಾಗಿದೆಯೋ ಅದೇ ರೀತಿ ಹಳೆ ಮೈಸೂರು ಭಾಗದಲ್ಲೂ ಕೂಡ ಬಿಜೆಪಿಯನ್ನು ಸಂಘಟಿಸುವುದು ಅಮಿತ್ ಷಾ ಅವರ ಸ್ಪಷ್ಟ ಗುರಿಯಾಗಿದೆ.
ಈ ಹಿನ್ನೆಲೆಯಲ್ಲಿ ಹತ್ತು-ಹಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬೂತ್ ಅಧ್ಯಕ್ಷರೊಂದಿಗೆ ಸಮಾಲೋಚನೆ, ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚೆ, ಮುಂದಿನ ಚುನಾವಣಾ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಮಹತ್ವದ ಸಮಾಲೋಚನೆಗಳನ್ನು ಕೂಡ ನಡೆಸಲಿದ್ದಾರೆ.

ಇಂದು ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿರುವ ಅವರು ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಹಲವು ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಹಿಂಡಲಗಾ ಜೈಲಿಗೆ ಗೃಹ ಸಚಿವ ಜ್ಞಾನೇಂದ್ರ ದಿಡೀರ್ ಭೇಟಿ

ಡಿ.30ರಂದು ಮಧ್ಯಾಹ್ನ 1 ಗಂಟೆಗೆ ಮಂಡ್ಯ ನಗರದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಅಮಿತ್ ಷಾ ಭಾಷಣ ಮಾಡಲಿದ್ದಾರೆ. ಮದ್ದೂರಿನಲ್ಲಿ ಮೆಗಾಡೈರಿ ಉದ್ಘಾಟನೆ, ಯಶಸ್ವಿನಿ ವಿಮಾ ಯೋಜನೆಗೆ ಚಾಲನೆ ಕೊಡಲಿದ್ದಾರೆ. ಮೈಸೂರು, ಮಂಡ್ಯ, ರಾಮನಗರ, ಹಾಸನ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಿಜೆಪಿ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಅಮಿತ್ ಷಾ ಅವರ ಆಗಮನ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಅಮಿತ್ ಷಾ ಅವರು ಮಂಡ್ಯಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಮಂಡ್ಯ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು, ಅಮಿತ್ ಷಾ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಜಡ್‍ಪ್ಲಸ್ ಭದ್ರತೆ ಇರುವ ಕಾರಣ ವಿವಿಗೆ ರಜೆ ಘೋಷಣೆ ಮಾಡಲಾಗಿದೆ.

Amit Shah, visit, poll-bound, Karnataka, , campaign, Mandya,

Articles You Might Like

Share This Article