ಉತ್ತರಖಂಡ್‍ಗೆ ಷಾ ಭೇಟಿ ; ರೈತರು, ಪರಿಶಿಷ್ಟರು, ಮಹಿಳೆಯರೊಂದಿಗೆ ಸಂವಾದ

Social Share

ನವದೆಹಲಿ,ಜ.28- ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಷಾ ಅವರು ಇಂದು ಅಸ್ಸಾಂಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಮಾಜದ ವಿವಿಧ ಸ್ತರದ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರಖಂಡ್ ಪ್ರವಾಸದ ಇಂದಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇವಭೂಮಿ ಉತ್ತರಖಂಡ್‍ಗೆ ಭೇಟಿ ನೀಡುತ್ತಿದ್ದು, ರುದ್ರಪ್ರಯಾಗ್ ದೇಗುಲಕ್ಕೆ ತೆರಳಿ ಶಿವನ ದರ್ಶನ ಪಡೆದು ಮುಂದಿನ ಕೆಲಸಕಾರ್ಯಗಳನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. ಇಂದು 11.40ಕ್ಕೆ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯಕ್ರಮ ಕೈಗೊಂಡು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಬಳಿಕ ರೈತರು ಮತ್ತು ಮಾಜಿ ಸೇನಾ ಸಿಬ್ಬಂದಿಯೊಂದಿಗೆ ವೈಯಕ್ತಿಕ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಮಧ್ಯಾಹ್ನ 2 ಗಂಟೆ ಮಂತ್ರಿಶಕ್ತಿ ಸಂವಾದ್ ಕಾರ್ಯಕ್ರಮದಡಿ ಮಹಿಳೆಯರೊಂದಿಗೆ ಸಂವಾದ ನಡೆಸುತ್ತಿದ್ದು, ಗೃಹ ಸಚಿವರ ಐದನೇ ಕಾರ್ಯಕ್ರಮವು 3.15ರ ಸುಮಾರಿಗೆ ರಾಜ್ಯದಲ್ಲಿ ಎಸ್‍ಸಿ ಜೊತೆಗಿನ ಅವರ ಸಂವಾದದೊಂದಿಗೆ ಮುಕ್ತಾಯಗೊಳ್ಳಲಿದೆ.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಗೃಹ ಸಚಿವರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದ್ದು, ಎಲ್ಲಾ ಸಮುದಾಯದ ಮತಗಳನ್ನು ಸೆಳೆಯುವುದರೊಂದಿಗೆ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಷಾ ಹಲವು ಸಲಹೆ-ಸೂಚನೆಗಳನ್ನು ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಖಂಡನ್ 70 ಸ್ಥಾನಗಳಿಗೆ ಒಂದನೆ ಹಂತದಲ್ಲಿ ಫೆಬ್ರವರಿ 14ರಂದು ಚುನಾವಣೆಯು ನಡೆಯುತ್ತಿದೆ. ಮಾ.10ರಂದು ಮತ ಎಣಿಕೆ ನಡೆಯಲಿದೆ. ಉತ್ತರಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ, ಪಂಜಾಬ್‍ನ 117 , ಮಣಿಪುರ 60 ಮತ್ತು ಗೋವಾದ 40 ಸ್ಥಾನಗಳ ಮತ ಎಣಿಕೆ ಯು ಕಾರ್ಯ ಅಂದೇ ನಡೆಯಲಿದೆ.

Articles You Might Like

Share This Article