ಇತಿಹಾಸ ಮರು ರಚನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ : ಅಮಿತ್ ಶಾ

Social Share

ಬೆಂಗಳೂರು, ನ.25- ಇತಿಹಾಸ ಮರು ರಚನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲೆಸೆದಿದ್ದಾರೆ. ಈವರೆಗಿನ ತಿರುಚಲಾಗಿರುವ ಇತಿಹಾಸವನ್ನು ಮರು ರಚನೆ ಮಾಡುವ ಅಗತ್ಯವಿದೆ. ಅದಕ್ಕಾಗಿ ತಾಯಿನಾಡಿಗಾಗಿ ಹೋರಾಟ ಮಾಡಿದ 30 ಶ್ರೇಷ್ಠ ರಾಜರ ಮತ್ತು 300 ಧೀರೋತ್ತ ಯೋಧರ ಇತಿಹಾಸವನ್ನು ಹೊಸದಾಗಿ ಬರೆಯಬೇಕಿದೆ.

ವೀರ್ ಲಚಿತ್ ಬರ್ಪುಖನ್ ಅವರು ಹೋರಾಟ ಮಾಡದೇ ಇದ್ದರೆ ಈಶಾನ್ಯ ಭಾಗ ಭಾರತದಲ್ಲಿ ಉಳಿಯುತ್ತಿರಲಿಲ್ಲ ಎಂದು ಪೌರಾಣಿಕ್ ಅಹೊಂ ಜನರಲ್ ಅವರ ಜನ್ಮ ವರ್ಷಾಚರಣೆಯ ವೇಳೆ ಹೇಳಿದರು.

ಹೋರಾಟಗಾರರು ಆಗ್ನೇಯ ಏಷ್ಯಾವನ್ನು ಧಾರ್ಮಿಕ ಮತಾಂದ ಔರಂಗ ಜೇಬ್ ನಿಂದ ರಚಿಸಿದ್ದರು. ಲಚಿತ್ ಬರ್ಪುಖನ್ ಅವರ ಜೀವನ ಚರಿತ್ರೆ ಕುರಿತ ಪುಸ್ತಕವನ್ನು ಭಾರತೀಯ ಹತ್ತು ಭಾಷೆಗಳಿಗೆ ಭಾಷಾಂತರಿಸುವಂತೆ ಇದೇ ಸಂದರ್ಭದಲ್ಲಿ ಅಮಿತ್ ಶಾ ಸೂಚಿಸಿದರು.

ಕಾಂಗ್ರೆಸ್‌ ಸಭೆಯಲ್ಲೇ ಹೃದಯಾಘಾತದಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದನೂರು ನಿಧನ

ನಮ್ಮ ಇತಿಹಾಸವನ್ನು ತಿರುಚಲಾಗಿದೆ ಎಂಬ ದೂರುಗಳು ಪದೇ ಪದೇ ಬರುತ್ತವೆ. ಈಗ ಅದು ಸರಿಪಡಿಸುವ ಕಾಲ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ವಿವಿಧ ಭಾಗಗಳಲ್ಲಿ 150ಕ್ಕೂ ಹೆಚ್ಚು ವರ್ಷ ಕಾಲ ಆಳ್ವಿಕೆ ನಡೆಸಿದ ಭಾರತೀಯ ಸಾಮ್ರಾಜ್ಯಗಳಲ್ಲಿ 30 ರಾಜ ಮನೆತನಗಳ ಇತಿಹಾಸವನ್ನು ವ್ಯಾಪಕ ಶೋಧನೆ ಮಾಡಬೇಕಿದೆ.

ಕೇಜ್ರಿವಾಲ್ ಹತ್ಯೆಗೆ ಸಂಚು ಆರೋಪ, ತನಿಖೆಗೆ ಬಿಜೆಪಿ ಆಗ್ರಹ

ಈ ರೀತಿಯ ಪ್ರಯತ್ನಗಳಿಂದ ಮಾತ್ರ ನೈಜ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯ. ಸುಳ್ಳು ಮತ್ತು ಸ್ವಯಂ ಪ್ರೇರಿತ ಇತಿಹಾಸಗಳು ದಾರಿ ತಪ್ಪಿಸಿವೆ ಎಂದು ಅವರು ಹೇಳಿದರು.

Amit Shah, urges, historians, rewrite, history,

Articles You Might Like

Share This Article