ಮೂವರು ಭಯೋತ್ಪಾದಕ ಸಹಚರರ ಬಂಧನ

Social Share

ಅಮೃತ್‍ಸರ, ಅ.21- ದೆಹಲಿ ಪೊಲೀಸ್ ಮತ್ತು ಗ್ಯಾಂಗ್‍ಸ್ಟರ್ ವಿರೋಧಿ ಕಾರ್ಯಪಡೆ ಹಾಗೂ ಅಮೃತ್‍ಸರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಕೆನಡಾ ಮೂಲದ ಭಯೋತ್ಪಾದಕ ಲಿಕ್ವಿರ್‍ಸಿಂಗ್ ಲಂಡಾರನ ಮೂವರು ಸಹಚರರನ್ನು ಬಂಧಿಸಲಾಗಿದೆ.

ಕೆನಡಾದ ಲಂಡಾ ದೀಪಾವಳಿ ಆಸು ಪಾಸಿನಲ್ಲಿ ಪಂಜಾಬ್‍ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧತೆ ನಡೆಸಿದ್ದ ಎಂಬ ಸುದ್ದಿ ಪೊಲೀಸ್ ಪಡೆಗಳಿಗೆ ಸಿಕ್ಕಿತ್ತು. ಇದರ ಸುಳಿವು ಅರಿತ ದೆಹಲಿ ಪೊಲೀಸರು ಅಮೃತ್‍ಸರಕ್ಕೆ ತೆರಳಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ದೆಹಲಿ ಪೊಲೀಸರು ಅಮೃತ್‍ಸರ ಪೊಲೀಸರ ಸಹಾಯದಿಂದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಂಡಾನ ಈ ಮೂವರು ಸಹಚರರು ಉಳಿದುಕೊಂಡಿದ್ದ ಕೊಠಡಿಯನ್ನು ತಪಾಸಣೆ ನಡೆಸಿದಾಗ ಅವರ ಬಳಿ ಇದ್ದ ಮೂರು ಪಿಸ್ತೂಲ್‍ಗಳು, ಒಂದು ಎಕೆ-47 ವಶಪಡಿಸಿಕೊಳ್ಳಲಾಗಿದೆ.

ಈ ಮೂವರು ಆರೋಪಿಗಳು ಭಯೋತ್ಪಾದಕ ಲಾಂಡಾ ಜತೆ ಸೇರಿ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಡಿಸಿಪಿ ಮುಖವಿಂದರ್‍ಸಿಂಗ್ ಬುಲ್ಲಾರ ತಿಳಿಸಿದ್ದಾರೆ.

Articles You Might Like

Share This Article