ಅಮೂಲ್‍ನ ಹಾಲಿನ ದರ 3 ರೂ. ಹೆಚ್ಚಳ

Social Share

ನವದೆಹಲಿ,ಫೆ.3- ಅಮೂಲ್‍ನ ಹಾಲಿನ ದರದಲ್ಲಿ ಇಂದಿನಿಂದ 3 ರೂ. ಏರಿಕೆ ಆಗಿದೆ ಎಂದು ಗುಜರಾತ್ ಡೈರಿ ಕೋ ಅಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಆದೇಶ ಹೊರಡಿಸಿದೆ.

ಹೊಸ ದರ ಪರಿಷ್ಕರಣೆಯ ಪ್ರಕಾರ ಒಂದು ಲೀಟರ್ ಅಮೂಲ್ ತಾಜಾ ಹಾಲಿನ ದರವು 54 ರೂ.ಗೆ ಏರಿಕೆಯಾಗಿದ್ದರೆ, ಅಮೂಲ್ ಎ 2 ಎಮ್ಮೆ ಹಾಲಿನ ದರವು ಲೀಟರ್‍ಗೆ 70 ರೂ. ಮುಟ್ಟಿದೆ.

ಕಳೆದ ಅಕ್ಟೋಬರ್‍ನಲ್ಲಷ್ಟೇ ಗುಜರಾತ್ ಕೋ ಅಪರೇಟಿವ್ ಹಾಲಿನ ಮಾರ್ಕೆಟಿಂಗ್ ಫೆಡರೇಷನ್ ಗೋಲ್ಡ್, ತಾಜಾ ಮತ್ತು ಶಕ್ತಿ ಬ್ರಾಂಡ್‍ನ ಲೀಟರ್ ಹಾಲಿನ ಮೇಲೆ 2 ರೂ. ದರ ಹೆಚ್ಚಿಗೆ ಮಾಡಿತ್ತು. ಈಗ ಮತ್ತೆ 3 ರೂ. ಏರಿಕೆ ಮಾಡುವ ಮೂಲಕ ಗ್ರಾಹಕರ ಜೋಬಿಗೆ ಹೆಚ್ಚಿನ ಹೊರೆ ಹಾಕಿದೆ.

ಎಂಜಿನ್‍ನಲ್ಲಿ ಬೆಂಕಿ : ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಮಾರ್ಕೆಟಿಂಗ್ ಫೆಡರೇಷನ್ ಹೊರಡಿಸಿರುವ ಆದೇಶದ ಪ್ರಕಾರ ಅಮೂಲ್‍ನ ಹಾಲಿನ ದರ ಹೆಚ್ಚಿಸಿದ್ದು ಶುಕ್ರವಾರ (ಫೆ.3)ರಿಂದಲೇ ಪರಿಷ್ಕøತ ದರವು ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಹಾಲಿನ ಒಟ್ಟಾರೆ ಕಾರ್ಯಾಚರಣೆ, ಉತ್ಪಾದನೆ ಹಾಗೂ ರಾಸುಗಳ ಮೇವಿನ ದರ ಶೇ. 20 ರಷ್ಟು ಏರಿಕೆ ಆಗಿರುವುದರಿಂದ ಅಮೂಲ್‍ನ ಎಲ್ಲಾ ಹಾಲಿನ ದರವನ್ನು ಹೆಚ್ಚಿಸಲಾಗಿದೆ ಎಂದು ಫೆಡರೇಷನ್ ತಿಳಿಸಿದೆ.

Amul, hikes, milk prices, ₹3 per litre,

Articles You Might Like

Share This Article