ಅಂದರ್ ಬಾರ್ : ಸಿಸಿಬಿ ದಾಳಿ, 24 ಮಂದಿ ಸೆರೆ, 2.52 ಲಕ್ಷ ನಗದು ವಶ

Social Share

ಬೆಂಗಳೂರು,ಜು.11-ಸಿಸಿಬಿ ಪೊಲೀಸರು ಎರಡು ಕಡೆ ದಾಳಿ ಮಾಡಿ ಅಂದರ್‍ ಬಾಹರ್ ಜೂಜಾಟದಲ್ಲಿ ತೊಡಗಿದ್ದ 24 ಮಂದಿಯನ್ನು ಬಂಧಿಸಿ ,2.52 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರ: ಸಿಂಹಾದ್ರಿ ಲೇಔಟ್, ಸಿಂಗಾಪುರ ವಿಲೇಜ್, ಕಮಾಂಡರ್ ಗ್ಲೋರಿ ಅಪಾರ್ಟ್‍ಮೆಂಟ್ ಹತ್ತಿರ ವಿರುವ 1ನೇ ಮಹಡಿಯ ವಾಸದ ಮನೆಯಲ್ಲಿ ಇಸ್ಪೀಟ್ ಜೂಡಜಾಡುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಮನೆ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 13 ಮಂದಿಯನ್ನು ಬಂಧಿಸಿ 1.50 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪ್ರಕರಣ ದಾಖಲಾಗಿದೆ.

ಹಲಸೂರುಗೇಟ್:
ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತ ಪೇಟೆ ಮುಖ್ಯರಸ್ತೆ, ಅಶೋಕ ಕಾಂಪ್ಲೆಕ್ಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಶ್ರೀರಾಮ ಲಾಡ್ಜ್‍ನ ರೂಮ್‍ವೊಂದರಲ್ಲಿ ಅಂದರ್-ಬಾಹರ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಸಿಸಿಬಿ ಅಕಾರಿಗಳು ಸ್ಥಳದ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಬಂಧಿಸಿ 1,01,300 ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Articles You Might Like

Share This Article