ಬೈಕ್‍ ಕಳ್ಳತನ ಮಾಡುತ್ತಿದ್ದ ಆಂಧ್ರದ ವ್ಯಕ್ತಿ ಬಂಧನ; 10 ದ್ವಿಚಕ್ರ ವಾಹನ ಜಪ್ತಿ

Spread the love

ಬೆಂಗಳೂರು,ಮೇ 24- ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡು ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ರಾಜ್ಯದ ಕುಪ್ಪಂನ ಲಕ್ಷ್ಮೀಪತಿ(24) ಬಂಧಿತ ಆರೋಪಿ. ಐಟಿಐನಲ್ಲಿ ಫಿಟ್ಟರ್ ವ್ಯಾಸಂಗ ಮಾಡಿದ್ದ ಈತ ಹೊಸೂರು ಬಳಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಹಣ ಕಳೆದುಕೊಂಡು ಕಳ್ಳತನಕ್ಕೆ ಇಳಿದಿದ್ದನು. ಈತನಿಂದ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಹಾಗೂ ಬೆಂಗಳೂರು ನಗರದ ಆಡುಗೋಡಿ, ಭಾರತಿನಗರ ಮುಂತಾದ ಕಡೆಗಳಲ್ಲಿ ಕಳವು ಮಾಡಿದ್ದ ಆರು ಹೀರೋ ಹೊಂಡಾ ಸ್ಪೆಂಡರ್ ವಾಹನಗಳು, 3 ಹೊಂಡಾ ಡಿಯೋ ವಾಹನಗಳು ಹಾಗೂ ಬಜಾಜ್ ಡಿಸ್ಕವರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ.ಎಸ್ ಗುಳೇದ್, ಪುಲಿಕೇಶಿನಗರ ಉಪವಿಭಾಗದ ಎಸಿಪಿ ಅಬ್ದುಲ್ ಖಾದರ್ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ರವಿಶಂಕರ್ ಅವರ ನೇತೃತ್ವದ ಸಿಬ್ಬಂದಿ ತಂಡ ಆರೋಪಿಯನ್ನು ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಯಾಗಿದೆ.

Facebook Comments