ಹೈದರಾಬಾದ್.ಮಾ.9-ದಾರಿ ತಪ್ಪಿದ ನಾಲ್ಕು ಹುಲಿ ಮರಿಗಳನ್ನು ತಾಯಿ ಬಳಿ ಸೇರಿಸಲು ಆಂಧ್ರ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ-ಕರ್ನೂಲ್ ಪ್ರದೇಶ ಬಳಿಯ ಕೃಷಿ ಹೊಲದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ಪತ್ತೆಯಾಗಿವೆ.
ಸಣ್ಣ ಹುಲಿ ಮರಿಗಳನ್ನು ಬೀದಿ ನಾಯಿಗಳಿಂದ ರಕ್ಷಿಸಲು ಅವರು ಮೊದಲು ಅವುಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿ ನಂತರ ಪಶುವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮರಿಗಳನ್ನು ಕಳೆದುಕೊಂಡಿರುವ ಹುಲಿ ಆಕ್ರಮಣಕಾರಿಯಾಗುವ ಸಾಧ್ಯತೆ ಇರುವುದರಿಂದ ಹುಲಿ ಮರಿಗಳನ್ನು ತಾಯಿ ಹುಲಿ ಬಳಿಗೆ ಸೇರಿಸಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ-ಆಸ್ಟ್ರೇಲಿಯಾ ಅಂತಿಮ ಟೆಸ್ಟ್‌ಗೆ ಸಾಕ್ಷಿಯಾದ ಮೋದಿ-ಅಲ್ಬನಿಸ್
ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದು, 300 ಸದಸ್ಯರ ತಂಡ ಹುಲಿಗಾಗಿ ಹುಡುಕಾಟ ನಡೆಸುತ್ತಿದೆ. ಅವರು ಪಗ್ ಗುರುತುಗಳನ್ನು ಕಂಡುಕೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಹುಲಿಯನ್ನು ಪತ್ತೆಹಚ್ಚುವ ಭರವಸೆ ಇದೆ ಎಂದು ಹೇಳಲಾಗುತ್ತಿದೆ.
ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಬೆಂಕಿ ಅವಘಡ
ನಾವು ಅವುಗಳನ್ನು ಸ್ವಲ್ಪ ಸಮಯದವರೆಗೆ ಸಾಕುತ್ತೇವೆ ಮತ್ತು ನಂತರ ಅವುಗಳನ್ನು ಮೃಗಾಲಯಕ್ಕೆ ಕೊಂಡೊಯ್ಯುತ್ತೆವೆ ಅದಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅನುಮತಿ ಅಗತ್ಯವಿದೆ ಎಂದು ಅರಣ್ಯ ಅಧಿಕಾರಿ ಶಾಂತಿ ಪ್ರಿಯಾ ಪಾಂಡೆ ತಿಳಿಸಿದ್ದಾರೆ.
Andhra, forest, officials, lookout, tigress, 4 cubs, stray,