ನಕ್ಷತ್ರ ಆಮೆಗಳ ಕಳ್ಳಸಾಗಣಿಕೆ, ಓರ್ವನ ಬಂಧನ, 250 ಆಮೆಗಳ ರಕ್ಷಣೆ

Social Share

ಹೈದರಾಬಾದ್,ಫೆ.5- ಅಳವಂಚಿನನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬಂಧಿಸಿರುವ ಎಸ್‍ಇಬಿ( ಆಂಧ್ರಪ್ರದೇಶ ಸ್ಪೆಷಲ್ ಎನ್‍ಫೋರ್ಸ್‍ಮೆಂಟ್ ಬ್ಯೂರೊ) ಅಧಿಕಾರಿಗಳು 250 ಆಮೆಗಳನ್ನು ರಕ್ಷಿಸಿದ್ದಾರೆ. ಸೆಲ್ವಕುಮಾರ್ ಬಂಧಿತ ಆರೋಪಿ.
ವನ್ಯಜೀವಿ ಸಂರಕ್ಷಣಾ ಕಾಯ್ದೆ, 1974 ರ ಶೆಡ್ಯೂಲ್ 4ರಲ್ಲಿ ಪಟ್ಟಿ ಮಾಡಲಾದ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಇಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸೆಲ್ವಕುಮಾರ್ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯಿದೆ, 1972ರ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ.

Articles You Might Like

Share This Article