ಬೆಂಗಳೂರು, ಡಿ.10- ಆಂಧ್ರದ ತಂಬಲಪಲ್ಲಿಯ ವನಮರೆಡ್ಡಿಗಾರುಪಲ್ಲಿ ಗ್ರಾಮದ ರೌಡಿ ಶಿವಶಂಕರ ರೆಡ್ಡಿಯ ಮೇಲೆ ಗುಂಡಿನ ದಾಳಿ ನಡೆಸಲು ಮೂರು ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿಯನ್ನು ಕೆ.ಆರ್.ಪುರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.
ವನಮರೆಡ್ಡಿಗಾರುಪಲ್ಲಿ ಗ್ರಾಮದ ಮತ್ತೊಬ್ಬ ರೌಡಿ ಪೊನಾಲಿ ಶಂಕರ ಎಂಬಾತ ದ್ವೇಷದಿಂದ ಶಿವಶಂಕರರೆಡ್ಡಿ ಕೊಲೆಗೆ ಸುಫಾರಿ ಕೊಟ್ಟಿದ್ದ ಎಂಬ ವಿವರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಆರೋಪಿಗಳು ಆಂಧ್ರದಿಂದ 4 ದಿನದ ಮೊದಲೇ ಬೆಂಗಳೂರಿಗೆ ಬಂದು ಕೆ.ಆರ್.ಪುರ ಹೊರವಲಯದ ಲಾಡ್ಜ್‍ವೊಂದರಲ್ಲಿ ಉಳಿದುಕೊಂಡು ಶಿವಶಂಕರರೆಡ್ಡಿ ಕೊಲೆಗೆ ಸಂಚು ಹಾಕಿದ್ದರು.
ಶಿವಶಂಕರ ರೆಡ್ಡಿ ಕಟ್ಟಿಸುತ್ತಿರುವ ಅಪಾರ್ಟ್‍ಮೆಂಟ್ ಬಳಿ ಆರೋಪಿಗಳು ಮೂರು ದಿನ ಹೋಗಿ ಹತ್ಯೆಗೆ ಹೊಂಚು ಹಾಕಿದ್ದರೂ ಸಾಧ್ಯವಾಗಿರಲಿಲ್ಲ. 4ನೇ ಅಂದರೆ ಡಿ.8ರಂದು ಮಧ್ಯಾಹ್ನ ಏನಾದರೂ ಆಗಲಿ ಇಂದು ಮುಗಿಸಿಬಿಡಬೇಕೆಂದು ಪಣ ತೊಟ್ಟು ಶಿವಶಂಕರರೆಡ್ಡಿಯ ಕಾರನ್ನು ಹಿಂಬಾಲಿಸಿಕೊಂಡು ಎರಡು ಬೈಕ್‍ಗಳಲ್ಲಿ ಹೋಗಿ ಶಿವಶಂಕರರೆಡ್ಡಿ ಹಾಗೂ ಅವರ ಕಾರು ಚಾಲಕ ಅಶೋಕ ರೆಡ್ಡಿ ಮೇಲೆ ಗುಂಡಿನ ಸುರಿಮಳೆಗೈದು ಪರಾರಿಯಾಗಿದ್ದರು.
ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನ ಹೊಡೆದು ಕೊಂದ ಜನ
ಘಟನೆ ನಂತರ ಆರೋಪಿಗಳು ಹೊಸಕೋಟೆ ಟೋಲ್‍ವರೆಗೂ ಬೈಕ್‍ಗಳಲ್ಲಿ ಹೋಗಿ ನಂತರ ಪೊದೆಯೊಂದರಲ್ಲಿ ಬೈಕ್‍ಗಳನ್ನು ಬಿಸಾಡಿ ಕಾರಿನಲ್ಲಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ವಿಶೇಷ ತಂಡಗಳು ಕಾರ್ಯಾಚರಣೆ ಕೈಗೊಂಡು ಆಂಧ್ರದ ಪ್ರಕಾಶಂ ಜಿಲ್ಲೆಯ ಮುಂಡ್ಲಮೂರಿನಲ್ಲಿ ಆರೋಪಿಗಳಾದ ಮನೋಜ್‍ಕುಮಾರ್, ಜಯಪ್ರಕಾಶ್ ಹಾಗೂ ಪ್ರವೀಣ್‍ನನ್ನು ಬಂಧಿಸಿದೆ.
ರೌಡಿ ಪೊನಾಲಿ ಶಂಕರ ಒಟ್ಟು ನಾಲ್ಕು ಮಂದಿಗೆ ಸುಫಾರಿ ಕೊಟ್ಟಿದ್ದು ಈ ಪೈಕಿ ಈಗಾಗಲೇ ಮೂವರನ್ನು ಪೊಲೀಸರು ಬಲೆಗೆ ಬೀಳಿಸಿಕೊಂಡಿದ್ದು ಮತ್ತೊಬ್ಬ ಆರೋಪಿ ಹಾಗೂ ಸಿಫಾರಿ ಕೊಟ್ಟಿದ್ದ ರೌಡಿ ಪೊನಾಲಿ ಶಂಕರನ ಬಂಧನಕ್ಕಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಕೈ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು
ಆರೋಪಿಗಳಿಗೆ ಪಿಸ್ತೂಲನ್ನು ಯಾರು ಕೊಟ್ಟಿದ್ದರು, ಎಷ್ಟು ಹಣಕ್ಕೆ ಸುಫಾರಿ ಕೊಟ್ಟಿದ್ದರು ಎಂಬಿತ್ಯಾದಿ ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಪ್ರಕರಣವು ಅತಿ ಗಂಭೀರವಾಗಿ ಪರಿಗಣಿಸಿದ ವೈಟ್‍ಫೀಲ್ಡ್ ವಿಭಾಗದ ಪೆಪೊಲೀಸರು ಕೃತ್ಯ ನಡೆದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೆ ಮುನ್ನಲೆಗೆ ಬಂದ ಸಂಪುಟ ವಿಸ್ತರಣೆ ಚರ್ಚೆ : 6 ಮಂದಿಗೆ ಕೋಕ್ ?
ಗುಂಡೇಟಿನಿಂದ ಗಾಯಗೊಂಡಿರುವ ಶಿವಶಂಕರ ರೆಡ್ಡಿ ಹಾಗೂ ಕಾರು ಚಾಲಕ ಅಶೋಕ್ ರೆಡ್ಡಿ ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Andhra, rowdy, Sivasankar Reddy, gang, shoots, KR Puram,