ಆಂದ್ರದಲ್ಲಿ ಸದ್ದು ಮಾಡುತ್ತಿರುವ ಪ್ರತಿಷ್ಠಿತ ಕುಟುಂಬಗಳ ಹೆಣ್ಣು ಮಕ್ಕಳು

Social Share

ಹೈದರಾಬಾದ್,ಡಿ.10- ತೆಲುಗು ನಾಡು ತೆಲಂಗಾಣದಲ್ಲಿ ಎರಡು ಪ್ರತಿಷ್ಠಿತ ಕುಟುಂಬಗಳ ಹೆಣ್ಣುಮಕ್ಕಳ ಸುದ್ದಿಗಳು ಕಳೆದ ಎರಡು ವಾರಗಳಿಂದಲೂ ನಿರಂತರವಾಗಿ ಪತ್ರಿಕೆಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿವೆ. ದೆಹಲಿಯ ಅಬಕಾರಿ ನೀತಿ ಅಕ್ರಮಗಳ ಪ್ರಕರಣದಲ್ಲಿ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ವಿಧಾನಪರಿಷತ್ ಸದಸ್ಯ ಕವಿತಾ ಅವರ ಹೆಸರು ಕೇಳಿಬಂದಿದೆ.

ಇಂದು ಬೆಳಗ್ಗೆ ಸಿಬಿಐ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ. ಕವಿತಾ ಅವರ ವಿರುದ್ಧ ಇತ್ತೀಚೆಗೆ ರಾಜಕೀಯ ಟೀಕೆಗಳು ಹೆಚ್ಚಾಗಿವೆ.

ಮತ್ತೊಂದು ಕಡೆ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ್ ರೆಡ್ಡಿ ಅವರ ಶರ್ಮಿಳಾ ಕೂಡ ಭಾರೀ ಸುದ್ದಿಯಲ್ಲಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆಸಿಆರ್ ಸರ್ಕಾರದ ವಿರುದ್ಧ ಶರ್ಮಿಳಾ ಪಾದಯಾತ್ರೆಗೆ ಮುಂದಾಗಿದ್ದರು. ಆದರೆ ಸರ್ಕಾರ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಇದನ್ನು ವಿರೋಧಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಹಿರಿಯ ನಾಯಕರ ಕಡೆಗಣನೆಗೆ ಗುಜರಾತ್ ಸೋಲಿಗೆ ಕಾರಣ : ಮೊಯ್ಲಿ

ಇಂದು ಬೆಳಗ್ಗೆ ಪೊಲೀಸರು ಬಲವಂತವಾಗಿ ಅವರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದು, ಸತ್ಯಾಗ್ರಹ ಹೋರಾಟಕ್ಕೆ ಇತಿಶ್ರೀ ಹಾಡಿದ್ದಾರೆ. ಶರ್ಮಿಳಾ ತೆಲಂಗಾಣದಲ್ಲಿ ವೈಎಸ್‍ಆರ್‍ಪಿ ಪಕ್ಷ ಸ್ಥಾಪಿಸಿ ರಾಜಕೀಯ ಶ್ರೇಯೋಭಿವೃದ್ಧಿ ದಾಖಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜನಪರ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಬಹುಭಾಷಾ ನಟ ಶರತ್‍ಕುಮಾರ್ ಆಸ್ಪತ್ರೆಗೆ ದಾಖಲು
ಎರಡು ಭಿನ್ನ ಪಕ್ಷಗಳ ಮತ್ತು ಪ್ರತಿಷ್ಠಿತ ಕುಟುಂಬಗಳ ಈ ಹೆಣ್ಣುಮಕ್ಕಳ ಸದ್ದು ತೆಲಂಗಾಣದಲ್ಲಿ ಜೋರಾಗಿದೆ.

#AndhraPradesh #Telangana, #Politics, #TRS #KKavitha, #Sharmila,

Articles You Might Like

Share This Article