ವೇತನ ಹೆಚ್ಚಿಸದಿದ್ದರೆ ಮತ್ತೆ ಹೋರಾಟ ; ಅಂಗನವಾಡಿ ಕಾರ್ಯಕರ್ತೆಯರ ಎಚ್ಚರಿಕೆ

Social Share

ಬೆಂಗಳೂರು,ಫೆ.11- ಮುಂಬರುವ ಬಜೆಟ್‍ನಲ್ಲಿ ಆಶಾ ಕಾರ್ಯ ಕರ್ತೆಯರಿಗೆ ನೀಡಿದ ಭರವಸೆಯಂತೆ ತಿಂಗಳಿಗೆ 12 ಸಾವಿರ ರೂ. ವೇತನಕ್ಕಾಗಿ ಹಣ ಮೀಸಲಿಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಆಶಾ ಕಾರ್ಯ ಕರ್ತೆಯರ ಸಂಘ ಬೆದರಿಕೆ ಹಾಕಿದೆ.
ರಾಜ್ಯ ಸರ್ಕಾರವು ಈ ಹಿಂದೆ ಹಲವಾರು ಭರವಸೆಗಳನ್ನು ನೀಡಿತ್ತು, ಆದರೆ ಯಾವುದನ್ನೂ ಈಡೇರಿಸಲಾಗಿಲ್ಲ. ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ ಹಾಗೂ ಪ್ರೋತ್ಸಾಹ ಧನ ಸಿಗುತ್ತಿಲ್ಲ ಎಂದು ಕೋವಿಡ್ ಸಾಂಕ್ರಾಮಿಕ ಉತ್ತುಂಗದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ರಾಜ್ಯದಿಂದ 4000 ರೂ.ಗಳನ್ನು ಪಡೆಯುತ್ತಿದ್ದು, ಕೆಲವೊಂದು ಕೆಲಸಗಳಿಗಾಗಿ ಕೇಂದ್ರ ಸರ್ಕಾರವೂ ಹಣ ನೀಡಬೇಕಾಗಿದೆ. ಇತರ ಆರೋಗ್ಯ ಸಿಬ್ಬಂದಿಗಳು ನಾವು ಮಾಡಿದ ಕಾರ್ಯಗಳ ವಿವರಗಳನ್ನು ಆಶಾ ನಿ ಸಾಫ್ಟ್‍ವೇರ್‍ನಲ್ಲಿ ತುಂಬಬೇಕು. ಆದರೆ ಹಾಗೆ ಮಾಡಿಲ್ಲ, ಕೇಂದ್ರದಿಂದ ಸರಿಯಾದ ಪ್ರೋತ್ಸಾಹಕ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.
ಅನಿಶ್ಚಿತತೆಯ ಕಾರಣದಿಂದಾಗಿ, ಕಾರ್ಮಿಕರು ಇನ್ನು ಮುಂದೆ ಗೌರವಧನವನ್ನು ಬಯಸುವುದಿಲ್ಲ, ಆದರೆ ಸ್ಥಿರ ಸಂಬಳ ನಿಗದಿಪಡಿಸಬೇಕು, 5 ಸಾವಿರ ರೂ. ರಿಸ್ಕ್ ಭತ್ಯೆ ನೀಡಬೇಕು, ಹೆಚ್ಚುವರಿ ಕೆಲಸಕ್ಕಾಗಿ ದಿ£ಕ್ಕೆ 500 ರೂ. ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
# ಇನ್ನೂ 50 ಲಕ್ಷ ಪರಿಹಾರ ಸಿಕ್ಕಿಲ್ಲ:
ಕೋವಿಡ್ -19 ನಿಂದ ಸಾವನ್ನಪ್ಪಿದ ಆಶಾ ಕಾರ್ಯಕರ್ತೆಯರ ಕುಟುಂಬಗಳಿಗೆ 50 ಲಕ್ಷ ರೂ. ಪರಿಹಾರದ ಭರವಸೆ ನೀಡಲಾಗಿತ್ತು. ಆದರೆ, ಅಂತಹವರಿಗೆ ಪರಿಹಾರ ಸಿಕ್ಕಿಲ್ಲ. ಕೋವಿಡ್ ಹೊರತಾಗಿಯೂ, ಆಶಾ ಕಾರ್ಯಕರ್ತರು ದಿನನಿತ್ಯದ ಆಧಾರದ ಮೇಲೆ ಹಲವಾರು ಸಮೀಕ್ಷೆಗಳನ್ನು ನಡೆಸುತ್ತಾರೆ ಮತ್ತು ತಾಯಿ ಮತ್ತು ಮಕ್ಕಳ ಪ್ರಸವಪೂರ್ವ ಮತ್ತು ನಂತರದ ಆರೈಕೆಯ ಭಾಗವಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Articles You Might Like

Share This Article