ಮಾಜಿ ಸಚಿವ ಅನಿಲ್ ದೇಶಮುಖ್‍ಗೆ ಜಾಮೀನು ಮಂಜೂರು

Social Share

ಮುಂಬೈ,ಡಿ.12- ಭ್ರಷ್ಟಾಚಾರ ಆರೋಪಕ್ಕಾಗಿ ಸಿಬಿಐನಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶಮುಖ್‍ಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೂ ದೇಶ್‍ಮುಖ್ ಜೈಲಿನಿಂದ ಬಿಡುಗಡೆಯಾಗಿಲ್ಲ.

ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಲು ಕಾಲಾವಕಾಶ ನೀಡಿ ಹೈಕೋರ್ಟ್‍ಜಾಮೀನನ್ನು 10 ದಿನಗಳ ಕಾಲ ತಟಸ್ಥವಾಗಿರಿಸಿದೆ. ಎನ್.ಎಸ್.ಕಾರ್ನಿಕ್ ಅವರ ಏಕಸದಸ್ಯ ಪೀಠ ಜಾಮೀನು ಅರ್ಜಿಯ ಪರ-ವಿರೋಧ ವಾದ ಆಲಿಸಿದ ಬಳಿಕ ತೀರ್ಪು ನೀಡಿದೆ. 74 ವರ್ಷದ ಅನಿಲ್ ದೇಶ್‍ಮುಖ್ ಅವರ ಜಾಮೀನು ಅರ್ಜಿಯನ್ನು ಕಳೆದ ತಿಂಗಳು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.

ರಾಹುಲ್ ಗಾಂಧಿಗೆ ನಾರಿ ಶಕ್ತಿ ಬೆಂಬಲ

ವೈದ್ಯಕೀಯ ನೆಲೆಯಲ್ಲಿ ದೇಶ್‍ಮುಖ್ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆಹೋಗಿದ್ದರು. ಎನ್‍ಸಿಪಿ ನಾಯಕರಾಗಿರುವ ಅನಿಲ್ ದೇಶ್‍ಮುಖ್‍ರನ್ನು ಕಳೆದ ನವೆಂಬರ್‍ನಲ್ಲಿ ಜಾರಿ ನಿರ್ದೇಶನಾಲಯ ಮನಿ ಲ್ಯಾಂಡ್ರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಿತ್ತು.

ಜಾರಿ ನಿರ್ದೇಶನಾಲಯದ ಪ್ರಕರಣಕ್ಕೆ ಕಳೆದ ತಿಂಗಳು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಜಾಮೀನು ದೊರೆತಿರಲಿಲ್ಲ.

ಗುಜರಾತ್‍ನ ಸಿಎಂ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕರ

ಮಹಾರಾಷ್ಟ್ರ ಗೃಹಸಚಿವರಾಗಿದ್ದ ಅನಿಲ್ ದೇಶ್‍ಮುಖ್ ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‍ಗಳಿಂದ 100 ಕೋಟಿ ರೂ. ಹಣ ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು 2021ರ ಮಾರ್ಚ್‍ನಲ್ಲಿ ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್ ಆರೋಪಿಸಿದ್ದರು.

2021ರ ಏಪ್ರಿಲ್‍ನಲ್ಲಿ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.

Anil Deshmukh, Bombay, High Court, grants bail,

Articles You Might Like

Share This Article