ನವದೆಹಲಿ,ಜ.25- ಬಿಬಿಸಿ ಚಾನಲ್ನಲ್ಲಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರ ಬಿತ್ತರಗೊಂಡಿರುವುದನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಅವರ ಪುತ್ರ ಅನಿಲ್ ಆಂಟನಿ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮೋದಿ ವಿರುದ್ಧದ ಸಾಕ್ಷ್ಯ ಚಿತ್ರವನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಕೆಲವು ಲಿಂಕ್ಗಳನ್ನು ಕೆಲ ನಾಯಕರು ಲೀಕ್ ಮಾಡಿರುವುದನ್ನು ಅನಿಲ್ ವಿರೋಧಿಸಿದ್ದರು.
ಬ್ರಿಟಿಷ್ ಪ್ರಸಾರಕ ಅಭಿಪ್ರಾಯಗಳನ್ನು ಭಾರತೀಯರ ಮೇಲೆ ಹೊರಿಸುವುದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದು ಅನಿಲ್ ಪ್ರತಿಪಾದಿಸಿದ್ದರು. ಆದರೆ, ಅನಿಲ್ ಅವರ ಅಭಿಪ್ರಾಯಕ್ಕೆ ಪಕ್ಷದಲ್ಲಿ ಯಾವುದೇ ಮನ್ನಣೆ ನೀಡದಿರುವುದನ್ನು ವಿರೋಧಿಸಿ ಅನಿಲ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ಬೈ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಮಾರೋಪದಲ್ಲಿ ಭಾಗವಹಿಸಲು ದೇವೇಗೌಡರಿಗೆ ಆಹ್ವಾನ
ಗಾಂಧಿ ಕುಟುಂಬದ ಪರಮಾಪ್ತರಾಗಿದ್ದ ಎ.ಕೆ.ಆಂಟನಿ ಅವರ ಪುತ್ರರಾಗಿರುವ ಅನಿಲ್ ಆಂಟನಿ ಅವರು ಕಾಂಗ್ರೆಸ್ ಪಕ್ಷ ತೊರೆದಿರುವುದು ಕೈ ಪಾಳಯದ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.
Anil K Antony, Quits, Congress Party,