ಕೊಪ್ಪಳ, ಡಿ.5- ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಹನುಮಮಾಲಾಧಾರಿಗಳು ಮುಂಜಾನೆ ಹನುಮ ಮಾಲೆ ವಿಸರ್ಜಿಸಿದರು. ಹನುಮ ಮಾಲಾಧಾರಿಗಳು ರಾತ್ರಿಯಿಂದಲೇ ಅಂಜನಾದ್ರಿ ಬೆಟ್ಟ ಹತ್ತುವ ಮೂಲಕ ಮುಂಜಾನೆ ಅಂಜನಾದ್ರಿ ದೇಗುಲ ಪ್ರವೇಶಿಸಿ ದೇವರ ದರ್ಶನ ಪಡೆದು ಮಾಲೆ ವಿಸರ್ಜಿಸಿ ವಿಶೇಷ ಪೂಜೆ ಸಲ್ಲಿಸಿದರು.
ಐತಿಹಾಸಿಕ ಅಂಜನಾದ್ರಿಬೆಟ್ಟಕ್ಕೆ ಭಜರಂಗಿ ಜಪ ಮಾಡುತ್ತಾ ಭಜರಂಗಿ ಭಕ್ತರ ದಂಡೇ ಆಗಮಿಸಿ, ಅಂಜನಿ ಸುತನ ಸನ್ನಿಯಲ್ಲಿ ರಾಮನಾಮ ಜಪ್ತಿಸುತ್ತ ಬೆಟ್ಟ ಹತ್ತುತ್ತಿದುದ್ದು ಕಂಡು ಬಂತು. ಅಂಜನಾದ್ರಿಗೆ ಆಗಮಿಸುವ ಹನುಮ ಮಾಲಾಧಾರಿಗಳಿಗೆ ಬೆಟ್ಟದ ಬಲಭಾಗದಿಂದ ಹತ್ತಿ, ಎಡಭಾಗದಲ್ಲಿ ಎಳೆಯುವ ಮಾರ್ಗ ಮಾಡಲಾಗಿತ್ತು.
ಅಂಜನಾದ್ರಿಯ ದೇಗುಲದಲ್ಲಿ. ಜನ ದಟ್ಟಣೆ ತಪ್ಪಿಸಲು ಮುಂಜಾನೆ 3 ಗಂಟೆಯಿಂದಲೇ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಹನುಮ ಮಾಲಾಧಾರಿಗಳು ರಾತ್ರಿಯೇ ಗಂಗಾವತಿಗೆ ಆಗಮಿಸಿ ಬೆಟ್ಟ ಹತ್ತುತ್ತಿದ್ದುದ್ದು ಕಂಡು ಬಂತು. ತಮ್ಮ ಭಕ್ತಿಯ ಅನುಸಾರ ಹನುಮ ಮಾಲಾಧಾರಿಗಳು 5 ದಿನ, 11 ದಿನ, 21 ದಿನ ಹಾಗೂ 41 ದಿನ ಹೀಗೆ ಹನುಮ ನಾಮ ಪಠನೆ ಮಾಡಿ ಮಾಲೆ ಧರಿಸುತ್ತಾರೆ.
ಅಂಜನಾದ್ರಿ ಬೆಟ್ಟ ಕೇಸರಿಮಯವಾಗಿ ಕಂಡು ಬಂತು. ಕೊಪ್ಪಳ ಜಿಲ್ಲಾಡಳಿತ ಹಾಗೂ ಗಂಗಾವತಿ ತಾಲೂಕು ಆಡಳಿತವು ಹನುಮ ಮಾಲಾಧಾರಿಗಳಿಗೆ ಸಕಲ ವ್ಯವಸ್ಥೆ ಕೈಗೊಂಡಿತ್ತು. ಹನುಮ ಮಾಲಾಧಾರಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಸ್ನಾನ ಗೃಹ ಹಾಗೂ ವೈದ್ಯಕೀಯ ಸೌಲಭ್ಯ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಪ್ರಸಾದ ವಿನಿಯೋಗ:
ಹನುಮ ಮಾಲಾ ವಿಸರ್ಜನೆಗೆ ಆಗಮಿಸುವ ಭಕ್ತರಿಗೆ ದೇವಸ್ಥಾನದ ವತಿಯಿಂದ ಲಾಡುಗಳನ್ನು ಪ್ರಸಾದವಾಗಿ ವಿತರಿಸಲಾಯಿತು.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್
ಪೊಲೀಸ್ ಬಂದೋಬಸ್ತ್:
ಸಂಚಾರಿ ದಟ್ಟನೆ ತಪ್ಪಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು. ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಂಜನಾದ್ರಿ ಸುತ್ತಲು ಗ್ರಾಮ ಪಂಚಾಯ್ತಿ ಮತ್ತು ಗಂಗಾವತಿ ನಗರ ಸಭೆಯ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಸಂಚಾರಿ ದಟ್ಟನೆ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಹಸೀಲ್ದಾರ್ ನಾಗರಾಜ್ ತಿಳಿಸಿದ್ದಾರೆ.
Anjanadri hill, Hanuman, Maladhari,