ಆಯವ್ಯಯದಲ್ಲಿ ಕ್ಷತ್ರಿಯ ಸಮುದಾಯಕ್ಕೂ ಆರ್ಥಿಕ ನೆರವು ಘೋಷಣೆ : ಸಿಎಂ

Social Share

ಬೆಂಗಳೂರು, ಜ.29- ಮುಂದಿನ ಆರ್ಥಿಕ ಸಾಲಿನ ಆಯವ್ಯಯದಲ್ಲಿ ಕ್ಷತ್ರಿಯ ಸಮುದಾಯಕ್ಕೂ ಆರ್ಥಿಕ ನೆರವು ಘೋಷಣೆ ಮಾಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಕರ್ನಾಟಕ ಕ್ಷತ್ರಿಯ ಒಕ್ಕೂಟಗಳ ವತಿಯಿಂದ ಅರಮನೆ ಮೈದಾನದಲ್ಲಿಂದು ಆಯೋಜಿಸಿದ್ದ ಬೃಹತ್ ಕ್ಷತ್ರಿಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಭವನಗಳ ನಿರ್ಮಾಣಕ್ಕೆ ಕ್ರಮ ಕ್ರಮ ಕೈಗೊಳ್ಳಲಾಗುವುದು.

ಕ್ಷತ್ರಿಯ ಸಮುದಾಯದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ. ಕ್ಷತ್ರಿಯ ಸಮುದಾಯದ ವಿವಿಧ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಈಡೇರಿಸುವುದಾಗಿ ಭರವಸೆ ನೀಡಿದರು.

ದೇಶದ ಹಲವೆಡೆ ವಿವಾದಾತ್ಮಕ ಬಿಬಿಸಿ ಸಾಕ್ಷ್ಯ ಚಿತ್ರ ಪ್ರದರ್ಶನಕ್ಕೆ ಪ್ರಯತ್ನ

ಭಾರತದಲ್ಲಿ ಕ್ಷತ್ರಿಯ ಸಮುದಾಯ ಇಲ್ಲದಿದ್ದರೆ ದೇಶದಲ್ಲಿ ಒಗ್ಗಟ್ಟು ಇರುತಿರಲಿಲ್ಲ. ನಾವೆಲ್ಲ ಒಂದು ಕಡೆ ಸೇರಿದಾಗಲೇ ನಮ್ಮ ಶಕ್ತಿ ಏನೆಂಬು ಗೊತ್ತಾಗುವುದು. ಕ್ಷತ್ರಿಯ ಸಮುದಾಯದ ಎಲ್ಲ 38 ಪಂಗಡಗಳು ಒಟ್ಟಾಗಿ ಸಮಾವೇಶಗೊಂಡಿರುವುದು ಖುಷಿ ತಂದಿದೆ.

ರಾಜರಾದ ಶಿವಾಜಿ, ರಾಣಾ ಪ್ರತಾಪ್ ಸಿಂಗ್ ಕ್ಷತ್ರಿಯರಾಗಿದ್ದು, ಅಷ್ಟೇ ಅಲ್ಲ, ಶ್ರೀರಾಮ, ಶ್ರೀಕೃಷ್ಣ , ಸಮ್ರಾಟ್ ಅಶೋಕ, ಸ್ವಾಮಿ ವಿವೇಕಾನಂದರು ಸಹ ಕ್ಷತ್ರಿಯ ಸಮುದಾಯದವರು. ಸ್ವಾಮಿ ವಿವೇಕಾನಂದರು ನಮಗೆ ಜ್ಞಾನದ ಕತ್ತಿ ಕೊಟ್ಟವರು ಎಂದು ಬಣ್ಣಿಸಿದರು.

ಸರ್ದಾರ್ ವಲ್ಲಭಬಾಯ್ ಪಟೇಲರು ಅಂದು ನೀಡಿದ ಒಂದು ಕರೆಗೆ ಓಗೊಟ್ಟು ದೇಶದೊಳಗೆ ವಿಲೀನವಾದವರು ಕ್ಷತ್ರಿಯರು ಎಂದು ಶ್ಲಾಘಿಸಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಜಯಚಾಮರಾಜೇಂ ದ್ರ ಒಡೆಯರ್ ಅವರ ಮೊಮ್ಮಗ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್, ಮಾಜಿ ಸಚಿವ ಕೃಷ್ಣ ಪಾಲೇಮರ್, ರಾಜ್ಯ ಕ್ಷತ್ರಿಯ ಸಂಘದ ಅಧ್ಯಕ್ಷ ಉದಯ್ ಸಿಂಗ್, ಸಮುದಾಯದ ಮಠಾಧೀಶರು, ಪ್ರಮುಖರು ಉಪಸ್ಥಿತಿದ್ದರು.

#CMBommai, #KshatriyaCommunity. #FinancialAssistance, #budget.

Articles You Might Like

Share This Article