ಬೆಂಗಳೂರು, ಜ.18- ನಗರದಲ್ಲಿ ಹೈ ಟೆನ್ಶನ್ ವೈಯರ್ ಗೆ ಮತ್ತೊಂದು ಜೀವ ಬಲಿಯಾಗಿದೆ.ಹೈ ಟೆನ್ಶನ್ ವೈಯರ್ ತಗುಲಿ 11 ವರ್ಷದ ಅಬುಬಕ್ಕರ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.
ಆರ್ ಟಿ ನಗರ, ಚಾಮುಂಡಿ ನಗರದ ಚಿಂಗಮ್ ಫ್ಯಾಕ್ಟರಿ ಬಳಿ ಮೊನ್ನೆ ಈ ಬಾಲಕ ಗಾಳಿಪಟ ಹಾರಿಸಲು ಹೋಗಿದ್ದಾಗ ಹೈಟೆನ್ಶನ್ ವೈರ್ ತಗುಲಿ ಗಂಭೀರ ಗಾಯಗೊಂಡಿದ್ದನು.
ಮದ್ಯ ಖರೀದಿ ವಯೋಮಿತಿ ಸಡಿಲಿಕೆ ಮಾಡದಿರಲು ಸರ್ಕಾರ ತೀರ್ಮಾನ
ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹ ಪೂರ್ತಿ ಸುಟ್ಟ ಗಾಯ ಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಂದಿನಿ ಲೇಔಟ್ನಲ್ಲೂ ಹೈಟೆನ್ಶನ್ ವೈರ್ ತಗುಲಿ ಪಾರಿವಾಳ ಹಿಡಿಯಲು ಹೋಗಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಬಾಲಕ ಹೈಟೆನ್ಶನ್ ವೈರ್ಗೆ ಬಲಿಯಾಗಿರುವುದು ವಿಪರ್ಯಾಸ.
#hightensionwire