ಒಡಿಸ್ಸಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಅನುಮಾನಾಸ್ಪದ ಸಾವು

Social Share

ಪರದೀಪ್,ಜ.3- ಒಡಿಸ್ಸಾದಲ್ಲಿ ಮತ್ತೊಬ್ಬ ರಷ್ಯನ್ ಪ್ರಜೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕಳೆದ 15 ದಿನಗಳಲ್ಲಿ ಸಾವನ್ನಪ್ಪಿದ ವಿದೇಶಿ ಪ್ರಜೆಗಳ ಸಂಖ್ಯೆ ಮೂರಕ್ಕೇರಿದೆ.

ಒಡಿಸಾದ ಜಗತ್‍ಸಿಂಗ್‍ಪುರ್ ಜಿಲ್ಲೆಯ ಪರದೀಪ್ ಬಂದರಿನಲ್ಲಿನ ಹಡಗಿನಲ್ಲಿ ರಷ್ಯಾದ ಮಿಲ್ಯಾಕೋವ್ ಸೆರ್ಗೆ (51) ಮೃತಪಟ್ಟಿದ್ದಾರೆ. ಎಂ.ಡಿ.ಅಲ್ಡಾನಹ್ ಎಂಬ ಹೆಸರಿನ ಹಡಗಿನಲ್ಲಿ ಮಿಲ್ಯಾಕೋವ್ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ಹಡಗು ಬಾಂಗ್ಲಾದೇಶದ ಚಿತ್ತಾಂಗೊಂಗ್ ಬಂದರಿನಿಂದ ಪರದೀಪ್ ಮಾರ್ಗವಾಗಿ ಮುಂಬೈ ಕಡೆಗೆ ಪ್ರಯಾಣಿಸುತ್ತಿತ್ತು.

ಹಡಗಿನ ತಮ್ಮ ಚೆಂಬರ್‍ನಲ್ಲಿ ಮಿಲ್ಯಾಕೋವ್ ಮುಂಜಾನೆ 4.30ರ ಸುಮಾರಿನಲ್ಲಿ ಮೃತಪಟ್ಟಿರುವುದು ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣವನ್ನು ಪೊಲೀಸರು ತಕ್ಷಣಕ್ಕೆ ಬಹಿರಂಗ ಪಡಿಸಿಲ್ಲ. ಆದರೆ ವಿದೇಶಿ ಪ್ರಜೆ ಸಾವನ್ನಪ್ಪಿರುವುದನ್ನು ಪರದೀಪ್ ಬಂದರು ಟ್ರಸ್ಟ್‍ನ ಅಧ್ಯಕ್ಷ ಪಿ.ಎಲ್.ಹರನಂದ್ ಖಚಿತ ಪಡಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ

ಕಳೆದ ಡಿಸೆಂಬರ್ 22ರಂದು ರಷ್ಯಾದ ವಾಲ್ಡಿಮಿರ್ ಬಿಡೆನೋವ್ (61) ಹೊಟೇಲ್‍ನ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಎರಡು ದಿನಗಳ ಬಳಿಕ ಬಿಡೆನೋವ್ ಅವರ ಸ್ನೇಹಿತರೂ ಆಗಿದ್ದ ರಷ್ಯಾದ ಸಂಸದ 65 ವರ್ಷದ ಪವೆಲ್ ಅಂಟೋವ್ ರಾಯಗಡ ನಗರದ ಹೊಟೇಲ್‍ನ ಮೂರನೇ ಮಹಡಿಯಿಂದ ಅನುಮಾನಾಸ್ಪದವಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದರು.

ಈ ಎರಡು ಪ್ರಕರಣಗಳನ್ನು ಒಡಿಸಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗ ಮತ್ತೊಬ್ಬ ವ್ಯಕ್ತಿ ಅನುಮಾನಾಸ್ಪದ ಸಾವು ಆತಂಕ ಮೂಡಿಸಿದೆ.

Another, Russian, found, dead, Odisha,

Articles You Might Like

Share This Article