ಮುಂಬೈ, ಆ. 10- ಬಾಲಿವುಡ್ ನಟ ಅಂಶುಮಾನ್ ಝಾ ಅವರು ಅಕ್ಟೋಬರ್ನಲ್ಲಿ ತಮ್ಮ ದೀರ್ಘ ಕಾಲದ ಗೆಳತಿ ಸಿಯೆರಾರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಝಾ, ನನ್ನ ವಿವಾಹ ಜೀವನಕ್ಕೆ ಈಗ ಸರಿಯಾದ ಕಾಲ ಕೂಡಿಬಂದಿದ್ದು ಎರಡು ಸಂಪ್ರದಾಯದಂತೆ ನಾನು ಹಾಗೂ ಸಿಯೆರಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇವೆ, ಅಕ್ಟೋಬರ್ನಲ್ಲಿ ಅಮೇರಿಕಾದಲ್ಲಿ ನಮ್ಮ ಮದುವೆ ಆದರೆ, ಮಾರ್ಚ್ 2023ರಂದು ಹಿಂದೂ ಸಂಪ್ರದಾಯದಂತೆ ಮತ್ತೊಮ್ಮೆ ಸಪ್ತಪದಿ ತುಳಿಯಲಿದ್ದೇವೆ ಎಂದು ತಿಳಿಸಿದರು.
ನನ್ನ ತಾಯಿಯ ಆಶೀರ್ವಾದದಿಂದಲೇ ಸೆರಿನಾನಂತಹ ಸಂಗಾತಿ ನನಗೆ ಸಿಕ್ಕಿದ್ದಾರೆ, ಸೆಯಿರಾ ಹಾಗೂ ನಮ್ಮ ತಾಯಿಯ ಬಯಕೆಯಂತೆಯೇ ಅಮೆರಿಕಾ ಹಾಗೂ ಭಾರತದಲ್ಲಿ ನಡೆಯುವ ಎರಡು ಪ್ರತ್ಯೇಕ ಸಮಾರಂಭಗಳಲ್ಲಿ ನಾವು ನವಜೋಡಿಗಳಾಗುತ್ತಿದ್ದೇವೆ, ಆದರೆ ಈ ಸಮಾರಂಭವು ತೀರಾ ಖಾಸಗಿಯಾಗಿರುತ್ತದೆ ಎಂದು ಝಾ ತಿಳಿಸಿದರು.
2020ರಂದು ಅಂಶುಮಾನ್ ಝಾ ಹಾಗೂ ಸಿಯೆರಾ ಅವರ ನಿಶ್ಚಿತಾರ್ಥವು ನಡೆದಿದೆ.
ಅಂಶುಮಾನ್ ಝಾ ಅವರು ದಿಬಕರ್ ಬ್ಯಾನರ್ಜಿಯವರ ಲವ್ ಸೆಕ್ಸ್ ಔರ್ ದೋಖಾ' ಚಿತ್ರದಿಂದ ಬಾಲಿವುಡ್ನಲ್ಲಿ ಸುಪ್ರಸಿದ್ಧಿ ಹೊಂದಿದ್ದು, ಹರೀಶ್À ವ್ಯಾಸ ಅವರ
ಹರಿ ಓಂ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ.
ಅಂಗ್ರೇಜಿ ಮೇ ಕೆಹತೇ ಹೈ' ಮತ್ತು
ಹಮ್ ಭಿ ಅಕೇಲೆ ತುಮ್ ಭಿ ಅಕೇಲೆ’ ಲಕಡ್ಬಗಾ’ ಎಂಬ ಸಾಹಸಮಯ ಚಿತ್ರದಲ್ಲಿ ನಟಿಸುತ್ತಿರುವ ಝಾ, ` ಲಾರ್ಡ್ ಕರ್ಜನ್ ಕೆ ಹಾವೇಲಿ’ ಎಂಬ ಸಿನಿಮಾವನ್ನು ನಿರ್ದೇಶಿಸಲಿದ್ದು ಅರ್ಜುನ್ ಮಾಥೂರ್, ತನ್ನಿಸೇಥ್ ಚಟರ್ಜಿ, ರಿಷಿಕಾ ದುಗ್ಗಲ್ ಅವರು ನಟಿಸುತ್ತಿದ್ದಾರೆ.