ಚೀನಿ ಉತ್ಪನ್ನಗಳ ಮೇಲೆ ಆ್ಯಂಟಿ ಡೂಪಿಂಗ್ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧಾರ

Social Share

ನವದೆಹಲಿ.ಆ.21- ದೇಶಿಯ ಔಷಧ ಕಂಪನಿಗಳ ಹಿತಾಸಕ್ತಿ ರಕ್ಷಿಸಲು ಚೀನಾದ ಕೆಲವು ಉತ್ಪನ್ನಗಳ ಮೇಲೆ ಮುಂದಿನ ಐದು ವರ್ಷ ಆ್ಯಂಟಿ ಡೂಪಿಂಗ್ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೆರೆಯ ಚೀನಾಕ್ಕೆ ಹೊಸ ಶಾಕ್ ನೀಡಿದೆ ,ಈ ಸಂಬಂಧ ಈಗಾಗಲೆ ವಾಣಿಜ್ಯ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.

ಇದೇ ವೇಳೆ ವಿವಿಧ ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುವ ಚೀನಾ ನಿರ್ಮಿತ ಆಂಟಿಬಯೋಟಿಕ್ ಡ್ರಗ್ ಆಪ್ರೋಕ್ಸಾಸಿನ್ ಅನ್ನು ನಿಷೇಧಿಸಲಾಗಿದೆ. ಕೆಲವು ಕಂಪನಿಗಳ ದೂರಿನ ಹಿನ್ನಲೆಯಲ್ಲಿ ಭಾರತಕ್ಕೆ ಬರುತ್ತಿರುವ ಕಡಿಮೆ ಬೆಲೆಗೆ ಔಷಧ ಚೀನಾದಿಂದ ಕಳುಹಿಸುತ್ತಿರುವುದು ಕಂಡು ಬಂದಿದೆ, ಇದು ದೇಶೀಯ ಔಷದ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಟ್ರೇಡ್ ರೆಮಿಡೀಸ್ ನಡೆಸಿದ ತನಿಖೆಯಲ್ಲಿ ತಿಳಿದುಬಂದಿತ್ತು.

ಈ ಉತ್ಪನ್ನಗಳ ಮೇಲೆ ಮುಂದಿನ 5 ವರ್ಷಗಳ ಅವಗೆ ಡಂಪಿಂಗ್ ವಿರೋಧಿ ಸುಂಕವನ್ನು ವಿಧಿಸಲು ಪ್ರಾಧಿಕಾರವು ಶಿಫಾರಸು ಮಾಡಿದೆ ಎಂದು ನಿರ್ದೇಶನಾಲಯದ ಅಧಿಸೂಚನೆಯಲ್ಲಿ ತಿಳಿಸಿದೆ.

Articles You Might Like

Share This Article