ಆಡಳಿತ ವಿರೋಧಿ ಅಲೆ : ಬಿಜೆಪಿ ಶಾಸಕರಿಗೂ ಟಿಕೆಟ್ ತಪ್ಪುವ ಭೀತಿ

Social Share

ಬೆಂಗಳೂರು,ಫೆ.25- ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನ ಕಳೆದಂತೆ ಕಾವು ಹೆಚ್ಚಾಗುತ್ತಿದ್ದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಶಾಸಕರಿಗೆ ಡವ ಡವ ಆರಂಭವಾಗಿದೆ. ಏಕೆಂದರೆ ಗೆದ್ದಿರುವ ಎಲ್ಲಾ ಶಾಸಕರಿಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಕಾತರಿಯನ್ನು ಪಕ್ಷ ನೀಡಿಲ್ಲ. ಸಹಜವಾಗಿ ಇದು ಅನೇಕ ಶಾಸಕರಿಗೆ ತಳಮಳ ಉಂಟು ಮಾಡಿದ್ದು, ಎಲ್ಲಿ ಟಿಕೆಟ್ ಕೈ ತಪ್ಪಲಿದೆಯೋ ಎಂಬ ದುಗುಡ ಕಾಡುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿರುವಂತೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಉಳಿದಂತೆ 2018 ಹಾಗೂ ನಂತರ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ ಸಚಿವರು ಮತ್ತು ಶಾಸಕರಿಗೆ ಟಿಕೆಟ್ ಕೊಟ್ಟೇ ಕೊಡುತ್ತೇವೆ ಎಂದು ವರಿಷ್ಠರು ಯಾರೊಬ್ಬರಿಗೂ ಅಭಯ ನೀಡಿಲ್ಲ.

ಬಿಜೆಪಿಗೆ ಸಾಕಷ್ಟು ಆಡಳಿತ ವಿರೋಧಿ ಅಲೆ ಇರುವುದರಿಂದ ಒಂದಿಷ್ಟು ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳನ್ನು ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರದಲ್ಲಿದೆ. ಗುಜರಾತ್‍ನಲ್ಲೂ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಲು ಸಚಿವರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಂಡರೆ ಹೇಗೆ ಎಂಬ ಚಿಂತನೆ ಬಿಜೆಪಿಯಲ್ಲಿದೆ.

ಆದರೆ ಗುಜರಾತ್ ರಾಜಕಾರಣಕ್ಕೂ ಕರ್ನಾಟಕ ರಾಜಕಾರಣಕ್ಕೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಆ ಮಾದರಿಯನ್ನು ಅಳವಡಿಸಿಕೊಂಡರೆ ಯಶಸ್ವಿಯಾಗುವ ಅಳಕು ಕೂಡ ಕಾಡುತ್ತಿದೆ.

ಮಾದಕ ವ್ಯಸನದಿಂದ ದೂರವಿರುವಂತೆ ಕಾಂಗ್ರೆಸ್ ಸದಸ್ಯರಿಗೆ ಸೂಚನೆ

ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕರ್ನಾಟಕ ಮತದಾರರು ಸಾಕಷ್ಟು ಪ್ರಬದ್ಧರಿದ್ದು, ಜಾತಿ, ಧರ್ಮ, ಹಿಂದುತ್ವ, ರಾಷ್ಟ್ರೀಯತೆ ಕೋಮುವಾದಕ್ಕೆ ಮಣೆ ಹಾಕುವಷ್ಟು ದಡ್ಡರಲ್ಲ. ಪ್ರತಿ ಚುನಾವಣೆಯಲ್ಲೂ ಅಳೆದು ತೂಗಿ ಯಾರಿಗೆ ಯಾವ ಸಂದರ್ಭದಲ್ಲಿ ಏನು ಸಂದೇಶ ಕೊಡಬೇಕೋ ಕೊಡುವಷ್ಟು ಪ್ರಜ್ಞಾವಂತರಾಗಿದ್ದಾರೆ.

ಗುಜರಾತ್ ಮಾದರಿಯಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಬಹುದು ಎಂಬುದು ಒಂದುಕಡೆಯಾದರೆ ಒಂದಿಷ್ಟು ಹಳಬರನ್ನು ಕೈಬಿಟ್ಟು ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಪರ-ವಿರೋಧದ ಚರ್ಚೆಯು ಪಕ್ಷದ ವಲಯದಲ್ಲಿ ಆರಂಭವಾಗಿದೆ.

2 ಮತ್ತು 3ನೇ ಹಂತದ ಕಾರ್ಯಕರ್ತರನ್ನು ಬೆಳೆಸಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಈವರೆಗೂ ಪಕ್ಷವನ್ನು ಜಾತಿ ಮತ, ಧರ್ಮ ಮೀರಿ ಬೆಳೆಸಿದ್ದ ಯಡಿಯೂರಪ್ಪ ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ

ರಾಜಕಾರಣದಲ್ಲಿ ಇರುತ್ತೇನೆ ಎಂದು ಅವರು ಹೇಳುತ್ತಿದ್ದರಾದರೂ ಪಕ್ಷ ಮುನ್ನಡೆಸುವಷ್ಟು ಸಾಮಥ್ರ್ಯವಿಲ್ಲ. ಅದಕ್ಕೆ ವಯಸ್ಸಿನ ಕಾರಣವೂ ಇರಬಹುದು. ಇದೀಗ 2ನೇ ಮತ್ತು 3ನೇ ಹಂತದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹೊಸ ಮುಖಗಳಿಗೆ ಈ ಬಾರಿ ಮಣೆ ಹಾಕಿದರೂ ಅಚ್ಚರಿಯಿಲ್ಲ.

70 ವರ್ಷ ದಾಟಿದವರು ಹಾಗೂ ಸತತ 4ರಿಂದ 6 ಬಾರಿ ಗೆದ್ದಿರುವವರಿಗೆ ಕೋಕ್ ಕೊಟ್ಟು ಪಕ್ಷ ನಿಷ್ಠೆ, ಸಂಘ ಪರಿವಾರದ ಹಿನ್ನಲೆಯುಳ್ಳವರನ್ನು ಕಣಕ್ಕಿಳಿಸಬೇಕೆಂಬ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ರ್ನಿಷ್ಟವಾಗಿ ಇಂಥವರಿಗೆ ಟಿಕೆಟ್ ಕೈ ತಪ್ಪಲಿದೆ ಎಂದು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲವಾದರೂ ಹಿರಿಯರಿಗೆ ಹಾಗೂ ಗುರುತರ ಆರೋಪ ಇರುವವರನ್ನು ಕೈ ಬಿಟ್ಟರೂ ಅಚ್ಚರಿ ಇಲ್ಲ.

ಸಚಿವರಾದ ಗೋವಿಂದ ಕಾರಜೋಳ, ವಿ.ಸೋಮಣ್ಣ, ಆರ್.ಅಶೋಕ್, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಸೇರಿದಂತೆ ಒಂದೂವರೆ ಡಜನ್ ಶಾಸಕರಿಗೆ ಟಿಕೆಟ್ ನೀಡುವುದೇ ಡೋಲಾಯಮಾನ ಎನ್ನಲಾಗುತ್ತಿದೆ.

ಧೋನಿ ಈಗಲೂ ನನಗೆ ಮಾರ್ಗದರ್ಶಕ ; ಕೊಹ್ಲಿ

ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಅಳೆದು ತೂಗಿಯೇ ಪ್ರತಿಯೊಬ್ಬರಿಗೂ ಟಿಕೆಟ್ ಕೊಡುವುದರಿಂದ ಅಂತಿಮ ಪಟ್ಟಿ ಪ್ರಕಟವಾಗುವವರೆಗೂ ತುದಿಗಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ.

Anti-governance, BJP, MLAs, tickets, high command,

Articles You Might Like

Share This Article