ಬಾಯ್ಕಾಟ್ ಸಂಸ್ಕೃತಿ ವಾತಾವರಣ ಹಾಳುಮಾಡುತ್ತದೆ : ಅನುರಾಗ್ ಠಾಕೂರ್

Social Share

ನವದೆಹಲಿ,ಜ.28- ಕೆಲವು ಚಲನಚಿತ್ರಗಳನ್ನು ಗುರಿಯಾಗಿಸಿಕೊಂಡು ಬಹಿಷ್ಕಾರ ಸಂಸ್ಕೃತಿಯನ್ನು ಹಾಕುವುದನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಖಂಡಿಸಿದ್ದಾರೆ.

ಭಾರತವು ಮೃದು ಶಕ್ತಿಯಾಗಿ ತನ್ನ ಪ್ರಭಾವವನ್ನು ಹೆಚ್ಚಿಸಲು ಉತ್ಸುಕವಾಗಿರುವ ಸಮಯದಲ್ಲಿ, ಭಾರತೀಯ ಚಲನಚಿತ್ರಗಳು ಪ್ರಪಂಚದ ಮೂಲೆಮೂಲೆಗಳಲ್ಲಿ ಪ್ರಭಾವ ಬೀರುತ್ತಿರುವ ಸಂದರ್ಭದಲ್ಲಿ ಬಾಯ್ಕಾಟ್ ಚರ್ಚೆಯು ವಾತಾವರಣವನ್ನು ಹಾಳುಮಾಡುತ್ತದೆ ಎಂದು ಸುದ್ದಿಗಾರರ ಬಹಿಷ್ಕಾರದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದ್ದಾರೆ

ಒಂದು ವೇಳೆ ಯಾರಿಗಾದರೂ ಸಿನಿಮಾ ಸಮಸ್ಯೆ ಎದುರಾದರೆ ಸಂಬಂಧಪಟ್ಟ ಸರ್ಕಾರಿ ಇಲಾಖೆಯೊಂದಿಗೆ ಮಾತನಾಡಿ ಸಿನಿಮಾ ನಿರ್ಮಾಪಕರ ಜತೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದೂ ಅವರು ಹೇಳಿದ್ದಾರೆ.
ಈ ಹಿಂದೆ ನಟ ಅಕ್ಷಯ್ ಕುಮಾರ್ ಅವರ ಸಾಮ್ರಾಟ್ ಪೃಥ್ವಿರಾಜ್, ಅಮೀರ್ ಖಾನ್ ಅವರ ಲಾಲ್‍ಸಿಂಗ್ ಚಡ್ಡಾ ಮತ್ತು ದೀಪಿಕಾ ಪಡುಕೋಣೆ ಅವರ ಪದ್ಮಾವತ್ ಚಿತ್ರಗಳು ಬಹಿಷ್ಕಾರದ ಕರೆಗಳನ್ನು ಎದುರಿಸಿದ್ದವು.

ಸೃಜನಶೀಲತೆಗೆ ಯಾವುದೇ ನಿರ್ಬಂಧಗಳು ಇರಬಾರದು, ಒಟಿಟಿ ಪ್ಲಾಟ್‍ಫಾರ್ಮ್‍ಗಳಲ್ಲಿನ ವಿಷಯದ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೂರುಗಳನ್ನು ಸ್ವೀಕರಿಸುತ್ತದೆ, ಆದರೆ ಸುಮಾರು 95 ಪ್ರತಿಶತ ಕುಂದುಕೊರತೆಗಳನ್ನು ನಿರ್ಮಾಪಕರ ಮಟ್ಟದಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಇತರವು ವಿಷಯದ ಪ್ರಕಾಶಕರ ಸಂಘದ ಎರಡನೇ ಹಂತದಲ್ಲಿ ಪರಿಹರಿಸಲ್ಪಡುತ್ತವೆ ಎಂದು ಅವರು ಹೇಳಿದರು.

Anurag Thakur, movie, boycott, culture,

Articles You Might Like

Share This Article