ಪ್ರತಿ ವರ್ಷ ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ : ಅನುಷ್ಕಾ ಸುನಕ್

Social Share

ಲಂಡನ್,ನ.26- ಭಾರತದಲ್ಲಿ ಕುಟುಂಬವಿದೆ. ಮನೆ ಮತ್ತು ಸಂಸ್ಕøತಿಗಳು ಜೊತೆಯಾಗಿವೆ. ಪ್ರತಿ ವರ್ಷ ನಾನು ಅಲ್ಲಿಗೆ ಹೋಗಲು ಬಯಸುತ್ತೇನೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಪುತ್ರಿ ಅನುಷ್ಕಾ ಸುನಕ್ ಹೇಳಿದ್ದಾರೆ.

ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ರಂಗ್-2022 ಕಾರ್ಯಕ್ರಮದಲ್ಲಿ ಕೂಚುಪುಡಿ ನೃತ್ಯ ಪ್ರದರ್ಶನ ಮಾಡಿದ ಅನುಷ್ಕಾ ಸುನಕ್ ಭಾರತೀಯ ಸಂಸ್ಕøತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾಳೆ.

ನನ್ನ ಕುಟುಂಬ ಭಾರತ ಮೂಲದಿಂದ ಬಂದಿದೆ. ನಾನು ಕೂಚುಪುಡಿ ಮತ್ತು ನೃತ್ಯವನ್ನು ಪ್ರೀತಿಸುತ್ತೇನೆ. ನೃತ್ಯ ಪ್ರದರ್ಶನದ ವೇಳೆ ನಮ್ಮೆಲ ಚಿಂತೆಗಳು ಮತ್ತು ಒತ್ತಡಗಳು ದೂರವಾಗುತ್ತವೆ ಹಾಗೂ ನೃತ್ಯದ ವೇಳೆ ಜೊತೆಗಾರರು ಸಮೀಪದಲ್ಲೇ ಇರುತ್ತಾರೆ. ನಾನು ಯಾವಾಗಲೂ ವೇದಿಕೆಯ ಮೇಲಿರುವುದನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದಾಳೆ.

ಜೈಲಲ್ಲಿ AAP ಸಚಿವನ ದರ್ಬಾರ್ ಕುರಿತ ಮತ್ತೊಂದು ವಿಡಿಯೋ ರಿಲೀಸ್

ರಂಗ್-2022 ಕಾರ್ಯಕ್ರಮದಲ್ಲಿ 4ರಿಂದ 85 ವರ್ಷದೊಳಗಿನ ನೂರಕ್ಕೂ ಹೆಚ್ಚು ಕಲಾವಿದರು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದರು. ಅದರಲ್ಲಿ ಅನುಷ್ಕಾ ಸುನಕ್ ಅರುಣಿಮಾ ಅವರ ಜೊತೆ ಕೂಚುಪುಡಿ ನೃತ್ಯ ಪ್ರದರ್ಶನ ಮಾಡಿದ್ದಾಳೆ.

“ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ ನಾವು ವಿಶ್ವಕಪ್ ಬಹಿಷ್ಕರಿಸಬೇಕಾಗುತ್ತದೆ”

ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಬೃಹತ್ ಜನಸ್ತೋಮದ ಜೊತೆ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಕೂಡ ಜೊತೆಯಲ್ಲಿದ್ದರು. ಜೊತೆಗೆ ಅನುಷ್ಕಾ ಅವರ ಅಜ್ಜ-ಅಜ್ಜಿ ಕೂಡ ಭಾಗವಹಿಸಿದ್ದರು. ಅಕ್ಷತಾ ಮೂರ್ತಿ ಇನೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರಿಯಾಗಿದ್ದಾರೆ.

Anushka Sunak, India, family, culture, Kuchipudi,

Articles You Might Like

Share This Article