ಲಕ್ನೋ,ಜ.21- ನವದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಲಕ್ನೋಗೆ ಹಿಂತಿರುಗಿದ ಅಪರ್ಣಾ ಬಿಷ್ಟ್ ಯಾದವ್ ಅವರು ಮಾವ ಹಾಗೂ ಸಮಾಜವಾದಿ ಪಕ್ಷ (ಎಸ್‍ಪಿ)ದ ಹಿರಿಯ ಧುರೀಣ ಮುಲಾಯಂ ಸಿಂಗ್ ಯಾದವ್ ಅವರ ಆಶೀರ್ವಾದ ಪಡೆದರು.
ತಾವು ಮುಲಾಯಂಸಿಂಗ್ ಯಾದವ್ ಅವರ ಕಾಲು ಮುಟ್ಟಿ ನಮಸ್ಕರಿಸುತ್ತಿರುವ ಚಿತ್ರವನ್ನು ಅಪರ್ಣಾ ಟ್ವಿಟರ್ ಅಕೌಂಟ್‍ನಲ್ಲಿ ಷೇರ್ ಮಾಡಿದ್ದಾರೆ.
