ಬಂಡವಾಳ ಹೂಡಿಕೆ ಯೋಜನೆಗಳ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳ ನೇಮಕ

Social Share

ಬೆಂಗಳೂರು,ನ.5- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದದ ಯೋಜನೆ ಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗಳ ಅನುಷ್ಠಾನಕ್ಕಾಗಿ ಜಿಲ್ಲಾವಾರು ಸಮನ್ವಯ ಸಮಿತಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಇದರಿಂದ ಯೋಜನೆಗಳ ಅನುಷ್ಠಾನ ಕಾಲ ಮಿತಿಯೊಳಗೆ ಬರಲಿದೆ ಎಂದರು.

ಇಲಾಖೆ ಹಂತದ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ನಡುವೆ ಸಮನ್ವಯತೆ ಇದ್ದರೆ ನಮ್ಮ ನಿರೀಕ್ಷೆಗೆ ತಕ್ಕಂತೆ ಯೋಜನೆ ಅನುಷ್ಠಾನ ಮಾಡಬಹುದು. ಈಗಾಗಲೇ ಇಲಾಖಾ ಹಂತದಲ್ಲಿ ಚರ್ಚೆ ನಡೆದಿದೆ. ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಹೂಡಿಕೆದಾರರ ಸಮಾವೇಶದಲ್ಲಿ ಮಾಡಿ ಕೊಂಡಿರುವ ಒಪ್ಪಂದಗಳನ್ನು ತೊಂಬತ್ತು ದಿನಗಳೊಳಗೆ ಅನುಮೋದನೆ ನೀಡುತ್ತೇವೆ. ಇದಕ್ಕಾಗಿ ಸಿಎಂ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯಿದೆ. ಯೋಜನೆ ಸಾಮಥ್ರ್ಯಕ್ಕನುಗುಣವಾಗಿ ಅನುಮೋದನೆ ನೀಡಲಾಗುವುದು. ಈಗಾಗಲೇ ಅಧಿಕಾರಿಗಳು ಕೂಡ ಕಾರ್ಯಾನ್ಮುಖರಾಗಿದ್ದಾರೆ ಎಂದು ಅವರು ವಿವರಿಸಿದರು.

ಕೇವಲ ಒಪ್ಪಂದ ಮಾಡಿಕೊಂಡು ಹಾಗೆ ಬಿಡುವುದಿಲ್ಲ. ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲೇಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅನುಮೋದನೆ ಕೊಡುತ್ತೇವೆ ಎಂದರು.

ಒಡಂಬಡಿಕೆ ಮಾಡಿಕೊಂಡಿರುವ ಉದ್ಯಮಿಗಳು ಪೂರ್ಣ ಮಟ್ಟದಲ್ಲಿ ಅನುಷ್ಠಾನ ಮಾಡುವ ಸಾಧ್ಯತೆ ಇದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಜಿಮ್ನಲ್ಲಿ ಉದ್ಯಮಿಗಳು ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ಬಂಡವಾಳ ಹೂಡಿಕೆ ಮಾಡುತ್ತಿದ್ದರು. ಮೊದಲ ಬಾರಿಗೆ ಈ ಬಾರಿಯ ಜಿಮ್ನಲ್ಲಿ ಸರ್ಕಾರದ ಜತೆ ಮಾಡಿಕೊಂಡಿರುವ ಒಡಂಬಡಿಕೆಯಲ್ಲಿ ಶೇ.90ರಷ್ಟು ಬೆಂಗಳೂರಿನಿಂದ ಆಚೆ ಹೂಡಿಕೆಯಾಗಲಿದೆ ಎಂದರು.

ಎರಡು ಮತ್ತು ಮುರನೇ ಹಂತದ ನಗರಗಳನ್ನು ಕೇಂದ್ರೀಕರಿಸಿ ಹೂಡಿಕೆ ಮಾಡುವಂತೆ ನಾವು ಮನವರಿಕೆ ಮಾಡಿದೆವು. ಮೈಸೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ 2 ಮತ್ತು 3ನೇ ಹಂತದ ನಗರಗಳಲ್ಲೂ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.

ಯೋಜನೆಗಳ ಅನುಷ್ಠಾನಕ್ಕಾಗಿ ನಾವು 50 ಸಾವಿರ ಎಕರೆ ಲ್ಯಾಂಡ್ಬ್ಯಾಂಕ್ ಇಟ್ಟಿದ್ದೇವೆ. 50 ಲಕ್ಷ, ಒಂದು ಕೋಟಿ, 10 ಕೋಟಿ, 50 ಕೋಟಿ, 100 ಕೋಟಿ, 500 ಕೋಟಿ ಹೀಗೆ ಯೋಜನೆ ಸಾಮಥ್ರ್ಯಕ್ಕೆ ತಕ್ಕಂತೆ ಅನುಮೋದನೆ ನೀಡಲಾಗುವುದು ಎಂದರು.

500 ಕೋಟಿಗಿಂತ ಹೆಚ್ಚು ಮೊತ್ತದ ಯೋಜನೆಗಳಿಗೆ ಸಿಎಂ ನೇತೃತ್ವದ ಉನ್ನತಾಕಾರಿ ಮಟ್ಟದ ಸಮಿತಿ ಅನುಮೋದನೆ ಕೊಡಲಿದೆ. ಉಳಿದ ಮೊತ್ತದ ಯೋಜನೆಗಳಿಗೆ ಇಲಾಖಾ ಹಂತದಲ್ಲಿ ನೀಡಲಾಗುವುದು. ಉದ್ಯಮಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎನ್ಒಸಿಗಳನ್ನು ನೀಡಲಾಗುತ್ತದೆ. ಜತೆಗೆ ವಾಣಿಜ್ಯ ಬ್ಯಾಂಕ್ಗಳಿಂದಲೂ ಸಾಲ ದೊರಕುವಂತೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.

ಹನಿಟ್ರ್ಯಾಪ್ ಗ್ಯಾಂಗ್ ಅಂದರ್ : ಇಬ್ಬರು ಮಹಿಳೆಯರು ಸೇರಿ, 10 ಮಂದಿ ಅರೆಸ್ಟ್

ಈ ಬಾರಿಯ ಜಿಮ್ ನಿರೀಕ್ಷೆಗೂ ಮೀರಿದ ಯಶಸ್ವಿಯಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದ ಬಂಡವಾಳ ಹೂಡಿಕೆಯಾಗಿದೆ. ಇಡೀ ದೇಶದಲ್ಲೇ ಕರ್ನಾಟಕ ಕೈಗಾರಿಕಾ ಸ್ನೇಹಿ ರಾಜ್ಯ ಎಂಬುದಕ್ಕೆ ಇದು ಸಾಕ್ಷಿ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೂರು ದಿನಗಳ ಕಾಲ ನಡೆದ ಜಿಮ್ನಲ್ಲಿ ಒಟ್ಟು 9,81,784 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಇದರಲ್ಲಿ 2,83,415 ಲಕ್ಷ ಕೋಟಿಯ 68 ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. 5,41,369 ಲಕ್ಷ ಕೋಟಿ ಮೊತ್ತದ 57 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಇದರಲ್ಲಿ ಅದಾನಿ ಸಮೂಹ ಸಂಸ್ಥೆಯವರು ಇಂಧನ, ನಗರ ಪ್ರದೇಶಗಳಲ್ಲಿ ಗ್ಯಾಸ್ಪೈಪ್ ಅಳವಡಿಕೆ, ಸಾರಿಗೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡಿದರೆ, ಜೆಎಸ್ಡಬ್ಲ್ಯೂ ಸಮೂಹ ಸಂಸ್ಥೆಯವರು ಹಸಿರು ಇಂಧನ, ಬಂದರು ಸೇರಿದಂತೆ ಮತ್ತಿತರ ವಲಯಗಳಲ್ಲಿ 57 ಸಾವಿರ ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಅವರು ವಿವರಿಸಿದರು.

Articles You Might Like

Share This Article