ಬೆಂಗಳೂರಿಗೆ ಕರಾಳವಾದ ಏಪ್ರಿಲ್, 1 ಲಕ್ಷ ಸೋಂಕಿತರು 480 ಜನ ಸಾವು..!

ಬೆಂಗಳೂರು,ಏ.19- ಸಿಲಿಕಾನ್ ಸಿಟಿಯಲ್ಲಿ ಏಪ್ರಿಲ್ ತಿಂಗಳು ಗಂಡಾಂತರ ವಾಗಿ ಪರಿಣಮಿಸಿದೆ. ಕಳೆದ 18 ದಿನಗಳಲ್ಲಿ ನಗರದಲ್ಲಿ ಕೊರೊನಾ ರಾಕೆಟ್ ವೇಗದಲ್ಲಿ ಹರಡುತ್ತಿರುವುದರಿಂದ ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಭಾರಿ ಪ್ರಮಾದ ಎದುರಿಸಬೇಕಾಗುತ್ತದೆ.

ಏಪ್ರಿಲ್ ತಿಂಗಳಿಗೂ ಮುನ್ನ ನಿಧಾನವಾಗಿ ಹರಡುತ್ತಿದ್ದ ಮಹಾಮಾರಿ ಈ ತಿಂಗಳಿನಲ್ಲಿ ಆರ್ಭಟಿಸುತ್ತಿದೆ. 18 ದಿನಗಳಲ್ಲಿ ಬರೊಬ್ಬರಿ 108902 ಮಂದಿ ಕೊರೊನಾ ಮಹಾಮಾರಿಗೆ ತುತ್ತಾಗಿದ್ದಾರೆ. ಮಹಾಮಾರಿ ವೇಗವಾಗಿ ಹರಡುವುದರ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿರುವುದರಿಂದ
ಜನ ಮನೆಯಿಂದ ಹೊರ ಬರಲು ಹೆದರುವಂತಹ ಸನ್ನಿವೇಶ ನಿರ್ಮಾಣವಾಗಿದೆ.

18 ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿರುವುದಲ್ಲದೆ 493 ಮಂದಿ ಬಲಿಯಾಗಿದ್ದಾರೆ. ಇದರ ಜೊತೆಗೆ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸೋಂಕು ಹೆಚ್ಚುವುದರ ಜೊತೆಗೆ ಸಾವು-ನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜನ ವಿನಾಕಾರಣ ಮನೆ ಬಿಟ್ಟು ಹೊರ ಬರುವ ಮುನ್ನ ಯೋಚಿಸಬೇಕಾದ ಅವಶ್ಯಕತೆ ಇದೆ.