ಬೆಂಗಳೂರು, ಫೆ.16- ಏಪ್ರಿಲ್ 1ರಿಂದ ದುಡಿಯುವ ಮಹಿಳೆಯರಿಗೆ ಹಾಗೂ ಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸೌಧದ ಮುಂಭಾಗದಲ್ಲಿ ಕೆಎಸ್ ಆರ್ ಟಿಸಿಯ ಅಂಬಾರಿ ಉತ್ಸವ ಬಸ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲಾ ಬಸ್ ಗಳನ್ನು ಜಾರಿಗೆ ತರಬೇಕು. ಈಗಿರುವ ಬಸ್‍ಗಳ ಸಂಚಾರವನ್ನು ಆರಂಭ ಮಾಡಬೇಕು ಎಂದು ನಿರ್ದೇಶಿಸಿದರು.
ಶಾಲೆ ಆರಂಭವಾಗುವ ಸಂದರ್ಭಕ್ಕೆ ಪ್ರತಿ ತಾಲೂಕಿನಲ್ಲಿ ಕನಿಷ್ಟ ಐದಾರು ಬಸ್ ಸಂಚಾರ ಆರಂಭ ಮಾಡಬೇಕು. ಸರ್ಕಾರ ನೌಕರ ವರ್ಗ ಹಾಗೂ ಆಡಳಿತ ಮಂಡಳಿ ಜೊತೆಗು ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ
ಸಿಬ್ಬಂದಿಯ ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಟ್ಟಿದ್ದಾರೆ. ನಮ್ಮ ಹಣಕಾಸಿನ ಇತಿಮಿತಿ ನೋಡಿಕೊಂಡು ನೌಕರರನ್ನು ಕರೆದು ಮಾತನಾಡಿ ಸೂಕ್ತ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದರು.
ಖಾಸಗಿಯವರು ಲಾಭದಾಯಕ ಮಾರ್ಗಗಳಲ್ಲಿ ಮಾತ್ರ ಸಂಚಾರ ನಡೆಸುತ್ತಾರೆ. ನಾವು ಸೇವಾ ವಲಯದಲ್ಲಿಯೂ ಸಂಚಾರ ಮಾಡಬೇಕಾಗುತ್ತದೆ. ಕೆಲವು ವಾಣಿಜ್ಯ ಮಾರ್ಗಗಳಲ್ಲಿ ಹೆಚ್ಚಿನ ಮಾರ್ಗ ಸಂಚಾರ ಮಾಡಬೇಕು. ಸರ್ಕಾರ ಕೊವಿಡ್ ಸಂದರ್ಭದಲ್ಲಿ ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ 4600 ಕೋಟಿ ರೂ. ನೀಡಿದೆ. ನಿಗಮಗಳು ಸೋರಿಕೆ ತಡೆದು ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡಬೇಕು ಎಂದು ಸೂಚಿಸಿದರು.
v
ಹೊಸ ಸಂಚಾರದ ವಿಶೇಷವಾಗಿರುವ ಅಂಬಾರಿ ಉತ್ಸವ ಬಸ್ಸನ್ನು ಲೋಕಾರ್ಪಣೆ ಮಾಡಿದ್ದೇವೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದ್ದು, ರೈಲ್ವೆ ಮಾದರಿಯಲ್ಲಿ ವ್ಯವಸ್ಥೆ ಇದೆ. ಹಿಂದೆ ವೊಲ್ವೊ ಬಸ್ ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ಅರಿತು ಈ ಬಸ್ ಗಳಲ್ಲಿ ಮಲ್ಟಿ ಆಕ್ಸೆಲ್ ವಿಧಾನದ ಮೂಲಕ ಉತ್ತಮ ವ್ಯಸವ್ಥೆ ಕಲ್ಪಿಸಲಾಗಿದೆ. ರಾತ್ರಿ ಬಸ್ ಸೇವೆಗೆ ಇಂತಹ ಹೆಚ್ಚಿನ ವ್ಯವಸ್ಥೆ ಅಗತ್ಯವಿದೆ ಎಂದರು.
ನಾನು ಕೆಂಪ್ ಬಸ್‍ನಲ್ಲಿ ಹತ್ತಿ ಕಾಲೆಜಿಗೆ ಹೋಗಿದ್ದೇನೆ. ಆಗ ಡ್ರೈವರ್ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಇತ್ತು. ಗ್ರಾಮಿಣ ಜನರು ತಮ್ಮ ಪ್ರಯಾಣವನ್ನು ಬಸ್‍ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಕೆಎಸ್‍ಆರ್‍ಟಿಸಿ ಅಧ್ಯಕ್ಷರಾದ ಶಾಸಕ ಚಂದ್ರಪ್ಪ, ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎನ್. ವಿ.ಪ್ರಸಾದ್, ಕೆಎಸ್‍ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿವೃತ್ತ ಐಎಎಸ್ ಅಕಾರಿ ಎಂ.ಆರ್.ಶ್ರೀನಿವಾಸಮೂರ್ತಿ ಮತ್ತಿತರರು ಇದ್ದರು.