ಮಳೆಯಲ್ಲಿ ನೆನೆದುಕೊಂಡೆ ಅಭಿವೃದ್ಧಿ ಯೋಜನೆ ಲೋಕಾರ್ಪಣೆಗೊಳಿಸಿದ ಸಚಿವರು

Social Share

ತೀರ್ಥಹಳ್ಳಿ, ಆ.9- ಮತಕ್ಷೇತ್ರ ತೀರ್ಥಹಳ್ಳಿಯ ನೆರಟುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಹಳ ದಿನಗಳ ಬೇಡಿಕೆಯಾದ ಮೊಬೈಲ್ ಟವರ್‍ನ್ನು ಮಂಜೂರು ಮಾಡಿಸಿ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಲೋಕಾರ್ಪಣೆ ಗೊಳಿಸಿದರು.
ಟವರ್ ಇಲ್ಲದ ಕಾರಣ ಸುಮಾರು ಏಳರಿಂದ ಎಂಟು ಕಿಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನತೆ ಎದುರಿಸುತ್ತಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹಾರವಾಗಿದ್ದು, ಸಮಸ್ಯೆಗೆ ಪರಿಹಾರ ಒದಗಿಸಿದ ಸಚಿವರಿಗೆ, ಗ್ರಾಮಸ್ಥರು, ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ದೂರವಾಣಿ ಯ ಮೂಲಭೂತ ಸೌಕರ್ಯವನ್ನು ಒದಗಿಸುವುದರ ಮೂಲಕ, ಈ ಭಾಗದ ಜನತೆಗೆ ಅತ್ಯಗತ್ಯ ವಾದ ಸೌಲಭ್ಯ ದೊರಕಿದೆ ಹಾಗೂ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ತಿಳಿಸಿದರು.

ಕಳೆದ ನಾಲ್ಕು ವರ್ಷದಲ್ಲಿ ನೆರಟುರು ಪಂಚಾಯ್ತಿ ವ್ಯಾಪ್ತಿ ಯಲ್ಲಿ ಸುಮಾರು 6.8 ಕೋಟಿ ರೂ. ವಿವಿಧ ಅಭಿವೃದ್ದಿ ಕಾರ್ಯ ಗಳಿಗೆ ಮಂಜೂರಾಗಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣ ಗೊಂಡಿವೆ. ಈ ಮೂಲಕ ಗ್ರಾಮಸ್ಥರು ನಮ್ಮ ಮೇಲೆ ಇರಿಸಿದ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಹಾಗೂ ಅದನ್ನು ತೀರಿಸಲು ಕತಿಬದ್ದನಾಗಿದ್ದೇನೆ ಎಂದು ಸಚಿವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಗಳ ಗೊಡು ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಬೋರ್ವೆಲ್‍ನ್ನೂ ಇದೇ ಸಂದರ್ಭದಲ್ಲಿ ಸೇವೆಗೆ ಅರ್ಪಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ಸತೀಶ್, ಟಿಎಪಿಎಂಸಿ ಅಧ್ಯಕ್ಷ ನಾಗರಾಜ ಶೆಟ್ಟಿ, ಬಿಜೆಪಿ ನಾಯಕ ಸಿ.ಬಿ.ಈಶ್ವರ್ ಒಳಗೊಂಡಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Articles You Might Like

Share This Article