5 ವರ್ಷಗಳ ನಂತರ ಚೇತೇಶ್ವರ್ ಪೂಜಾರಗೆ ಅರ್ಜುನ ಪ್ರಶಸ್ತಿ ಪ್ರದಾನ

Social Share

ನವದೆಹಲಿ, ನ. 20- ಭಾರತ ರಾಷ್ಟ್ರೀಯ ತಂಡದ ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರಗೆ 5 ವರ್ಷಗಳ ನಂತರ ಅರ್ಜುನ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚೇತೇಶ್ವರ ಪೂಜಾರ ಕ್ರಿಕೆಟ್ ರಂಗದಲ್ಲಿ ತೋರಿದ ಸಾಧನೆ ಪರಿಗಣಿಸಿ 2017ರಲ್ಲಿ ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಬಿಡುವಿಲ್ಲದ ಕ್ರಿಕೆಟ್ ಸರಣಿಯಿಂದಾಗಿ ಪೂಜಾರ ಅವರು ಈ ಪ್ರಶಸ್ತಿ ಪಡೆಯಲು ಆಗಿರಲಿಲ್ಲ.

ಆದರೆ ನಿನ್ನೆ ಕೇಂದ್ರ ಕ್ರೀಡಾ ಸಚಿವ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಚೇತೇಶ್ವರ ಪೂಜಾರಗೆ ಅರ್ಜುನ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಚೇತೇಶ್ವರ ಪೂಜಾರ, ಟ್ವೀಟ್ ಮೂಲಕ ಸಂತಸ ವ್ಯಕ್ತ ಪಡಿಸಿದ್ದು, ` ನನ್ನ ಸುದೀರ್ಘವಾದ ಕ್ರಿಕೆಟ್ ಸರಣಿಯಿಂದಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ, ಆದರೆ ಕೊನೆಗೂ ನಾನು ಆ ಪ್ರಶಸ್ತಿ ಸ್ವೀಕರಿಸಿರುವುದಕ್ಕೆ ಸಂತಸವಾಗುತ್ತಿದೆ.

ವೋಟರ್ ಐಡಿ ಹಗರಣ ಕಾಂಗ್ರೆಸ್‍ನವರಿಗೇ ತಿರುಗುಬಾಣವಾಗುತ್ತೆ : ಬೊಮ್ಮಾಯಿ

ಈ ಪ್ರಶಸ್ತಿಗೆ ನನ್ನ ಹೆಸರನ್ನು ಶಿಫಾರಸ್ಸು ಮಾಡಿದ ಭಾರತೀಯ ಕ್ರೀಡಾ ಸಂಸ್ಥೆ, ಬಿಸಿಸಿಐ ಹಾಗೂ ಪ್ರಶಸ್ತಿ ನೀಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‍ಗೆ ನನ್ನ ಹೃತ್ಪೂರ್ವಕ ಧನ್ಯವಾದ’ ತಿಳಿಸುತ್ತೇನೆ ಎಂದು ಪೂಜಾರ ಹೇಳಿದ್ದಾರೆ.

ಪೂಜಾರ ಅವರು ಇತ್ತೀಚೆಗೆ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ಸೌರಾಷ್ಟ್ರ ಪರ ಆಡುತ್ತಿದ್ದು, ಮುಂದಿನ ತಿಂಗಳು ಬಾಂಗ್ಲಾದೇಶ ನಡೆಯಲಿರುವ 2 ಟೆಸ್ಟ್ ಪಂದ್ಯಗಳಲ್ಲಿ ಭಾರತ ಎ ತಂಡವನ್ನು ಪ್ರತಿನಿಸಲಿದ್ದಾರೆ.
96 ಟೆಸ್ಟ್ ಪಂದ್ಯಗಳಲ್ಲಿ ಚೇತೇಶ್ವರ ಪೂಜಾರ 6792 ರನ್ ಹಾಗೂ 5 ಏಕದಿನ ಪಂದ್ಯಗಳಿಂದ 51 ರನ್ ಗಳಿಸಿದ್ದಾರೆ.

ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

Arjuna, award, Cheteshwar Pujara,

Articles You Might Like

Share This Article