ಅರ್ಕಾವತಿ ನದಿಯಲ್ಲಿ ವ್ಯಾಪಕ ಕೊಳಚೆ ಕಳೆ

ಬೆಂಗಳೂರು, ಮಾ.3- ದೇವನಹಳ್ಳಿಯ ನಂದಿ ಬೆಟ್ಟದಲ್ಲಿ ಹುಟ್ಟಿ ಕಾವೇರಿ ನದಿ ಸೇರುವ ಅರ್ಕಾವತಿ ನದಿಯಲ್ಲಿ ಕೊಳಚೆ ನೀರಿನಲ್ಲಿ ಬೆಳೆಯುವ ಕಳೆ ವ್ಯಾಪಕವಾಗಿದೆ. ನದಿಯ ಉದ್ದಕ್ಕೂ ಕಳೆ ಹರಡಿಕೊಂಡಿದೆ. ದಿನದಿಂದ ದಿನಕ್ಕೆ ಕಳೆಯ ವ್ಯಾಪ್ತಿ ವಿಸ್ತರಣೆಯಾಗುತ್ತಿದ್ದು, ನೀರಿನಲ್ಲಿ ಬೆಳೆಯುವ ತಾವರೆ ಸೇರಿದಂತೆ ಇತರ ಸಸ್ಯಗಳು ಮರೆಯಾಗುತ್ತಿವೆ. ಚರಂಡಿಯಂತಹ ಕೊಳಚೆ ನೀರಿನಲ್ಲಿ ಬೆಳೆಯುವ ಹಯಸಿಂತ್ ಎಂಬ ಕಳೆ ನದಿಯಲ್ಲಿ ಕಂಡುಬರುತ್ತಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕಲುಷಿತಗೊಂಡು ವರ್ಷಗಳೇ ಕಳೆದಿವೆ. ಹೀಗಾಗಿ ಕುಡಿಯುವ ನೀರಿಗೆ ಬಳಕೆಯಾಗುತ್ತಿಲ್ಲ. … Continue reading ಅರ್ಕಾವತಿ ನದಿಯಲ್ಲಿ ವ್ಯಾಪಕ ಕೊಳಚೆ ಕಳೆ