ಅರ್ಕಾವತಿ ಭೂ ಸ್ವಾದೀನ ವಿವಾದ : ಮೇಲ್ಮನೆಯಲ್ಲಿ ಕೋಲಾಹಲ

Social Share

ಬೆಂಗಳೂರು,ಫೆ.21- ಸರ್ಕಾರ ಸ್ವಾದೀನ ಪಡಿಸಿದ ಭೂಮಿಗೆ ಖಾಸಗಿ ವ್ಯಕ್ತಿಗಳಿಗೆ ಪರಿಹಾರ ಪಾವತಿಸಿ ಅಕ್ರಮವೆಸಗಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ವಿಧಾನಪರಿಷತ್‍ನಲ್ಲಿಂದು ಕಾವೇರಿದ ಚರ್ಚೆ ನಡೆದು ಸಚಿವರು ಮತ್ತು ಸದಸ್ಯರ ನಡುವೆ ವಾಗ್ವಾದ, ಪ್ರತಿಪಕ್ಷಗಳ ಧರಣಿ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಮರಿತಿಬ್ಬೇಗೌಡ ಅವರ ಪ್ರಶ್ನಿಗೆ ಉತ್ತರ ನೀಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಬೆಂಗಳೂರಿನ ಉತ್ತರ ತಾಲ್ಲೂಕಿನ ನಾಗಾವಾರ ಗ್ರಾಮದ ಸರ್ವೆ ನಂ.135/1ರಲ್ಲಿ 32ಗುಂಟೆ ವಿಸ್ತೀರ್ಣದ ಭೂಮಿ ಇದ್ದು, ಅರ್ಕಾವತಿ ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ ಅದನ್ನು 2003ರಲ್ಲಿ ಸ್ವಾೀಧಿನ ಪಡಿಸಿಕೊಳ್ಳಲಾಯಿತು. ಅದರಲ್ಲಿ 12 ಗುಂಟೆ ಭೂಮಿಯಲ್ಲಿ ಕಟ್ಟಡ ಹಾಗೂ ವಾಣಿಜ್ಯ ಸಂಕೀರ್ಣಗಳು ಇವೆ ಎಂಬ ಕಾರಣಕ್ಕಾಗಿ ಕೈ ಬಿಡಲಾಗಿದೆ. 20 ಗುಂಟೆಯನ್ನು ಸ್ವಾೀಧಿನ ಪಡಿಸಿಕೊಳ್ಳಲಾಗಿದೆ.

2004ರಿಂದ 18ರವರೆಗೂ ಈ ಭೂಮಿಗೆ ಪರಿಹಾರ ಪಾವತಿಸಿರಲಿಲ್ಲ. ಸರ್ಕಾರದ ನಿಯಾಮವಳಿಗಳ ಪ್ರಕಾರ ಐದು ವರ್ಷಗಳ ಒಳಗೆ ಭೂಮಿಯನ್ನು ಸ್ವಾೀಧಿನಕ್ಕೆ ತೆಗೆದುಕೊಳ್ಳದೇ ಇದ್ದರೆ ಪ್ರಾಥಮಿಕ ಅಧಿಸೂಚನೆ ರದ್ದುಗೊಳ್ಳುತ್ತದೆ ಎಂಬ ಕಾರಣಕ್ಕೆ 2017ರಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿಸಲಾಗಿದೆ.

ಏ.1ರಿಂದಲೇ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

ಸದರಿ ಭೂಮಿಯನ್ನು ಮೊದಲು ಬಿಡಿಎ ಸ್ವಾೀಧಿನಪಡಿಸಿಕೊಂಡಿದ್ದು, ಅನಂತರ ಮೆಟ್ರೋಗಾಗಿ ಬಿಎಂಆರ್‍ಸಿಎಲ್ ಸ್ವಾೀಧಿನ ಮಾಡಿಕೊಂಡಿದೆ. ಈ ರೀತಿ ಬೇರೆ ಬೇರೆ ಸಂಸ್ಥೆಗಳು ಬೇರೆ ಬೇರೆ ಉದ್ದೇಶಕ್ಕೆ ಹಲವು ಬಾರಿ ಸ್ವಾೀಧಿನ ಅಧಿಸೂಚನೆಗಳನ್ನು ಹೊರಡಿಸಿವೆ. 15 ವರ್ಷಗಳಿಂದ ಪರಿಹಾರ ಪಾವತಿಯಾಗಿರಲಿಲ್ಲ.

ಜಮೀನಿನ ಮಾಲೀಕರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ 2017ರಲ್ಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಉತ್ತರವನ್ನು ಒಪ್ಪದ ಸದಸ್ಯ ಮರಿತಿಬ್ಬೇಗೌಡ, ಬಿಡಿಎ ಸ್ವಾೀಧಿನದ ಅಧಿಸೂಚನೆ ರದ್ದುಗೊಳ್ಳದ ಹೊರೆತು ಕಾನೂನು ಅಭಿಪ್ರಾಯ ಆಧರಿಸಿ ಸರ್ಕಾರದ ವಶದಲ್ಲಿದ್ದ ಭೂಮಿಗೆ ಪರಿಹಾರ ಪಾವತಿಸಲು ಸಾಧ್ಯವೇ ? ಅಧಿಕಾರಿಗಳು ಜಮೀನಿನ ಮಾಲೀಕರೊಂದಿಗೆ ಶಾಮೀಲಾಗಿ 22 ಕೋಟಿ ರೂ. ಪರಿಹಾರ ನೀಡಿದ್ದಾರೆ. ಇದರಲ್ಲಿ ಅವ್ಯವಹಾರ, ಅಕ್ರಮಗಳು ನಡೆದಿವೆ. ಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ.

ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸದಸ್ಯರು ಮಿತಿದಾಟಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವ ಯೋಗ್ಯತೆಯೂ ಅವರಿಗಿಲ್ಲ. ಇದು ನಮ್ಮ ಕಾಲದಲ್ಲಿ ನಡೆದಿರುವ ಪ್ರಕ್ರಿಯೆಗಳಲ್ಲ ಎಂದು ಸಚಿವ ನಿರಾಣಿ ತಿರುಗೇಟು ನೀಡಿದರು.

ಈ ಹಂತದಲ್ಲಿ ಸಚಿವರು ಮತ್ತು ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರನ್ನು ಸಮಾಧಾನಪಡಿಸಲು ಸಭಾಪತಿ ಬಸವರಾಜ ಹೊರಟ್ಟಿ ಸತತ ಪ್ರಯತ್ನ ನಡೆಸಿದರು. ಆದರೆ, ಫಲ ನೀಡಲಿಲ್ಲ. ಕೊನೆಗೆ ಸದಸ್ಯ ಮಂಜುನಾಥ್ ಬಂಡಾರಿ ಅವರನ್ನು ಮುಂದಿನ ಪ್ರಶ್ನೆ ಕೇಳಲು ಆಹ್ವಾನಿಸಿದರು.

ಕೋಪೋದ್ರಿಕ್ತರಾಗಿ ಮಾತನಾಡುತ್ತಿದ್ದ ಸದಸ್ಯ ಮರಿತಿಬ್ಬೇಗೌಡ, ಸಚಿವರು ತಮಗೆ ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಆದರೆ, ಈಗಾಗಲೇ ಬೇರೆಯವರನ್ನು ಪ್ರಶ್ನೆ ಕೇಳಲು ಅನುವು ಮಾಡಿಕೊಟ್ಟಿರುವುದರಿಂದ ಉತ್ತರ ಪಡೆಯಲು ಅವಕಾಶ ಇಲ್ಲ ಎಂದು ಸಭಾಪತಿ ಅವಕಾಶ ನಿರಾಕರಿಸಿದರು.

ಸರ್ಕಾರದ ಹಣ ದುರುಪಯೋಗವಾಗಿದೆ. ಸಚಿವರು ಉತ್ತರ ಹೇಳಲಬೇಕು ಎಂದು ಪಟ್ಟು ಹಿಡಿದ ಮರಿತಿಬ್ಬೇಗೌಡ ಧರಣಿ ನಡೆಸಿದರು. ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‍ನ ಸದಸ್ಯರು ಮರಿತಿಬ್ಬೇಗೌಡರ ಪರವಾಗಿ ಮಾತನಾಡಿ, ಸಚಿವರ ಉತ್ತರಕ್ಕೆ ಆಗ್ರಹಿಸಿದರು.

BIG NEWS : ಬೀದಿ ಗುದ್ದಾಟಕ್ಕಿಳಿದ ರೋಹಿಣಿ – ರೂಪಾಗೆ ವರ್ಗಾವಣೆ ಶಿಕ್ಷೆ ನೀಡಿದ ಸರ್ಕಾರ

ಆದರೆ, ಸಭಾಪತಿ ಅವಕಾಶ ನೀಡದೇ ಇದ್ದುದ್ದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ ಮಧ್ಯ ಪ್ರವೇಶ ಮಾಡಿ, ಸದಸ್ಯರು ಸಚಿವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಮಿತಿ ದಾಟಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹೀಗಾಗಿ ಉತ್ತರ ಪಡೆದುಕೊಳ್ಳಲು ಅವಕಾಶ ನೀಡಬೇಡಿ ಎಂದು ಸಭಾಪತಿಯವರಿಗೆ ಮನವಿ ಮಾಡಿದರು.

ಇದರಿಂದ ಕೆರಳಿದ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸಚೇತಕರು ಪೀಠಕ್ಕೆ ತಾಕೀತು ನಡೆಸುತ್ತಿರುವುದು ಸರಿಯಲ್ಲ. ಸದನ ನಡೆಸುತ್ತಿರುವುದು ಸಭಾಪತಿಯವರೋ ಅಥವಾ ಸರ್ಕಾರವೋ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದಾದಾಗ ಸಚೇತಕ ನಾರಾಯಣಸ್ವಾಮಿ ಹಾಗೂ ಹರಿಪ್ರಸಾದ್ ನಡುವೆ ಮಾತಿನ ಚಕಮಕಿ ನಡೆಯಿತು.

ನಾರಾಯಸ್ವಾಮಿ ಅವರು, ನೀವು ಹೇಳಿದಂತೆ ಸದನ ನಡೆಸಲು ಸಾಧ್ಯವಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಸವಾಲಿನ ದಾಟಿಯಲ್ಲಿ ಮಾತನಾಡಿದರು. ಇದರಿಂದ ಸಿಟ್ಟಾದ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠದ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಸದಸ್ಯರ ಪ್ರಶ್ನೆಗೆ ಸಚಿವರು ಉತ್ತರ ಕೊಡಬೇಕು ಮತ್ತು ಸಚೇತಕರು ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಚಾಲನೆ

ಈಗಾಗಲೇ ರೂಲಿಂಗ್ ನೀಡಿ ಪ್ರಶ್ನೆ ಕೇಳಲು ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಅದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ ಸಭಾಪತಿಯವರು, ಸದಸ್ಯ ಮರಿತಿಬ್ಬೇಗೌಡ ಅವರು, ಬೇರೊಂದು ರೂಪದಲ್ಲಿ ಸೂಚನೆ ಕಳುಹಿಸಿದರೆ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ಅದನ್ನು ಆಧರಿಸಿ ವಿಪಕ್ಷ ಸದಸ್ಯರು ಧರಣಿಯನ್ನು ಹಿಂಪಡೆದರು.

Arkavati, land acquisition, Legislative Council,

Articles You Might Like

Share This Article