ಆಕಸ್ಮಿಕ ಗ್ರೆನೇಡ್ ಸ್ಫೋಟದಲ್ಲಿ ಸೇನಾ ಕ್ಯಾಪ್ಟನ್, ಮತ್ತು ಜೆಸಿಒ ಸಾವು

Social Share

ಜಮ್ಮು, ಜು.18- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯಲ್ಲಿ ಆಕಸ್ಮಿಕ ಗ್ರೆನೇಡ್ ಸ್ಫೋಟ ಘಟನೆಯಲ್ಲಿ ಸೇನಾ ಕ್ಯಾಪ್ಟನ್ ಮತ್ತು ಜೂನಿಯರ್ ಕಮಿಷನ್ಡ ಅಧಿಕಾರಿ ಮೃತಪಟ್ಟಿದ್ದಾರೆ.

ಸೇನಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೆ ಭಾನುವಾರ ತಡರಾತ್ರಿ ಪೂಂಚ್ ಮೆಂಧರ್ ಸೆಕ್ಟರ್‍ನಲ್ಲಿ ಈ ಘಟನೆ ನಡೆದಿದ್ದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಸೇನಾ ಕ್ಯಾಪ್ಟನ್ ಮತ್ತು ಸುಬೇದಾರ್ (ಜೆಸಿಒ) ಅವರನ್ನು ತಕ್ಷಣ ಹೆಲಿಕಾಪ್ಟರ್‍ನಲ್ಲಿ ತುರ್ತು ಚಿಕಿತ್ಸೆಗಾಗಿ ಉಧಮ್‍ಪುರಕ್ಕೆ ಕರೆದೊಯ್ಯಲಾಯಿತು ಎಂದು ಅವರು ಹೇಳಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ

Articles You Might Like

Share This Article