ಶ್ರೀನಗರ,ಮಾ.6-ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ನಕಲಿ ಎನ್‍ಕೌಂಟರ್‍ನಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರಿಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೆಲವು ದಿನಗಳ ಹಿಂದೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಕಲಿ ಎನ್‍ಕೌಂಟರ್‍ನ ಆರೋಪಿ ಕ್ಯಾಪ್ಟನ್ ಭೂಪಿಂದರ್ ಸಿಂಗ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜುಲೈ 2020 ರಲ್ಲಿ, ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾದಲ್ಲಿ ಮೂವರು ಕಾರ್ಮಿಕರು ಕೊಲ್ಲಲ್ಪಟ್ಟರು. ಅವರು ಪಾಕಿಸ್ತಾನಿ ಭಯೋತ್ಪಾದಕರು ಎಂದು ಸೇನಾ ಅಧಿಕಾರಿಗಳು ಹೇಳಿಕೊಂಡಿದ್ದರು ಮತ್ತು ಅವರ ಹತ್ಯೆಯೊಂದಿಗೆ ಜಿಲ್ಲೆಯಲ್ಲಿ ಭಯೋತ್ಪಾದಕ ಬೆದರಿಕೆಯನ್ನು ತೊಡೆದುಹಾಕಲಾಯಿತು ಎಂದು ಬಿಂಬಿಸಲಾಗಿತ್ತು.
ಆದರೆ ಕೆಲವು ದಿನಗಳ ನಂತರ, ಕೊಲೆಯಾದ ಮೂವರು ಯುವಕರು ರಾಜೌರಿ ಜಿಲ್ಲೆಯ ಸೋದರ ಸಂಬಂಧಿಗಳಾಗಿದ್ದು, ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಕುಟುಂಬ ವರ್ಗದವರು ಪ್ರತಿಭಟನೆಗಿಳಿದ ನಂತರ ಸೇನೆಯು ಪ್ರಕರಣದ ತನಿಖೆಗೆ ಆದೇಶಿಸಿತು.
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಲುಕ್‍ಔಟ್ ನೋಟಿಸ್
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ ಅಥವಾ ಎಎಫ್‍ಎಸ್‍ಪಿಎ ಅಡಿಯಲ್ಲಿ ಪಡೆಗಳು ಅಧಿಕಾರವನ್ನು ಮೀರಿದೆ ಮತ್ತು ಸುಪ್ರೀಂ ಕೋರ್ಟ್ ಅನುಮೋದಿಸಿದ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದೆ ಎಂದು ಸೇನೆಯು ಸ್ಥಾಪಿಸಿದ ತನಿಖಾ ನ್ಯಾಯಾಲಯವು ಕಂಡುಹಿಡಿದಿದೆ. ಎನ್‍ಕೌಂಟರ್ ಸೈಟ್‍ನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೇನೆಯು ಹೇಳಿಕೊಂಡಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಈಗಾಗಲೇ ಹತ್ಯೆಯ ಕುರಿತು ಆರೋಪಪಟ್ಟಿ ಸಲ್ಲಿಸಿದ್ದು, ಸೇನಾ ಕ್ಯಾಪ್ಟನ್ ಮತ್ತು ಇಬ್ಬರು ನಾಗರಿಕರನ್ನು ಹೆಸರಿಸಿದ್ದಾರೆ. ಸಂಚು ರೂಪಿಸಿ, ರಜೌರಿಯಿಂದ ಮೂವರು ಸೋದರ ಸಂಬಂಧಿಗಳನ್ನು ಅಪಹರಿಸಿ ಕೊಂದು ಹಾಕಿ ಅವರನ್ನು ಉಗ್ರ ಪಾಕಿಸ್ತಾನಿ ಭಯೋತ್ಪಾದಕರೆಂದು ಬಿಂಬಿಸಲಾಗಿತ್ತು ಎಂದು ಆರೋಪಿಸಲಾಗಿದೆ.
Army Court, Gives, Life, Jail, Officer, Fake Encounter, Case, Kashmir,