75ನೇ ಸೇನಾ ದಿನ : ಬೆಂಗಳೂರಲ್ಲಿ ಮೈನವಿರೇಳಿಸಿದ ಸೈನಿಕರ ಶಕ್ತಿ ಪ್ರದರ್ಶನ

Social Share

ಬೆಂಗಳೂರು,ಜ.15- ಭಾರತೀಯ ಸೇನೆಯ 75ನೇ ಸೇನಾ ದಿನದ ಪ್ರಯುಕ್ತ ನಗರದಲ್ಲಿ ವೀರಯೋಧರ ದೇಶಭಕ್ತಿ ವಿಜೃಂಭಿಸಿದೆ.ರಾಷ್ಟ್ರ ರಾಜಧಾನಿಯ ಹೊರಗೆ ಇದೇ ಮೊದಲ ಭಾರಿಗೆ ಮಹತ್ವದ ಕಾರ್ಯಕ್ರಮ ನಡೆಯುತ್ತಿದ್ದು ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಮೈನವಿರೇಳಿಸುವ ಫಥಸಂಚಲನ ನಡೆದಿದ್ದು ಬೆಂಗಳೂರಿನ ಜನರು ಪುಳಕಿತಗೊಂಡಿದ್ದಾರೆ.

ಹಲಸೂರು ಬಳಿಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‍ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಬೆಳಿಗ್ಗೆ ಗೌರವ ನಮನ ಸಲ್ಲಿಸುವ ಮೂಲಕ ಸೇನಾ ದಿನ ಆಚರಣೆ ಶುರುವಾಯಿತು.
ನಂತರ ಸೇನೆಯ 8 ಕಂಟಿಂಜೆಂಟïಗಳು ನಡೆಸಿಕೊಡಲಿರುವ ಪರೇಡ್‍ಯನ್ನು ಸಾರ್ವಜನಿಕರು ವೀಕ್ಷಿಸುವ ಅವಕಾಶ ಕಲ್ಲಿಸಲಿದ್ದಾರೆ.

ಐದು ರೆಜಿಮೆಂಟïಗಳ ಬ್ಯಾಂಡ್‍ರೊಮಾಂಚನ ಮೂಡಿಸಿತ್ತು.ಅಶ್ವಾರೋಹಿ ತುಕಡಿ ಈ ಬಾರಿಯ ಪರೇಡ್ ನ ವಿಶೇಷ ಆಕರ್ಷಣೆಯಾಗಿತ್ತುಇದೇ ವೇಳೆ ವಿವಿಧ ಕಾರ್ಯಾಚರಣೆಗಳಲ್ಲಿ ವೀರ ಸೈನಿಕರು ತೋರಿದ ಧೈರ್ಯ ಮತ್ತು ತ್ಯಾಗವನ್ನು ಸ್ಮರಿಸಿ ಜನರಲ್ ಮನೋಜ್ ಪಾಂಡೆ ಸಾಧಕ ಸೈನಿಕರಿಗೆ ಶೌರ್ಯ ಪದಕಗಳನ್ನು ಗೌರವಿಸಿದರು.

ಧ್ರುವ್ ಮತ್ತು ರುದ್ರ ಹೆಲಿಕಾಪ್ಟಗಳು ಆಕರ್ಷಕ ಕಸರತ್ತುಗಳನ್ನು ಪ್ರದರ್ಶಿಸುವ ಜೊತೆಗೆ ವಜ್ರ ಸ್ವಯಂಚಾಲಿತ ಗನ್‍ಗಳು ರಾಕೆಟïಗಳು, ಟಿ-90 ಟ್ಯಾಂಕರ್‍ಗಳು, ಬಿಎಂಪಿ-2 ಇನ್‍ಫೆಂಟ್ರಿ ಯುದ್ಧ ವಾಹನಗಳು, ತಂಗುಸ್ಕಾ ವಾಯುರಕ್ಷಣಾ ವ್ಯವಸ್ಥೆ, 155 ಎಂಎಂ ಬೋಫೋರ್ಸ್ ಗನ್, ಸ್ವಾತಿ ರಾಡಾರ್ ಸೇರಿದಂತೆ ಹಲವು ಅತ್ಯಾಧುನಿಕ ಯುದ್ಧೋಪಕರಗಳು ಪ್ರದರ್ಶಿಸಲಾಯಿತು

ಎಎಸ್‍ಸಿ ಸೆಂಟರ್‍ಅಂಡ್ ಕಾಲೇಜïನಲ್ಲಿ ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಸೇನಾದಿನದ ಪ್ರಯುಕ್ತ ರೂಪಿಸಿರುವ ವಿಶೇಷ ಲಾಂಛನವನ್ನು ಬಿಡುಗಡೆ ಮಾಡಲಿದ್ದಾರೆ.

ಈ ವೇಳೆ ಸೈನಿಕರು ಟಾರ್ನೆಡೊ ಮೋಟಾರ್ ಸೈಕಲ್ ಇತರ ಕೌಶಲಗಳನ್ನು ಪ್ರದರ್ಶಿಸಲಿದ್ದಾರೆ. ಪ್ಯಾರಾ ಮೋಟಾರ್ ಫ್ಲೈಯಿಂಗ್, ಟೆಂಟ್ ಪೆಗಿಂಗ್, ಡೇರ್ ಡೆವಿಲ್ ಜಂಪ್, ಟೇಕ್ವಾಂಡೋ ಸೇರಿದಂತೆ ಹಲವು ಸಮರ ಕಲೆಗಳನ್ನು ಸೈನಿಕರು ಪ್ರದರ್ಶಿಸಲಿದ್ದಾರೆ.

ಪ್ರಧಾನಿ ಶುಭಾಶಯ :
ಎಲ್ಲ ಭಾರತೀಯರಿಗೂ ಸೇನೆಯ ಬಗ್ಗೆ ಹೆಮ್ಮೆಯಿದೆ. ಸೇನೆಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಹಾರೈಸಿದ್ದಾರೆ.

ಸೇನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಸೈನಿಕರಿಗೆ, ನಿವೃತ್ತ ಸೈನಿಕರು ಮತ್ತು ಸೇನಾ ಕುಟುಂಬದವರಿಗೆ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ನಮ್ಮ ದೇಶದ ಸುರಕ್ಷೆ ಖಾತ್ರಿಪಡಿಸುವುದಲ್ಲದೇ, ಸಂಕಷ್ಟ ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸುತ್ತಾರೆ ಅವರಿಗೆ ದೇಶವಾಸಿಗಳ ಶುಭಾಶಯ ಎಂದು ತಿಳಿಸಿದ್ದಾರೆ.

#ArmyDayParade, #75th#ArmyDay, #Bengaluru,

Articles You Might Like

Share This Article