ಗಡಿಯಲ್ಲಿ ಒಳನುಸುಳಲೆತ್ನಿಸಿದ ಪಾಕ್ ಉಗ್ರರ ವಿಫಲ ಯತ್ನ

Social Share

ಜಮ್ಮು, ಆ.23 – ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲಾಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಗುಂಪಿನ ಒಳನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಮಧ್ಯರಾತ್ರಿ ನೌಶೇರಾ ಸೆಕ್ಟರ್‍ನಲ್ಲಿ ನುಸುಳುಕೋರರ ಚಲನವಲನ ಕಂಡುಬಂದಿದ್ದು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಕ್ಷಣಾಪಡೆ ವಕ್ತಾರರು ತಿಳಿಸಿದ್ದಾರೆ.

ಭಯೋತ್ಪಾದಕರ ಗುಂಪು ಗಡಿಯಾಚೆಯಿಂದ ಕತ್ತಲೆಯಲ್ಲಿ ಹೊದಿಕೆ ಮುಚ್ಚಿಕೊಂಡು ನೌಶೇರಾದ ಲಾಮ್ನ ಪುಖಾನಿರ್ ಗ್ರಾಮಕ್ಕೆ ನುಸುಳಲು ಪ್ರಯತ್ನಿಸಿತು. ರಾತ್ರಿ 10 ಗಂಟೆ ವೇಳೆ ಭಯೋತ್ಪಾದಕನೊಬ್ಬ ನೆಲಬಾಂಬ್ ಮೇಲೆ ಕಾಲಿಟ್ಟಿದ್ದು ಅದು ಸ್ಫೋಟಗೊಂಡಿದ್ದು ಎಚ್ಚೆತ್ತ ಸೇನಾ ಪಡೆಗಳು ಕೆಲವರನ್ನು ಹಿನೆಟ್ಟಿಸಿದೆ ಎಂದು ಹೇಳಲಾಗುತ್ತಿದೆ.

ಕಾರ್ಯಾಚರಣೆ ಮುಂದುವರೆದಿದ್ದು ಸ್ಫೋಟದ ಘಟನೆಯಲ್ಲಿ ಬಯೋತ್ಪಾದಕರು ಗಾಯಗೊಂಡಿದ್ದಾರೆಯೇ ಅಥವಾ ಸಾವನ್ನಪ್ಪಿದ್ದಾರೆಯೇ ಎಂಬುದು ತಕ್ಷಣಕ್ಕೆ ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಶೇರಾ ಸೆಕ್ಟರ್‍ನಲ್ಲಿ ಇತ್ತೀಚಿನ ಒಳನುಸುಳುವಿಕೆ ಪ್ರಯತ್ನಕ್ಕೆ ಸದ್ಯ ತಡಯಲಾಗಿದೆ ಇತ್ತೀಚೆಗೆ ಪಾಕಿಸ್ತಾನಿ ಸೇನೆಯ ಗುಪ್ತಚರ ಘಟಕದಲ್ಲಿ ಕೆಲಸ ಮಾಡಿದ ಹೆಚ್ಚು ತರಬೇತಿ ಪಡೆದ ಲಷ್ಕರ್‍ ಉಗ್ರನನ್ನು ಕಳೆದ ಭಾನುವಾರ ಸೇನಾಪಡೆ ಬಂಧಿಸಿತ್ತು.

ಆತನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೋಟ್ಲಿಯ ಸಬ್ಜ್ಕೋಟ್ ಗ್ರಾಮದ ನಿವಾಸಿ ತಬಾರಕ್ ಹುಸೇನ್ (32)ಎಂದು ತಿಳಿದುಬಮದಿದ್ದು ಕಳೆದ ಆರು ವರ್ಷಗಳಲ್ಲಿ ಎರಡನೇ ಬಾರಿಗೆ ಗಡಿಯಾಚೆಯಿಂದ ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ಬಂಧಿಲಾಗಿದೆ. ಈತನ ವಿಚಾರಣೆ ವೇಳೆ ಪಾಕಿಸ್ತಾನದ ಸಂಚು ಬಯಲಾಗಿದೆ.

Articles You Might Like

Share This Article